ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, November 23, 2007

ಮಜಾವಾಣಿ: ತನಿಖಾ ವರದಿ

ಮಾಟ-ಮಂತ್ರ: ಯಡ್ಡಿ ಆರೋಪ ಸಾಬೀತು!

ಬೆಂಗಳೂರು, ನವೆಂಬರ್ ೩೧: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಗೌಡರ ಕುಟುಂಬದ ವಿರುದ್ಧ ಮಾಡಿದ ಆರೋಪ ಮಜಾವಾಣಿ ತನಿಖೆಯಿಂದ ಸಾಬೀತಾಗಿದೆ.

ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪನವರು, ದೇವೇಗೌಡರ ಕುಟುಂಬ ತಮ್ಮನ್ನು "ಮುಗಿಸಲು" ಮಾಟ-ಮಂತ್ರವನ್ನು ಪ್ರಯೋಗಿಸುತ್ತಿದ್ದಾರೆಂದು ಆರೋಪಿಸಿದ್ದರು. ಈ ಆರೋಪ ವಿಚಾರವಾದಿಗಳ, ವಿಜ್ಞಾನಿಗಳ ಕುಹಕಕ್ಕೆ ಕಾರಣವಾಗಿತ್ತು.

ಆದರೆ, ಮಜಾವಾಣಿ ಪತ್ರಿಕೆ ನಡೆಸಿದ ಕೂಲಂಕುಶ ತನಿಖೆಯಿಂದ, ಯಡಿಯೂರಪ್ಪನವರ ಆರೋಪ ಯಾವುದೇ ಅನುಮಾನವಿಲ್ಲದೆ ಸಾಬೀತಾಗಿದ್ದು, ಗೌಡರ ಮಾಟಕ್ಕೆ ಯಡಿಯೂರಪ್ಪನವರ ಮೀಸೆ ಪ್ರಪ್ರಥಮ ಗುರಿಯಾಗಿರುವುದು ಹೊರ ಬಿದ್ದಿದೆ.


ಇತ್ತೀಚೆಗೆ ಯಡಿಯೂರಪ್ಪನವರ ಮೀಸೆ ಸುದ್ದಿ ಮಾಧ್ಯಮಗಳ ಚಿತ್ರಗಳಲ್ಲಿ ಇದ್ದಕ್ಕಿದ್ದಂತೆ ಅರೆ(!) ಮಾಯವಾಗುತ್ತಿದ್ದು, ಹಲವಾರು ಊಹಾಪೋಹಗಳಿಗೆ ಕಾರಣವಾಗಿತ್ತು. ಕೆಲವರು "ಯಡಿಯೂರಪ್ಪನವರ ಮೀಸೆ ಮೀಡಿಯಾ ಷೈ" ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

ಆದರೆ, ಗೌಡರು ತಮ್ಮ ಖಾಸಗಿ ಮಲಯಾಳಿ ಮಾಂತ್ರಿಕನಿಗೆ ಯಡಿಯೂರಪ್ಪನವರ ಮೀಸೆ ಮುಗಿಸುವಂತೆ ಸೂಚಿಸುತ್ತಿರುವ ಚಿತ್ರ ನಮ್ಮ ಪತ್ರಿಕೆಗೆ ದೊರೆತಿದ್ದು, ಇದರಿಂದ ಎಲ್ಲಾ ಊಹಾಪೋಹಗಳಿಗೆ ಮತ್ತು ವಿಚಾರವಾದಿಗಳ ಕುಹಕಕ್ಕೆ ತೆರೆ ಬೀಳುವಂತಾಗಿದೆ.

(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್, ಹಿಂದೂ, ಕನ್ನಡ ಪ್ರಭ ಮತ್ತು ಟ್ರಿಬ್ಯೂನ್)

Labels: ,

7 Comments:

Blogger kpbolumbu said...

ಕನ್ನಡ ಪತ್ರಿಕೆಗಳ ಕೊ೦ಡಿಗಳು ಸಿಗಲೇ ಇಲ್ಲವೇ? ಕನ್ನಡಿಗರೆಲ್ಲರೂ ಇ೦ಗ್ಲಿಷ್ ಪತ್ರಿಕೆಗಳನ್ನೋ ಪೋರ್ಟಲುಗಳನ್ನೋ ಓದುವವರೆ೦ಬುದು ನಿಮ್ಮ ಊಹೆ ಮಾತ್ರ.

ವಿಚಾರವಾದಿಗಳು, ವಿಜ್ಞಾನಿಗಳೆ೦ದು ತಮ್ಮನ್ನು ತಾವು ಕರೆದುಕೊಳ್ಳುವವರ ಕುಹಕಕ್ಕೆ ಒಳಗಾಗದ ವಿಚಾರಗಳು ಭೂಲೋಕದಲ್ಲಿ ಎಲ್ಲಿವೆ? ಶರಾವತಿ ನದಿಯಲ್ಲಿ ಮೀನುಗಳು ಸತ್ತಾಗ ಗೋಸಮ್ಮೇಳನದ ಮೇಲೆ ಆರೋಪ ಹೊರಿಸಿದ್ದರು. ಆದರೆ ನಿಜಾ೦ಶ ತಡವಾಗಿ ಹೊರಬ೦ತು ಮತ್ತು ಇದು ಸುದ್ದಿಯಾಗಲಿಲ್ಲ. ಅದೇನೆ೦ದರೆ ಮೀನುಗಳು ಸತ್ತದ್ದು ಸುತ್ತಲಿನ ಕಾರ್ಖಾನೆಗಳು ಹರಿಯಬಿಟ್ಟ ತ್ಯಾಜ್ಯಗಳಿ೦ದಾಗಿಯೇ ಹೊರತು ಗೋಸಮ್ಮೇಳನದ ತ್ಯಾಜ್ಯಗಳಿ೦ದಲ್ಲ. ವಿವರಗಳಿಗಾಗಿ ಕರ್ನಾಟಕ ಮಾಲಿನ್ಯ ನಿಯ೦ತ್ರಣ ಮ೦ಡಳಿಯ ಶ್ರೀ.ಶರಶ್ಚ೦ದ್ರರನ್ನು ಸ೦ಪರ್ಕಿಸಿ. ನನಗೆ ಗೊತ್ತಾದದ್ದು ಜ್ಞಾನವಾಣಿಯ ಮೂಲಕ(ರೇಡಿಯೋ).

ಕಾಸರಗೋಡಿನವರೆಲ್ಲರೂ ಮಲೆಯಾಳಿಗಳಾಗಿದ್ದರೆ ನಾನೂ ಮಲೆಯಾಳಿಯೇ.

ಕೃಷ್ಣಪ್ರಕಾಶ ಬೊಳುಂಬು

November 24, 2007 3:08 AM  
Blogger ಅಸತ್ಯ ಅನ್ವೇಷಿ said...

ಸೊಂಪಾದಕರುಗಳೇ,

ನಿಮ್ಮ ಮಾತಿಗೆ ಖಂಡಿತಾ ನಮ್ಮ ಬೆಂಬಲವಿದ್ದು, ದೇವೇಗೌಡ್ರು ಮಜಾವಾಣಿ ಮೇಲೂ ಮಾಟ-ಮಂತ್ರ ಮಾಡತೊಡಗಿದ್ದಾರೆ ಎಂದು ನಾವು ತನಿಖಿಸಿದ್ದೇವೆ. ಯಾಕೆಂದರೆ ನೀವು ಬಲು ಬೇಗನೇ ಕನ್ನಡಿಗರ ಹೆಮ್ಮೆಯ ನವೆಂಬರ್ ಮಾಸವನ್ನು ಕೊನೆಗೊಳಿಸುವಂತೆ ದೇವೇಗೌಡರೇ ಏನೋ ಮಾಡಿದ್ದಾರೆ. ಅಂದರೆ ನೀವು ನವೆಂಬರ್ 31ರಂದು ಪ್ರಕಟಿಸಬೇಕಿರುವ ಸುದ್ದಿ ನವೆಂಬರ್ 23ಕ್ಕೆ ಪ್ರಕಟವಾಗಿದೆ.

ಉಲ್ಲೇಖ: "ಬೆಂಗಳೂರು, ನವೆಂಬರ್ ೩೧: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಗೌಡರ ಕುಟುಂಬದ ವಿರುದ್ಧ ಮಾಡಿದ ಆರೋಪ ಮಜಾವಾಣಿ ತನಿಖೆಯಿಂದ ಸಾಬೀತಾಗಿದೆ."

November 24, 2007 3:19 AM  
Blogger v.v. said...

ಕೃಷ್ಣಪ್ರಕಾಶ ಬೊಳಂಬುರವರಿಗೆ ನಮಸ್ಕಾರ.

ಸತ್ಯವನ್ನು ಧಿಕ್ಕರಿಸುವುದು ನಮ್ಮ ಪತ್ರಿಕೆಯ ಧ್ಯೇಯವಾದರೆ, ಸೋಮಾರಿತನ ನಮ್ಮ ಪತ್ರಿಕೆಯ ಕಾರ್ಯತಂತ್ರ. ಹೀಗಾಗಿ, ಓದುಗರ ವಿಚಾರದಲ್ಲಿ ಯಾವುದೇ ಊಹೆ ಮಾಡದೆ, ನಮಗೆ ಸುಲಭದಲ್ಲಿ ದಕ್ಕುವ ಕೊಂಡಿಗಳನ್ನು ಲಗತ್ತಿಸುತ್ತೇವೆ ಅಷ್ಟೇ. ಕ್ಷಮಿಸಿ.

ಶರಾವತಿ, ಮೀನುಗಳು, ಗೋಸಮ್ಮೇಳನ, ಕಾರ್ಖಾನೆಗಳ ತ್ಯಾಜ್ಯ, ವಿಚಾರವಾದಿಗಳ ವ್ಯಾಜ್ಯ ತಿಳಿದಿರಲಿಲ್ಲ. ಪುಣ್ಯಕೋಟಿಯೇ ಇರಲಿ, ವಿಚಾರವಾದಿಗಳೇ ಇರಲಿ, ಸತ್ಯ ಯಾರ ಪರವಿದ್ದರೂ ನಾವು ಅವರನ್ನು ವಿರೋಧಿಸುತ್ತೇವೆ.

ಕಾಸರಗೋಡಿನವರು ಮಲೆಯಾಳಿಗಳೇ? ಗೊತ್ತಿಲ್ಲ. ನಮ್ಮ ದೃಷ್ಟಿಯಲ್ಲಿ ಮಂತ್ರಶಕ್ತಿಯುಳ್ಳವರೆಲ್ಲರೂ ಮಲೆಯಾಳಿಗಳು.

ಅನ್ವೇಷಿಗಳಿಗೆ ನಮಸ್ಕಾರ.

ಸತ್ಯವನ್ನು ವಿರೋಧಿಸುವ ನಮ್ಮ ಪತ್ರಿಕೆ ಕಾಲವನ್ನು ಧಿಕ್ಕರಿಸಿರುವುದನ್ನು ನೀವು ಈಗಷ್ಟೇ ಗಮನಿಸಿದಂತಿದೆ. ಅಥವಾ ನೀವು ಕಾಲಯಂತ್ರದಲ್ಲಿ ಕುಳಿತು ಮಜಾವಾಣಿಯನ್ನು ಭವಿಷ್ಯತ್ತಿನ್ನಲ್ಲಿ ಓದಿ, ಭವಿಷ್ಯದಲ್ಲಿ ಗಮನಿಸಿದ್ದೋರೋ?

ವಂದನೆಗಳೊಂದಿಗೆ,
ವಿ.ವಿ.

November 26, 2007 6:33 AM  
Blogger kpbolumbu said...

ಶ್ರೀಯುತ ವಿ.ವಿ.ಯವರಿಗೆ

ಕಾಸರಗೋಡಿನವರೆಲ್ಲರೂ ಮಲೆಯಾಳಿಗಳಾಗಿದ್ದರೆ ನಾನೂ ಮಲೆಯಾಳಿಯೇ ಎ೦ದು ನಾನು ಹೇಳಿದ್ದು ಯಾಕೆ೦ದರೆ ದೇವೇಗೌಡರು ಕೇರಳದಲ್ಲಿ ಸ೦ಪರ್ಕಿಸುವ ಮಾ೦ತ್ರಿಕ ಕಾಸರಗೋಡಿನವರು(ಕು೦ಬಳೆಯ ಆರಿಕ್ಕಾಡಿ) ಎ೦ಬ ವಿಚಾರ ಸುದ್ದಿಯಾಗಿತ್ತು ಮತ್ತು ಅವರ ತಾಯ್ನುಡಿ ಕನ್ನಡ ಎ೦ಬ ವಿಚಾರವೂ ಸುದ್ದಿಯಾಗಿತ್ತು. ಆರಿಕ್ಕಾಡಿ ಎ೦.ಗೋವಿ೦ದ ಪೈಗಳ ಊರಿನಿ೦ದ ಕೆಲವೇ ಮೈಲುಗಳ ಅ೦ತರದಲ್ಲಿದೆ. ಕೇರಳದವರೆಲ್ಲರೂ (ಅದರ ಒ೦ದು ಭಾಗವಾದ ಕಾಸರಗೋಡಿನವರೆಲ್ಲರೂ) ಮಲೆಯಾಳಿಗಳಲ್ಲ. ಕಾಸರಗೋಡಿನವರು ನಾವು ಕನ್ನಡದವರು ಎನ್ನುತ್ತ ಮುಖ್ಯವಾಹಿನಿಯಲ್ಲಿ ಬೆರೆಯುವ ಯತ್ನವನ್ನು ಮಾಡಿದರೂ ಕೆಲವರ ದೃಷ್ಟಿಯಲ್ಲಿ ಅವರು ಮಲೆಯಾಳಿಗಳಾಗಿಯೇ ಉಳಿದಿದ್ದಾರೆ.

ಇದಿಷ್ಟು ಸತ್ಯ. ನೀವು ಮಜಾವಾಣಿಯ ಮೂಲಕ ಈ ಸತ್ಯವನ್ನೂ ವಿರೋಧಿಸುವಿರೆ೦ದು ನ೦ಬಿದ್ದೇನೆ.

ಕಾಸರಗೋಡಿನವರ ಕನ್ನಡ ಪ್ರೀತಿ ಮ೦ಗಳೂರಿನ ನೆ೦ಟರಿಷ್ಟರ ಬಗೆಗಿನ ಅಭಿಮಾನವಲ್ಲದೆ ಇನ್ನೇನೂ ಅಲ್ಲವೆನ್ನುವುದು ಬುದ್ಧಿಜೀವಿಗಳ ಮಾತು.ಬಿಡುವಿದ್ದರೆ ಸಂಪದ ಪಾಡ್ಕ್ಯಾಸ್ಟ್ ಕೇಳಿ.
http://sampada.net/podcasts/3
ನಲುಮೆಯೊ೦ದಿಗೆ,
ಕೃಷ್ಣಪ್ರಕಾಶ ಬೊಳುಂಬು

November 28, 2007 6:57 AM  
Blogger v.v. said...

ಕೃಷ್ಣಪ್ರಕಾಶ ಬೊಳುಂಬುರವರಿಗೆ,

ನಮಸ್ಕಾರ. ನಮ್ಮ ಪತ್ರಿಕೆ ಜಗತ್ತಿನ ಅತ್ಯಂತ ಪವಿತ್ರ ಪತ್ರಿಕೆಗಳಲ್ಲಿ ಒಂದು. ಆದರೆ ಓದುಗರಿರುವುದು ಮೂರೂವರೆ ಮಂದಿ. ಕನ್ನಡಿಗರ ಸಂಖ್ಯೆ ಹೆಚ್ಚಿಸಿ ನಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ನಮ್ಮದು. (ಇಡೀ ಒಂದು ಸಂಚಿಕೆಯನ್ನು ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆ ಸಹ ನಮ್ಮದೇ.)

ನಿಮ್ಮ ಪ್ರತಿಕ್ರಿಯೆಗಳ ಮೂಲಕ ನಮಗೆ ತಿಳಿಯದ ಹಲವಾರು ಮಾಹಿತಿಗಳನ್ನು ನೀಡಿ (ಉದಾ: ಗೋಸಮ್ಮೇಳನ-ಮೀನುಗಳು, ಗೌಡರ ಮಾಂತ್ರಿಕರು ಮತ್ತು ಅವರ ಸ್ಥಳ, ಇತ್ಯಾದಿ) ಮಜಾವಾಣಿಯ ಜ್ಞಾನವನ್ನೂ ಒಮ್ಮೆಗೇ ಹೆಚ್ಚಿಸಿದ್ದೀರಿ. ಇವೆಲ್ಲವೂ ಸತ್ಯಗಳೇ ಆದ್ದರಿಂದ ನಮ್ಮ ಪತ್ರಿಕೆ ಖಂಡಿತಾ ಇದನ್ನು ವಿರೋಧಿಸುತ್ತದೆ.

ನೀವು ಲಿಂಕಿಸಿರುವ ಪಾಡ್ ಕ್ಯಾಸ್ಟನ್ನು ಕೇಳುವಂತೆ ನಮ್ಮ ಇಡೀ ಕಾರ್ಯಾಲಯಕ್ಕೆ ಆಜ್ಞಾಪಿಸಲಾಗಿದೆ.

ವಂದನೆಗಳೊಂದಿಗೆ,

ವಿ.ವಿ.

November 29, 2007 7:53 AM  
Blogger kpbolumbu said...

ಶ್ರೀಯುತ ವಿ.ವಿ.ಯವರಿಗೆ
ಪಾಡ್ ಕ್ಯಾಸ್ಟನ್ನು ಕೇಳುವಂತೆ ನಮ್ಮ ಇಡೀ ಕಾರ್ಯಾಲಯಕ್ಕೆ ಆಜ್ಞಾಪಿಸಿದ್ದೇನೋ ಚೆನ್ನಾಗಿದೆ. ಆದರೆ ಒ೦ದು ಕಿವಿಮಾತು: ಎಲ್ಲರೂ ಒಟ್ಟಿಗೆ ಕುಳಿತು ಕೇಳುವಾಗ ಶಬ್ದಮಾಲಿನ್ಯವು೦ಟಾಗಿ ನಿಮ್ಮ ಪ್ರತಿಸ್ಪರ್ಧಿಗಳ ವಾಣಿಯಲ್ಲಿ ಸುದ್ದಿಯಾಗದ೦ತೆ ನೋಡಿಕೊಳ್ಳಿ. ನಿಮ್ಮ ಸಹಾನುಭೂತಿಗೆ ಪಾತ್ರವಾದ ವಾಣಿಯೊ೦ದರಲ್ಲಿ[http://noorentusullu.blogspot.com] ಇರುವ೦ತೆ ನಿಮ್ಮ ಕಾರ್ಯಾಲಯದಲ್ಲೂ ಒಬ್ಬರೇ ಇರುವುದೆ೦ದಾದರೆ ಚಿ೦ತೆಯಿಲ್ಲ, ಮು೦ದುವರಿಸಿ.
ಮಜಾವಾಣಿಯ ಜ್ಞಾನವನ್ನು ಹೆಚ್ಚಿಸಲು ಹೊರಗಿನ ಸಹಾಯ ಬೇಕಾಗಿಲ್ಲವೆ೦ಬುದು ನನ್ನ ಭಾವನೆ. ಕನ್ನಡಿಗರ ಸಂಖ್ಯೆ ಹೆಚ್ಚಿಸಿ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ೦ತಹ ಯೋಜನೆಗಳು ನಿಮ್ಮಲ್ಲಿರುವಾಗ ಇದಕ್ಕಾಗಿ ಅಲ್ಪಮಾನವರೇಕೆ ತ್ರಾಸಪಡಬೇಕು?
ಇಡೀ ಒಂದು ಸಂಚಿಕೆಯನ್ನು ತಮಿಳು ಲಿಪಿಯಲ್ಲಿ ಪ್ರಕಟಿಸಿದ್ದು ಹೆಗ್ಗಳಿಕೆಯಲ್ಲ, ಅದು ನಿಮ್ಮ 'ಮಜಾ' ಮಾತ್ರ. ಅದಕ್ಕಾಗಿ ಹಾರತುರಾಯಿಗಳನ್ನು ನಿರೀಕ್ಷಿಸಬೇಡಿ.
"ಗೌಡರ ಮಾಟಕ್ಕೆ ಯಡಿಯೂರಪ್ಪನವರ ಮೀಸೆ ಪ್ರಪ್ರಥಮ ಗುರಿಯಾಗಿರುವುದು" ಎ೦ದಿರಿ ಮತ್ತು "ಮಂತ್ರಶಕ್ತಿಯುಳ್ಳವರೆಲ್ಲರೂ ಮಲೆಯಾಳಿಗಳು" ಎ೦ದಿರಿ. ಕನ್ನಡದ ಹೆಮ್ಮೆಯ ಮಣ್ಣಿನ ಮಗನನ್ನೂ ಮಲೆಯಾಳಿಯೆ೦ದದ್ದು ಸಮರ್ಥನೀಯವಲ್ಲ.

ನಲುಮೆಯೊ೦ದಿಗೆ,
ಕೃಷ್ಣಪ್ರಕಾಶ ಬೊಳುಂಬು.

November 29, 2007 10:42 AM  
Blogger ಕೃಷ್ಣಪ್ರಕಾಶ ಬೊಳುಂಬು said...

ನಿಮ್ಮ ಮೂರೂವರೆ ಓದುಗರು ಯಾರು ಯಾರು? ನನ್ನನ್ನೂ ನಿಮ್ಮನ್ನೂ ಬಿಟ್ಟು ಉಳಿದ ಒಂದೂವರೆ ಮಂದಿಯ ಬಗೆಗೆ ನನ್ನ ಆಸಕ್ತಿ.
______________
ಕೃಷ್ಣಪ್ರಕಾಶ ಬೊಳುಂಬು

January 17, 2008 4:48 AM  

Post a Comment

<< Home