ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, August 02, 2008

ಮಜಾವಾಣಿ: ವಾಣಿಜ್ಯ-ಕ್ರೀಡೆ-ರಾಜಕೀಯ


ಶಾಸಕರ ಭವನದ ಸಮೀಪ ಡಿಕೆಶಿ'ಸ್ ಕ್ಯಾಸಲ್
(ಮಜಾವಾಣಿ ಎಕ್ಸ್‌ಕ್ಲೂಸಿವ್)
ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು, ಇದಕ್ಕೆ ಡಿಕೆಶಿ'ಸ್ ಕ್ಯಾಸಲ್ ಎಂದು ಹೆಸರಿಡಲಾಗಿದೆ.
ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ವಿವರಗಳನ್ನು ಹಂಚಿಕೊಂಡ ಶಿವಕುಮಾರ್, "ಕೆಸರು ಎರಚುವುದು, ಕಾಲೆಳೆಯುವುದು, ಜಾರಿಸಿ ಬೀಳಿಸುವುದು ಇದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ಆದರೆ ಈ ವಿದ್ಯೆಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಹೇಗೆ, ಅದರಿಂದ ಲಾಭವೇನಾದರೂ ಇದೆಯೇ ಎಂಬ ಆಲೋಚನೆ ಬಂತು. ಅದರ ಫಲವೇ ಡಿಕೇಶಿ'ಸ್ ಕ್ಯಾಸಲ್. ಶಾಸಕರ ಭವನದ ಸಮೀಪ ೪.೨೦ ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಲಾಗಿದೆ. ಪಕ್ಷಭೇದವಿಲ್ಲದೆ ರಾಜಕಾರಣಿಗಳೆಲ್ಲರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ" ಎಂದರು.

Labels: , ,

5 Comments:

Blogger ಸುಪ್ರೀತ್.ಕೆ.ಎಸ್. said...

ಕೇಂದ್ರದಲ್ಲಿ ಸಿಂಗ್‌ರ ಸರಕಾರವು ಅಮೋಘವಾದ, ಅದ್ವಿತೀಯವಾದ ರಿಯಾಲಿಟಿ ಶೋವೊಂದನ್ನು ಸಂಸತ್ತಿನಲ್ಲಿ ನಡೆಸಿ ಜಗತ್ತಿನ ಗಮನ ಸೆಳೆಯುದಿರುವುದನ್ನು ಕಂಡು ಉತ್ಸಾಹಿತರಾದ ಡೀ‘ಕೇಶಿ’ಯವರು ರಾಜ್ಯದಲ್ಲಿ ಕಾಂಗ್ರೆಸ್ಸಿನ ಪ್ರಭಾವವನ್ನು ಹೆಚ್ಚಿಸುವುದಕ್ಕಾಗಿ, ತನ್ಮೂಲಕ ತಮ್ಮ ಪ್ರಭಾವವನ್ನು ಸ್ಥಾಪಿಸುವುದಕ್ಕಾಗಿ ಈ ‘ಕೋಟೆ’ಯನ್ನು ಕಟ್ಟಿದ್ದಾರೆ ಎಂದು ಅವರ ಅತ್ಯಾಪ್ತ ಕಾರ್ಯದರ್ಶಿ ನಮಗೆ ತಿಳಿಸಿದ್ದಾರೆ.

August 03, 2008 5:32 AM  
Blogger SHREE (ಶ್ರೀ) said...

sakhat! :)

August 05, 2008 5:36 AM  
Blogger v.v. said...

ಸುಪ್ರೀತ್ ಕೆ.ಎಸ್.ರವರಿಗೆ,

ನಮಸ್ಕಾರ.

ಪ್ರಭಾವ ಬೆಳೆಸುಕೊಳ್ಳಲು ಕೋಟೆ ಕಟ್ಟುವುದು ಎಷ್ಟು ಸರಿ ಎಂಬುದರ ಬಗೆಗೆ ಗಂಭೀರ ಚರ್ಚೆಯಾಗಬೇಕಿದೆ.
ರಾಜಕಾರಣದ ತಂತ್ರಗಳನ್ನು ಜೀವನದಲ್ಲಿ ಹಾಸು ಹೊಕ್ಕಾಗಿ ಅಳವಡಿಸಿಕೊಳ್ಳುವುದನ್ನು ಒಪ್ಪ ಬಹುದಾದರೂ, ಕೇವಲ ಪ್ರಭಾವಕ್ಕಾಗಿ ಕೋಟೆ ಕಟ್ಟುವುದು ವಿವಾದಾಸ್ಪದ ವಿಷಾದದ ವಿಷಯ.

shree (ಶ್ರೀ)ಯವರಿಗೆ,

ನಮಸ್ಕಾರ.
ಮಜಾವಾಣಿಯ ಬಗೆಗೆ ಇದೇ ಮೊದಲಬಾರಿಗೆ ಶ್ರೀ ಶ್ರೀಗಳಲ್ಲೊಬ್ಬರು ಮೆಚ್ಚುಗೆಯ ಆಶೀರ್ವಚನವನ್ನು ನುಡಿದಿರುವುದು ನಮ್ಮ ಇಡೀ ಕಾರ್ಯಾಲಯದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿದೆ.

ವಂದನೆಗಳೊಂದಿಗೆ,

ವಿ.ವಿ.

August 09, 2008 12:38 PM  
Anonymous 媚薬 said...

媚薬:http://www.bestkanpou.com/Charming/Charming-medicine.html
精力剤:http://www.bestkanpou.com/Energy/Energy.html
中絶薬:http://www.bestkanpou.com/product/121.html

July 27, 2011 3:33 AM  
Anonymous Anonymous said...

super

March 22, 2013 4:06 PM  

Post a Comment

<< Home