ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, December 19, 2010

ಮಜಾವಾಣಿ: ವಾಣಿಜ್ಯ ಸುದ್ದಿ


ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!

ಬೆಂಗಳೂರು, ಡಿ.೩೫: ಬಿ.ಜೆ.ಪಿ., ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದು, ಈಗಷ್ಟೇ ಜೆ.ಡಿ.ಎಸ್. ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್. ಬಂಗಾರಪ್ಪನವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಬಿ.ಎನ್.ಎಸ್.ಎಲ್. ಮುಖ್ಯಸ್ತ ತಿರುತ್ತಣಿ ಅಗರ್‌ವಾಲ್, "ಪ್ರಸಕ್ತ ರಾಜಕೀಯ ರಂಗದಲ್ಲಿ ಬಂಗಾರಪ್ಪನವರು ತಿರುಗಾಡುವಷ್ಟು ಇನ್ನಾವ ರಾಜಕಾರಣಿಗಳೂ ತಿರುಗಾಡುತ್ತಿಲ್ಲ. ಅವರು ಇಂದು ಇದ್ದಲ್ಲಿ ನಾಳೆ ಇರುವುದಿಲ್ಲ. ಹೇಳೀಕೇಳಿ ನಮ್ಮದು ಮೊಬೈಲ್ ಸಂಪರ್ಕ ಸಂಸ್ಥೆ. ಹೀಗಾಗಿ ನಮ್ಮ ಹೊಸ ’ಪೀಪಲ್ ಆನ್ ದಿ ಮೂವ್’ ಅಡ್ವರ್ಟೈಸಿಂಗ್ ಕ್ಯಾಂಪೇನ್‌ಗೆ ಬಂಗಾರಪ್ಪನವರಿಗಿಂತ ಸೂಕ್ತ ವ್ಯಕ್ತಿ ಇನ್ನಿಲ್ಲ ಎನ್ನಿಸಿತು" ಎಂದರು.

ಸಮಾರಂಭದಲ್ಲಿ ಹಾಜರಿದ್ದ ಬಂಗಾರಪ್ಪ, "ಇದು ವೈಯುಕ್ತಿಕವಾಗಿ ನನಗೆ ಮಾತ್ರ ಸಂದ ಗೌರವವಲ್ಲ. ನನ್ನಂತೆಯೇ ಇನ್ನೂ ಹಲವಾರು ರಾಜಕಾರಣಿಗಳು ಸಹ ನಿಂತ ನೀರಾಗದೆ ಸದಾ ಸುತ್ತುತ್ತಲೇ ಇರುತ್ತಾರೆ. ನಾನು ಅಂತಹವರೆಲ್ಲರ ಸಂಕೇತ ಮಾತ್ರ" ಎಂದರು.

(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)

ಸೂಚನೆ: ಈ ವರದಿ ಮಾರ್ಚ್ ೨೦೦೯ರಲ್ಲಿ ದಟ್ಸ್ ಕನ್ನಡದಲ್ಲಿ ಪ್ರಕಟಿತವಾಗಿತ್ತು. ಹೊಸದೊಂದು ಡೇಟ್-ಲೈನ್‍ನೊಂದಿಗೆ ಮತ್ತೊಮ್ಮೆ ಮಜಾವಾಣಿಯಲ್ಲಿ ಪ್ರಕಟಿಸುವ ಸಂದರ್ಭ ಕಲ್ಪಿಸಿದ ಬಂಗಾರಪ್ಪನವರಿಗೆ ನಮ್ಮ ಪತ್ರಿಕೆಯ ಪರವಾಗಿ ಧನ್ಯವಾದಗಳು.

..
ವಾ.ವಿ.
(ಗ್ಲೋಬಲ್ ಗ್ರೂಪ್ ಚೀಫ್ ಮ್ಯಾನೇಜಿಂಗ್ ಎಕ್ಸಿಕ್ಯೂಟಿವ್ ಸಬ್ ಎಡಿಟರ್ - ಆಲ್ ಲಾಂಗ್ವೇಜ್ ನ್ಯೂಸ್)
ಟೇಕ್ ದಟ್ ಬರ್ಖಾ ದತ್!

Labels: , ,

4 Comments:

Blogger ಸುಶ್ರುತ ದೊಡ್ಡೇರಿ said...

ಇನ್ನೂ ಕೇಳ್ಸ್‌ಕೊಳ್ತಾ ಇದೀವಿ ಸ್ವಾಮೀ... ಸಂಪದದಿಂದ ದಟ್ಸ್‌ಕನ್ನಡಕ್ಕೆ ಸ್ವಿಚ್ಚಾಗಿ ಅಲ್ಲಿಂದ ಬ್ಲಾಗ್‌ಸ್ಪಾಟಿಗೆ ಬಂದು, ಸುಮಾರು ಕಾಲ ಸದ್ದಿಲ್ಲದೆ ಇದ್ದು ಇದ್ದಕ್ಕಿದ್ದಂಗೆ ಸುದ್ದಿಯಾಗೋ -ಇಲ್ಲಾ ಸುದ್ದಿಗೆ ಗುದ್ದು ಕೊಡ್ತಿರೋ ನೀವೂ ಒಂಥರಾ ಬಂ- ಥರ ಬಿಎಸ್‌ಎನ್‌ಎಲ್ ಬ್ರಾಂಡ್ ಅಂಬಾಸಿಡರ್ ಹುದ್ದೆಗೆ ನಾಮಿನೀನೇ ಸಾರ್! ;)

ಬರೀರಿ ಕನ್ಸಿಸ್ಟೆಂಟಾಗಿ.. :)

December 19, 2010 3:01 AM  
Anonymous ಶಾನಿ said...

ನೀವು ಬಂಗಾರಿಗೆ ಕಾಂಪಿಟೇಟರ್ ಅನ್ನತ್ತಲೇ ಕಮೆಂಟ್ ಹಾಕಲು ಬಂದಾಗ ಅದಾಗಲೇ ಸುಶ್ರುತ ಅದನ್ನು ಉಸುರಿದ್ದಾರೆ. ಇನ್ನೆಲ್ಲಾದರೂ ಬರೆಯದೆ ಕುಂತರೆ ಅಷ್ಟೇಯಾ

December 20, 2010 6:59 AM  
Blogger ಧರಿತ್ರಿ said...

innu daily suddigagi nodabhude?

December 22, 2010 8:06 AM  
Blogger v.v. said...

ಸುಶೃತ, ಶಾನಿ ಮತ್ತು ಧರಿತ್ರಿಯವರಿಗೆ,
ಧನ್ಯವಾದಗಳು.
ಮಜಾವಾಣಿಯನ್ನು ಹಿಂದಿನಂತೆಯೇ ರೆಗ್ಯುಲರ್ ಆಗಿ ಆಗೊಮ್ಮೆ-ಈಗೊಮ್ಮೆ ಪ್ರಕಟಿಸಲು ನಮ್ಮ ವರ್ಲ್ಡ್ ಹೆಡ್ ಕ್ವಾರ್ಟಸಿನಲ್ಲಿ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಲು ಆಶ್ಚರ್ಯಪಡುತ್ತೇನೆ.

ಮತ್ತೊಮ್ಮೆ ಧನ್ಯವಾದಗಳೊಂದಿಗೆ,
ವಿ.ವಿ.
ಮಹಾ ವ್ಯವಸ್ಥಾಪಕ ಮುಖ್ಯ ಉಪ ಸಂಪಾದಕ

January 04, 2011 12:46 AM  

Post a Comment

<< Home