ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, December 19, 2010

ಮಜಾವಾಣಿ ಸಾಧನೆ!

ಬೆಂಗಳೂರು ಡಿ. ೨೦: ಜಗತ್ತಿನ ಅತ್ಯಂತ ಅವಿಶ್ವಾಸಾರ್ಹ ಪತ್ರಿಕೆ "ಮಜಾವಾಣಿ" ಎಂಬುದು ಯಾವುದೇ ಸಂದೇಹವಿಲ್ಲದೆ ನಿರೂಪಿತವಾಗಿದೆ. ಕೇವಲ ಎರಡೇ ವರ್ಷಗಳ ಹಿಂದೆ ಬ್ಲಾಗ್ ಸ್ಪಾಟಿಗೆ ವಿದಾಯ ಹೇಳಿದ್ದ ಈ ಪವಿತ್ರ ಪತ್ರಿಕೆ ಮತ್ತೊಮ್ಮೆ ಬ್ಲಾಗ್ ಸ್ಪಾಟಿನಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಕೆಲವು ಸೂಚನೆಗಳು ಕಂಡುಬಂದಿದೆ ಎನ್ನಲಾಗಿದೆ. ಈ ಎರಡು ವರ್ಷಗಳಲ್ಲಿ, ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಎರಡೂವರೆ ಇಂದ ಒಂದೂವರೆಗೆ ಇಳಿದಿದೆ ಎನ್ನಲಾಗಿದೆ.

(ಪಿ.ಟಿ.ಹೈ.)

ಕ್ಷಮೆಯೊಂದಿಗೆ:

ಪ್ರಿಯ ಓದುಗರೆ (ಇನ್ನೂ ಯಾರಾದರೂ ಇದ್ದಲ್ಲಿ!),

ಸುಮಾರು ಎರಡು ವರ್ಷಗಳ ಹಿಂದೆ, ಬ್ಲಾಗ್ ಸ್ಪಾಟಿಗೆ ವಿದಾಯ ಹೇಳಿ, ಆತ್ಮೀಯ ಮಿತ್ರರಾದ ಸಂಪದದ ನಾಡಿಗರು ನಿರ್ಮಿಸಿಕೊಟ್ಟಿದ್ದ ಮಜಾವಾಣಿ.ನೆಟ್ ತಾಣಕ್ಕೆ "ಮಜಾವಾಣಿ"ಯನ್ನು ಸ್ಥಳಾಂತರಿಸಿದ್ದೆ. ನಾಡಿಗರೇನೋ ತಮ್ಮ ಹತ್ತು ಹಲವಾರು ಕಾರ್ಯ ಚಟುವಟಿಕೆಗಳ ನಡುವೆಯೂ ಸಮಯ ಮಾಡಿಕೊಂಡು ಉತ್ತಮ ವೆಬ್ ಸೈಟೊಂದನ್ನು ಮಾಡಿಕೊಟ್ಟಿದ್ದರು, ಆದರೆ, ಸೋಮಾರಿತನ ಇತ್ಯಾದಿ ಕಾರಣಗಳಿಂದ ನಾನು ಬರೆಯುವುದನ್ನೇ ಬಿಟ್ಟಿದ್ದೆ. ಹೀಗಾಗಿ, ಮಜಾವಾಣಿ.ನೆಟ್ ಅಪ್‌ಡೇಟ್ ಆಗುವುದೇ ನಿಂತಿತು.

ಈ ಮಧ್ಯೆ, ಮಜಾವಾಣಿಯನ್ನು ಅಂಕಣ ರೂಪದಲ್ಲಿ ಬರೆಯುವ ಅವಕಾಶವನ್ನು ದಟ್ಸ್ ಕನ್ನಡದ ಶ್ಯಾಮ್ ಅವರು ಒದಗಿಸಿ ಕೊಟ್ಟರು. ಆದರೆ, ಅದೂ ಸಹ, ನನ್ನ ಸೋಮಾರಿತನ ಮತ್ತು ಇತರ ಕಾರಣಗಳಿಂದ ಹೆಚ್ಚು ಕಾಲ ಮುಂದುವರೆಸಲಾಗಲಿಲ್ಲ.

ನಾಡಿಗ್ ಮತ್ತು ಶ್ಯಾಮ್ ಅವರಲ್ಲಿ ಈ ಮೂಲಕ ಕ್ಷಮೆ ಯಾಚಿಸಿ, ನನ್ನ ಮೈಗಳ್ಳತನಕ್ಕೆ ಒಗ್ಗುವ ಈ ಬ್ಲಾಗ್ ಸ್ಪಾಟಿನಲ್ಲಿ ಮಜಾವಾಣಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದೇನೆ.

ನಾನು ಬರೆಯುವುದನ್ನು ನಿಲ್ಲಿಸಿದ್ದರೂ, ಮಜಾವಾಣಿಯನ್ನು ಓದುತ್ತಿರುವ, ಓದಿ ನನಗೆ ಇ-ಮೇಲ್ ಮಾಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ ಎಂದು ಆಶಿಸುತ್ತಾ,

ವಂದನೆಗಳೊಂದಿಗೆ,

ಶೇಷಾದ್ರಿ
("ವಾರ್ತಾ ವಿದೂಷಕ")

Labels:

3 Comments:

Blogger mindry said...

ಬರೀರಿ, ಸ್ವಾಮೀ, ಇನ್ನೂ ಬರೀರಿ. ವರ್ಷಗಟ್ಟಲೆ ಎಸ್ಕೇಪ್ ಆಗಿದಿರಲ್ಲ, ಇದು ನ್ಯಾಯವೇ? ಇಲ್ಲಿಗೆ ಬಂದು ಖಾಲಿ ಜಾಗ ನೋಡಿ ಮುಖ ಸಪ್ಪಗೆ ಮಾಡಿಕೊಂಡು ಹೋಗೋ ಥರ ಮಾಡಿದ್ದಿರಿ, ಯಾವುದೋ ಹಳೆಯ ಲವ್ ಸ್ಟೋರಿ ಥರ. ಇನ್ನು ಮುಂದೆ ಹೀಗಾಗ್ದಿರೋ ಹಾಗೆ ನೋಡಿ.

January 06, 2011 10:19 AM  
Blogger v.v. said...

ಮಿಂಡ್ರಿಯವರಿಗೆ,
ನಮಸ್ಕಾರ.
ನ್ಯಾಯದ ಪ್ರಶ್ನೆ ಕೇಳಿದ್ದೀರಿ. ಖ್ಯಾತ ಲಾಯರ್ ಸಿ.ಎಸ್.ಪಿ.ಯವರೇ ನಿಮ್ಮೊಡನಿರುವಾಗ, ಸಪ್ಪಗಾಗುವ ಪ್ರಶ್ನೆಯೇ ಉದ್ಭವಿಸುವುದಾದರೂ ಹೇಗೆ?!

ವಂದನೆಗಳೊಂದಿಗೆ,
"ವಿ.ವಿ."

January 17, 2011 5:20 AM  
Blogger ಶ್ರೀನಿವಾಸ ವೀ. ಬಂಗೋಡಿ said...

ಮಜಾವಾಣಿಯ ಹಳೇ ಲೇಖನಗಳನ್ನಾದರೂ ಓದೋಣ ಅಂತ ಬಂದರೆ, ಅದ್ಭುತ! ಆಶ್ಚರ್ಯ, ವಿಸ್ಮಯ, ಬೆರಗು, ಅಚ್ಚರಿ ಎಲ್ಲಾ ಒಮ್ಮೆಲೆ ಆಯ್ತು. ಜೊತೆಗೆ ಖುಷಿನೂ...

February 01, 2011 8:07 AM  

Post a Comment

<< Home