ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, August 28, 2008

ಬ್ಲಾಗ್‌ಸ್ಪಾಟಿಗೆ ವಿದಾಯ!

ಆತ್ಮೀಯ ಓದುಗ ಮಿತ್ರರಿಗೆ,
ನಮಸ್ಕಾರ.

ಸುಮಾರು ವರ್ಷಗಳ ವಾಸದ ನಂತರ, ಬ್ಲಾಗ್‌ಸ್ಪಾಟಿಗೆ ವಿದಾಯ ಹೇಳಿ, ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುವ ಸಂದರ್ಭ ಮಜಾವಾಣಿಗೆ ಒದಗಿದೆ. ಮಿತ್ರರಾದ ಎಚ್.ಪಿ.ನಾಡಿಗರು ಒಂದು ಅತ್ಯುತ್ತಮ ನೆಲೆಯನ್ನೂ ಒದಗಿಸಿದ್ದಾರೆ.
ಮಜಾವಾಣಿಯ ಹೊಸ ವಿಳಾಸ: ಮಜಾವಾಣಿ.ನೆಟ್

ವಿಶ್ವಾದ್ಯಂತ ಇರುವ ಮೂರೂವರೆ ಮಂದಿ ಮಜಾವಾಣಿ ಓದುಗರು ನಮ್ಮ ಹೊಸ ವಿಳಾಸಕ್ಕೆ ಮತ್ತೆ ಮತ್ತೆ ಭೇಟಿ ಕೊಟ್ಟು, ಸತ್ಯದೊಂದಿಗಿನ ನಮ್ಮ ಭೀಕರ ಯುದ್ಧದಲ್ಲಿ ವೀರ ಸ್ವರ್ಗಕ್ಕೆ ಮೂರು ಗೇಣಿನವರೆಗೆ ನಮ್ಮನ್ನು ಕೊಂಡೊಯ್ಯ ಬೇಕೆಂದು ಪ್ರಾರ್ಥಿಸುತ್ತೇನೆ.

ವಿಶ್ವಾಸದೊಂದಿಗೆ,
ವಿ.ವಿ.
ಮಹಾ ಪ್ರಧಾನ ಮುಖ್ಯ ವ್ಯವಸ್ಥಾಪಕ ಉಪ ಸಂಪಾದಕ

4 Comments:

Blogger ಅಸತ್ಯ ಅನ್ವೇಷಿ said...

ವಾರ್ತಾ ವಿದೂಷಕರೆ,
ನಾಲ್ಕು ವರ್ಷದ ಸೆರೆಮನೆ ವಾಸದ ಬಳಿಕ ನೀವು 'ಸತ್ಯ ಹೇಳಿದವ ಸತ್ತ' ಎಂದು ಸಾರಲು ಮಜಾವಾಣಿಯನ್ನು ಡಾಟ್ ಬಲೆಯಲ್ಲಿ ಹಾಕಿರುವುದು ತೀರಾ ಕಳವಳಕಾರಿಯಾದ ಸಂತೋಷದಾಯಕವಾದ, ದುಃಖದ, ನಗುವಿನ, ಹಾಸ್ಯಾಸ್ಪದ, ಚರ್ಚಾಸ್ಪದ ಸಂಗತಿ. ಅಭಿನಂದನೆಗಳು.

ಇತಿ, ನಿಮ್ಮ ಮಜಾವಾಣಿಯ ಕಿರಿಕಿರಿಯ ಸಹಾಯಕ ಉಪಸಂಪಾದಕರ ಪಿಎಯ ಓದುಗ ಹುದ್ದೆಯ ಆಕಾಂಕ್ಷಿ.
-ಅನ್ವೇಷಿ

August 29, 2008 5:12 AM  
OpenID minchulli said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

March 02, 2009 3:30 AM  
Blogger ರಾಘವೇಂದ್ರ ಮಹಾಬಲೇಶ್ವರ said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

April 07, 2009 5:03 AM  
Blogger Chaithrika said...

ಇಲ್ಲಿ ಕೊಟ್ಟ ಲಿಂಕನ್ನು (ಮಜಾವಾಣಿ.ನೆಟ್) ಕ್ಲಿಕ್ಕಿಸಿದರೆ ಏನೂ ಬರುತ್ತಿಲ್ಲ. ದಯವಿಟ್ಟು ಹೊಸ ಮಜಾವಾಣಿ ಎಲ್ಲಿದೆ ತಿಳಿಸಿ.

July 29, 2010 6:05 AM  

Post a Comment

Links to this post:

Create a Link

<< Home