ಮಜಾವಾಣಿ ಸಂದರ್ಶನ: ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ
ಕನ್ನಡ ಚಿತ್ರರಂಗ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ
ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ ವಿಷಾದ : ಮಜಾವಾಣಿ ಸಂದರ್ಶನ.
ಮಜಾವಾಣಿ: ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.
ದಮ್ಮುಲ ಕೃಷ್ಣಪ್ಪ: ಕೆಮ್ಮು ಕಲೆ ಹೊಸದೇನಲ್ಲ. ಮನುಷ್ಯ ಮಾತನಾಡಲು ಕಲಿಯುವ ಮುನ್ನವೇ ಕೆಮ್ಮುತ್ತಿದ್ದ. ಶಿಶುರ್ವೇತ್ತಿ-ಪಶುರ್ವೇತ್ತಿ ಎನ್ನುವಂತೆ ಹಸುಳೆಗಳಿಂದ ಹಿಡಿದು ಪಶು-ಪ್ರಾಣಿಗಳವರೆಗೆ ಕೆಮ್ಮದವರು ಅಥವಾ ಕೆಮ್ಮಿಗೆ ಸ್ಪಂದಿಸದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ವೈಶಿಷ್ಟ್ಯವೇನೆಂದರೆ ನಾನು ಈ ಕೆಮ್ಮಲ್ಲಿ ಕೊಂಚ ಮಟ್ಟಿಗೆ ನೈಪುಣ್ಯವನ್ನು ಸಾಧಿಸಿದ್ದೇನೆ ಅಷ್ಟೇ.
ಮವಾ : ಹಿನ್ನೆಲೆ-ಕೆಮ್ಮಿನ ರಂಗಕ್ಕೆ ನಿಮ್ಮ ಆಗಮನ ಹೇಗಾಯಿತು?
ದ.ಕೃ. : ನಾನು ಚಿಕ್ಕಂದಿನಿಂದಲೆ ಕೆಮ್ಮುತ್ತಿದ್ದೆ. ನಮ್ಮ ತಾಯಿಯ ಪ್ರಕಾರ ನಾನು ಮೂರು ತಿಂಗಳ ಶಿಶುವಾಗಿದ್ದಾಗಲೇ ಕೆಮ್ಮುತ್ತಿದ್ದನಂತೆ. ನಿಜ ಹೇಳಬೇಕೆಂದರೆ ನಾನು ಕೆಮ್ಮು ಕಲಾರಂಗಕ್ಕೆ ನನಗೇ ಅರಿವಿಲ್ಲದಂತೆ ಶಿಶು ಕಲಾವಿದನಾಗಿ ಆಗಮಿಸಿದೆ. ನನಗೆ ಆರು ತಿಂಗಳಿದ್ದಾಗ ನಮ್ಮ ಊರಿನಲ್ಲಿ ಶೂಟಿಂಗ್ ನಡಿಯುತ್ತಿತ್ತು. ನಮ್ಮಮ್ಮ ನನ್ನನ್ನೂ ಕರೆದುಕೊಂಡು ಶೂಟಿಂಗ್ ನೋಡಲು ಹೋಗಿದ್ದರು. ಒಂದು ದೃಶ್ಯಕ್ಕೆ ಕೆಮ್ಮುವ ಹಸುಳೆಯ ಅಗತ್ಯವಿತ್ತು. ನಿರ್ದೇಶಕರು ನಮ್ಮಮ್ಮನೊಡನೆ ಮಾತನಾಡಿ ನನಗೆ ಪ್ರಪ್ರಥಮ ಬಾರಿಗೆ ಚಲನ ಚಿತ್ರವೊಂದರಲ್ಲಿ ಕೆಮ್ಮಲು ಅವಕಾಶ ಮಾಡಿಕೊಟ್ಟರು. ಹೀಗೆ ಕ್ಯಾಮರ ಮುಂದೆ ಶುರುವಾದ ನಂಟು ಈಗ ಹಿನ್ನೆಲೆ ಕೆಮ್ಮು ಕಲೆಯಲ್ಲಿ ನಿಂತಿದೆ.
ಮ.ವಾ. : ನೀವು ಈವರೆಗೆ ಯಾವ ಯಾವ ನಟರಿಗೆ ಹಿನ್ನೆಲೆಯಲ್ಲಿ ಕೆಮ್ಮಿದ್ದೀರಿ?
ದ.ಕೃ. : ಇಂದಿನ ಚಿತ್ರರಂಗದ ಬಹುಪಾಲು ಹೆಸರಾಂತ ನಾಯಕ ನಟರಿಗೆ ನಾನು ಹಿನ್ನೆಲೆಯಲ್ಲಿ ಕೆಮ್ಮಿದ್ದೇನೆ. ಹಾಡನ್ನು ಹೇಗೆ ಎಲ್ಲ ನಟರೂ ಹಾಡಬಲ್ಲರು. ಆದರೂ ಉತ್ತಮ ಗಾಯನಕ್ಕೆ ಹಿನ್ನೆಲೆ ಗಾಯಕರು ಬೇಕೇ ಬೇಕು. ಹಾಗೆಯೇ ಭಾವ ಪೂರ್ಣವಾದ ಕೆಮ್ಮಿಗೆ ಹಿನ್ನೆಲೆ ಕೆಮ್ಮು ಕಲಾವಿದರು ಅವಶ್ಯ. ನಾನು ಈ ಕಲೆಯನ್ನು ಎಷ್ಟು ಸಿದ್ಧಿಸಿಕೊಂಡಿದ್ದೇನೆಂದರೆ, ಇತ್ತೀಚೆಗೆ ನಾನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರವೊಂದಕ್ಕೆ ಹಿನ್ನೆಲೆಯಲ್ಲಿ ಕೆಮ್ಮುತ್ತಿದ್ದಾಗ ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಹಿರಿಯ ನಟ ಉಪೇಂದ್ರ ಗಾಬರಿಯಾಗಿ ನೀರು ಮತ್ತು ಕಾಫ್ ಡ್ರಾಪ್ಸ್ ಕೊಡುವಂತೆ ತಮ್ಮ ಸಹಾಯಕರಿಗೆ ಅಣತಿಯಿತ್ತರು.
ಮ.ವಾ. : ನೀವು ಕಾಫ್ ಡ್ರಾಪ್ಸ್ ಬಳಸುತ್ತೀರೇ?
ದ.ಕೃ. : ಖಂಡಿತಾ ಇಲ್ಲ. ಗಾಯಕರಿಗೆ ಹೇಗೆ ಕೆಲವೊಂದು ಖಾದ್ಯ ಪದಾರ್ಥಗಳು ವರ್ಜ್ಯವೋ ಹಾಗೆಯೇ ಕಾಫ್ ಆರ್ಟಿಸ್ಟುಗಳಿಗೆ ಕಾಫ್ ಡ್ರಾಪ್ಸ್ ನಿಷಿದ್ಧ. ಉದಯೋನ್ಮುಖ ಕೆಮ್ಮು ಕಲಾವಿದರಿಗೆ ನನ್ನ ಕಿವಿ ಮಾತು: ನೀವು ಈ ರಂಗದಲ್ಲಿ ಉನ್ನತಿ ಸಾಧಿಸಬೇಕೆಂದಿದ್ದಲ್ಲಿ ಕಾಫ್ ಡ್ರಾಪ್ಸ್ನಿಂದ ದೂರವಿರಿ.
ಮ.ವಾ. : ನಿಮ್ಮ ಈ ಪ್ರತಿಭೆಗೆ ಕನ್ನಡ ಚಿತ್ರರಂಗದಿಂದ ಸರ್ಕಾರದಿಂದ ಸಹಕಾರ ದೊರಕಿದೆಯೇ?
ದ.ಕೃ. : ಬೇಸರದ ಸಂಗತಿಯೆಂದರೆ ಚಿತ್ರರಂಗವಾಗಲೀ ಸರ್ಕಾರವಾಗಲೀ ಕೆಮ್ಮು ಕಲೆಗೆ ಸಹಕಾರ ನೀಡುವುದಿರಲಿ ಇದನ್ನು ಒಂದು ಕಲೆಯೆಂದೇ ಗುರುತಿಸಿಲ್ಲ. ಕನ್ನಡ ಚಿತ್ರರಂಗ ಹಂಸಗೀತೆಯಂತಹ ಸಂಗೀತ ಪ್ರಧಾನ ಚಿತ್ರವನ್ನು ನಿರ್ಮಿಸಿದೆ. ಆದರೆ ಇಲ್ಲಿಯವರೆಗೆ ಒಂದೂ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ. ಕೆಮ್ಮು ಪ್ರಧಾನ ಚಿತ್ರ ಬೇಡ, ಕನಿಷ್ಠ ತೆಲುಗಿನ ಶಂಕಾರಾಭರಣಂ ತರಹದ ಚಿತ್ರ ಸಹ ನಿರ್ಮಿಸಿಲ್ಲ. ಆ ಚಿತ್ರದ ಕ್ಲೈಮ್ಯಾಕ್ಸಿನಲ್ಲಿ ಆ ಚಿತ್ರದ ನಾಯಕ ಸಂಗೀತ ಹಾಡುತ್ತಾ ಮಧ್ಯದಲ್ಲಿಯೇ ಕೆಮ್ಮುತ್ತಾ ಮರಣಿಸುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಕೆಮ್ಮಿಗೆ ಅಷ್ಟೊಂದು ಮಹತ್ವ ಕೊಡುವ ಒಂದೇ ಒಂದು ಚಿತ್ರ ಸಹ ಇನ್ನೂ ನಿರ್ಮಾಣವಾಗಿಲ್ಲ. ಹಾಗೆಯೇ ನಮ್ಮ ಚಿತ್ರರಂಗದಲ್ಲಿ ಕೆಮ್ಮನ್ನು ಬಹುಮಟ್ಟಿಗೆ ನೆಗೆಟೀವ್ ಆಗಿ, ಎಂದರೆ ರೋಗದ ಕುರುಹಾಗಿ ಚಿತ್ರೀಕರಿಸಲಾಗುತ್ತದೆ. ಸಂಗೀತ ಹೇಗೋ ಹಾಗೆಯೇ ಕೆಮ್ಮು ಸಹ ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಯಾವಾಗಲೂ ನೆಗೆಟೀವ್ ಆಗಿಯೇ ನೋಡುವುದು ಬಿಡಬೇಕು.
ಜನರಲ್ಲಿ ಕೆಮ್ಮು ಕಲೆಯ ಬಗೆಗೆ ಅರಿವು ಮೂಡಿಸಿ ಅದನ್ನು ಪೋಷಿಸಲು ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸರ್ಕಾರ ನೆರವು ನೀಡಿದರೆ ಅದನ್ನು ಸ್ಥಾಪಿಸಲು ನಾನು ಈಗಲೇ ಸಿದ್ಧ.
(Earlier published in Thats Kannada)
ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ ವಿಷಾದ : ಮಜಾವಾಣಿ ಸಂದರ್ಶನ.
ಮಜಾವಾಣಿ: ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.ದಮ್ಮುಲ ಕೃಷ್ಣಪ್ಪ: ಕೆಮ್ಮು ಕಲೆ ಹೊಸದೇನಲ್ಲ. ಮನುಷ್ಯ ಮಾತನಾಡಲು ಕಲಿಯುವ ಮುನ್ನವೇ ಕೆಮ್ಮುತ್ತಿದ್ದ. ಶಿಶುರ್ವೇತ್ತಿ-ಪಶುರ್ವೇತ್ತಿ ಎನ್ನುವಂತೆ ಹಸುಳೆಗಳಿಂದ ಹಿಡಿದು ಪಶು-ಪ್ರಾಣಿಗಳವರೆಗೆ ಕೆಮ್ಮದವರು ಅಥವಾ ಕೆಮ್ಮಿಗೆ ಸ್ಪಂದಿಸದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ವೈಶಿಷ್ಟ್ಯವೇನೆಂದರೆ ನಾನು ಈ ಕೆಮ್ಮಲ್ಲಿ ಕೊಂಚ ಮಟ್ಟಿಗೆ ನೈಪುಣ್ಯವನ್ನು ಸಾಧಿಸಿದ್ದೇನೆ ಅಷ್ಟೇ.
ಮವಾ : ಹಿನ್ನೆಲೆ-ಕೆಮ್ಮಿನ ರಂಗಕ್ಕೆ ನಿಮ್ಮ ಆಗಮನ ಹೇಗಾಯಿತು?
ದ.ಕೃ. : ನಾನು ಚಿಕ್ಕಂದಿನಿಂದಲೆ ಕೆಮ್ಮುತ್ತಿದ್ದೆ. ನಮ್ಮ ತಾಯಿಯ ಪ್ರಕಾರ ನಾನು ಮೂರು ತಿಂಗಳ ಶಿಶುವಾಗಿದ್ದಾಗಲೇ ಕೆಮ್ಮುತ್ತಿದ್ದನಂತೆ. ನಿಜ ಹೇಳಬೇಕೆಂದರೆ ನಾನು ಕೆಮ್ಮು ಕಲಾರಂಗಕ್ಕೆ ನನಗೇ ಅರಿವಿಲ್ಲದಂತೆ ಶಿಶು ಕಲಾವಿದನಾಗಿ ಆಗಮಿಸಿದೆ. ನನಗೆ ಆರು ತಿಂಗಳಿದ್ದಾಗ ನಮ್ಮ ಊರಿನಲ್ಲಿ ಶೂಟಿಂಗ್ ನಡಿಯುತ್ತಿತ್ತು. ನಮ್ಮಮ್ಮ ನನ್ನನ್ನೂ ಕರೆದುಕೊಂಡು ಶೂಟಿಂಗ್ ನೋಡಲು ಹೋಗಿದ್ದರು. ಒಂದು ದೃಶ್ಯಕ್ಕೆ ಕೆಮ್ಮುವ ಹಸುಳೆಯ ಅಗತ್ಯವಿತ್ತು. ನಿರ್ದೇಶಕರು ನಮ್ಮಮ್ಮನೊಡನೆ ಮಾತನಾಡಿ ನನಗೆ ಪ್ರಪ್ರಥಮ ಬಾರಿಗೆ ಚಲನ ಚಿತ್ರವೊಂದರಲ್ಲಿ ಕೆಮ್ಮಲು ಅವಕಾಶ ಮಾಡಿಕೊಟ್ಟರು. ಹೀಗೆ ಕ್ಯಾಮರ ಮುಂದೆ ಶುರುವಾದ ನಂಟು ಈಗ ಹಿನ್ನೆಲೆ ಕೆಮ್ಮು ಕಲೆಯಲ್ಲಿ ನಿಂತಿದೆ.
ಮ.ವಾ. : ನೀವು ಈವರೆಗೆ ಯಾವ ಯಾವ ನಟರಿಗೆ ಹಿನ್ನೆಲೆಯಲ್ಲಿ ಕೆಮ್ಮಿದ್ದೀರಿ?
ದ.ಕೃ. : ಇಂದಿನ ಚಿತ್ರರಂಗದ ಬಹುಪಾಲು ಹೆಸರಾಂತ ನಾಯಕ ನಟರಿಗೆ ನಾನು ಹಿನ್ನೆಲೆಯಲ್ಲಿ ಕೆಮ್ಮಿದ್ದೇನೆ. ಹಾಡನ್ನು ಹೇಗೆ ಎಲ್ಲ ನಟರೂ ಹಾಡಬಲ್ಲರು. ಆದರೂ ಉತ್ತಮ ಗಾಯನಕ್ಕೆ ಹಿನ್ನೆಲೆ ಗಾಯಕರು ಬೇಕೇ ಬೇಕು. ಹಾಗೆಯೇ ಭಾವ ಪೂರ್ಣವಾದ ಕೆಮ್ಮಿಗೆ ಹಿನ್ನೆಲೆ ಕೆಮ್ಮು ಕಲಾವಿದರು ಅವಶ್ಯ. ನಾನು ಈ ಕಲೆಯನ್ನು ಎಷ್ಟು ಸಿದ್ಧಿಸಿಕೊಂಡಿದ್ದೇನೆಂದರೆ, ಇತ್ತೀಚೆಗೆ ನಾನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರವೊಂದಕ್ಕೆ ಹಿನ್ನೆಲೆಯಲ್ಲಿ ಕೆಮ್ಮುತ್ತಿದ್ದಾಗ ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಹಿರಿಯ ನಟ ಉಪೇಂದ್ರ ಗಾಬರಿಯಾಗಿ ನೀರು ಮತ್ತು ಕಾಫ್ ಡ್ರಾಪ್ಸ್ ಕೊಡುವಂತೆ ತಮ್ಮ ಸಹಾಯಕರಿಗೆ ಅಣತಿಯಿತ್ತರು.
ಮ.ವಾ. : ನೀವು ಕಾಫ್ ಡ್ರಾಪ್ಸ್ ಬಳಸುತ್ತೀರೇ?
ದ.ಕೃ. : ಖಂಡಿತಾ ಇಲ್ಲ. ಗಾಯಕರಿಗೆ ಹೇಗೆ ಕೆಲವೊಂದು ಖಾದ್ಯ ಪದಾರ್ಥಗಳು ವರ್ಜ್ಯವೋ ಹಾಗೆಯೇ ಕಾಫ್ ಆರ್ಟಿಸ್ಟುಗಳಿಗೆ ಕಾಫ್ ಡ್ರಾಪ್ಸ್ ನಿಷಿದ್ಧ. ಉದಯೋನ್ಮುಖ ಕೆಮ್ಮು ಕಲಾವಿದರಿಗೆ ನನ್ನ ಕಿವಿ ಮಾತು: ನೀವು ಈ ರಂಗದಲ್ಲಿ ಉನ್ನತಿ ಸಾಧಿಸಬೇಕೆಂದಿದ್ದಲ್ಲಿ ಕಾಫ್ ಡ್ರಾಪ್ಸ್ನಿಂದ ದೂರವಿರಿ.
ಮ.ವಾ. : ನಿಮ್ಮ ಈ ಪ್ರತಿಭೆಗೆ ಕನ್ನಡ ಚಿತ್ರರಂಗದಿಂದ ಸರ್ಕಾರದಿಂದ ಸಹಕಾರ ದೊರಕಿದೆಯೇ?
ದ.ಕೃ. : ಬೇಸರದ ಸಂಗತಿಯೆಂದರೆ ಚಿತ್ರರಂಗವಾಗಲೀ ಸರ್ಕಾರವಾಗಲೀ ಕೆಮ್ಮು ಕಲೆಗೆ ಸಹಕಾರ ನೀಡುವುದಿರಲಿ ಇದನ್ನು ಒಂದು ಕಲೆಯೆಂದೇ ಗುರುತಿಸಿಲ್ಲ. ಕನ್ನಡ ಚಿತ್ರರಂಗ ಹಂಸಗೀತೆಯಂತಹ ಸಂಗೀತ ಪ್ರಧಾನ ಚಿತ್ರವನ್ನು ನಿರ್ಮಿಸಿದೆ. ಆದರೆ ಇಲ್ಲಿಯವರೆಗೆ ಒಂದೂ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ. ಕೆಮ್ಮು ಪ್ರಧಾನ ಚಿತ್ರ ಬೇಡ, ಕನಿಷ್ಠ ತೆಲುಗಿನ ಶಂಕಾರಾಭರಣಂ ತರಹದ ಚಿತ್ರ ಸಹ ನಿರ್ಮಿಸಿಲ್ಲ. ಆ ಚಿತ್ರದ ಕ್ಲೈಮ್ಯಾಕ್ಸಿನಲ್ಲಿ ಆ ಚಿತ್ರದ ನಾಯಕ ಸಂಗೀತ ಹಾಡುತ್ತಾ ಮಧ್ಯದಲ್ಲಿಯೇ ಕೆಮ್ಮುತ್ತಾ ಮರಣಿಸುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಕೆಮ್ಮಿಗೆ ಅಷ್ಟೊಂದು ಮಹತ್ವ ಕೊಡುವ ಒಂದೇ ಒಂದು ಚಿತ್ರ ಸಹ ಇನ್ನೂ ನಿರ್ಮಾಣವಾಗಿಲ್ಲ. ಹಾಗೆಯೇ ನಮ್ಮ ಚಿತ್ರರಂಗದಲ್ಲಿ ಕೆಮ್ಮನ್ನು ಬಹುಮಟ್ಟಿಗೆ ನೆಗೆಟೀವ್ ಆಗಿ, ಎಂದರೆ ರೋಗದ ಕುರುಹಾಗಿ ಚಿತ್ರೀಕರಿಸಲಾಗುತ್ತದೆ. ಸಂಗೀತ ಹೇಗೋ ಹಾಗೆಯೇ ಕೆಮ್ಮು ಸಹ ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಯಾವಾಗಲೂ ನೆಗೆಟೀವ್ ಆಗಿಯೇ ನೋಡುವುದು ಬಿಡಬೇಕು.
ಜನರಲ್ಲಿ ಕೆಮ್ಮು ಕಲೆಯ ಬಗೆಗೆ ಅರಿವು ಮೂಡಿಸಿ ಅದನ್ನು ಪೋಷಿಸಲು ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸರ್ಕಾರ ನೆರವು ನೀಡಿದರೆ ಅದನ್ನು ಸ್ಥಾಪಿಸಲು ನಾನು ಈಗಲೇ ಸಿದ್ಧ.
(Earlier published in Thats Kannada)

4 Comments:
lol. Very nice. Your parody is at multiple layers. Thanks for making my day. :).
ಇಡಿಯ ಕೆಮ್ಬರಹವನ್ನು ಕೆಮ್ಮುತ್ತಲೇ ಓದಿ ಕೆಮ್ ಕಲಾವಿದರಿಗೆ ದಮ್ಮಿನ ಪ್ರೋತ್ಸಾಹ ನೀಡಿದ್ದೇನೆ. ನೀವೂ ಸಹ ಈ ಸಂದರ್ಶನವನ್ನು ಕೆಮ್ಮುತ್ತಲೇ ಮಾಡಿದ್ದೀರೆಂದು ಕೆಮ್ಮುತ್ತಲೇ ನಂಬಿದ್ದೇನೆ
idee sandarshanada bagge yaaroo kemmangilla. :-)
ಚಂದ್ರ, ಶಾನಿ ಮತ್ತು ಗಣೇಶ್ ಕೆ,
ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಸಂಖ್ಯೆಯನ್ನು ೧.೫ ರಿಂದ ೪.೫ಕ್ಕೆ ಏರಿಸಿದ್ದಕ್ಕೆ ವಂದನೆಗಳು.
ಓದುಗರ ಸಂಖ್ಯೆ ಏರಿರುವುದರಿಂದ, ನಮ್ಮ ಪತ್ರಿಕೆಯಲ್ಲಿ ಜಾಹಿರಾತುಗಳನ್ನು ಪ್ರಕಟಿಸಲು, ನಮ್ಮ ಹಳೆಯ ಜಾಹಿರಾತುದಾರರು ಮತ್ತೆ ಮುಂದಾಗಿದ್ದಾರೆ.
ಈಗಾಗಲೇ ಹಲವಾರು ಬಾರಿ ಬರೆದಂತೆ, ಜಗತ್ತಿನ ಅತ್ಯಂತ ಪವಿತ್ರವಾದ ಕನ್ಫ್ಯೂಸ್ಡ್ ಪತ್ರಿಕೆ ಎಂದರೆ ಮಜಾವಾಣಿ. "ಸತ್ಯ" ಎನ್ನುವುದು ಈರುಳ್ಳಿಯಂತೆ - ಬೆಲೆ ಹೆಚ್ಚು ಮತ್ತು ಹಲವಾರು ಲೇಯರುಗಳಲ್ಲಿ ಇರುತ್ತವೆ. ಹೀಗಿರುವಾಗ, ಸತ್ಯದ ವಿರುದ್ಧ ಸಮರ ಸಾಧಿಸಿ, ವೀರ ಸ್ವರ್ಗ ಸೇರಬೇಕಿಂದಿರುವ ನಮ್ಮ ಪತ್ರಿಕೆಯಲ್ಲೂ ಲೇಯರುಗಳು ಇರಬಹುದಾದ ಸಾಧ್ಯತೆ ಇಲ್ಲದಿಲ್ಲ.
ಕಾಫ್ ಆರ್ಟಿಸ್ಟ್ ಗಳಿಗೆ ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ.
ವಂದನೆಗಳೊಂದಿಗೆ,
ವಿ.ವಿ.
ಮಹಾ ಪ್ರಧಾನ ವ್ಯವಸ್ಥಾಪಕ ಉಪ ಸಂಪಾದಕ
Post a Comment
Links to this post:
Create a Link
<< Home