ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, October 06, 2007

ಮಜಾವಾಣಿ: ಜನ ವಾಣಿ

[ಕೊಟ್ಟ ಮಾತಿಗೆ ತಪ್ಪುವುದರ ವಿರುದ್ಧ ಸುದ್ದಿ ಮಾಧ್ಯಮಗಳು ಮಲತಾಯಿ ಧೋರಣೆ ತಳೆದಿರುವುದು ಮೇಲ್ನೋಟಕ್ಕೇ ಗೋಚರಿಸುವ ಅಸಹ್ಯ ಸತ್ಯ. ನಮ್ಮ ರಾಜ್ಯದ ರಾಜಕೀಯ ಸಂದರ್ಭದಲ್ಲಿ ಇದೊಂದು ಸಂಕ್ರಮಣ ಕಾಲ; ನಮ್ಮ ಅಸ್ಮಿತೆಯ ಅಸ್ತಿತ್ವದ ಬೇರುಗಳನ್ನೇ ಹುಡುಕ ಬೇಕಾದ ಅನಿವಾರ್ಯತೆ ಉಂಟಾಗಿರುವ ಕಾಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ನೈತಿಕ ಮೌಲ್ಯದ ಪರ ವಹಿಸದೆ ಜನಾಭಿಪ್ರಾಯವನ್ನು ನಿಷ್ಪಕ್ಷಪಾತದಿಂದ ಬಿಂಬಿಸುವ ಪತ್ರಿಕೆಯೆಂದರೆ ಮಜಾವಾಣಿ ಒಂದೇ. - ಸಂ.

ವಿ.ಸೂ.: ಅವಧಿ, ಇಸ್ಮಾಯಿಲ್, ಜೋಗಿ ಮನೆ, ಅ.ರಶೀದರ ಗಮನಕ್ಕೆ. "ಸಂಕ್ರಮಣ", "ಅಸ್ಮಿತೆ" ಇವು ನಿಮಗಾಗಿಯೇ ಬಳಸಿರುವ ಪದಗಳು. ಮುಂದಿನ ಬಾರಿ "ಅವಿನಾಭಾವ"ವನ್ನೂ ಬಳಸುತ್ತೇವೆ. ಪ್ರಾಮಿಸ್. ಅರ್ಥ ತಿಳಿಯದಿದ್ದರೂ ಈ ಪದಗಳನ್ನು ಬಳಸಿ ನಿಮ್ಮ ಗಮನ ಸೆಳೆಯುವ ನಮ್ಮ ಈ ಪ್ರಯತ್ನವನ್ನು ಆರ್ತನಾದವೆಂದೇ ತಿಳಿಯಬೇಕೆಂದು ಕೋರುತ್ತೇವೆ.]

Labels: ,

7 Comments:

Blogger ಸುಶ್ರುತ ದೊಡ್ಡೇರಿ said...

hahhahhahha! sakkhath vyangya! :D

October 07, 2007 11:46 PM  
Blogger ಅಸತ್ಯ ಅನ್ವೇಷಿ said...

ವಿಕಟ ವಿದೂಷಕರೆ,

ನಿಮ್ಮ ಸ್ಪಷ್ಟನೆಯನ್ನು ನಾವು ವಿರೋಧಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಬಿಟ್ಟಿರಿ. ಯಾಕೆಂದರೆ ನೀವು "ವಿ.ಸೂ."ದಲ್ಲಿ ನೀಡಲಾದ ಪದಗಳ ಪಟ್ಟಿಯಲ್ಲಿ "ಸತ್ಯ"ವನ್ನೂ ಸೇರಿಸಬೇಕು ಎಂದು ಬಲವಂತವಾಗಿ ಆಗ್ರಹಿಸುತ್ತಿದ್ದೇವೆ.

October 09, 2007 11:41 PM  
Blogger v.v. said...

ದೊಡ್ಡೇರಿಯವರೆ,

ಜನಾಭಿಪ್ರಾಯವನ್ನು ನೀವು ವ್ಯಂಗ್ಯವೆಂದು ಭಾವಿಸಿರುವುದು ನಮಗೆ ಸಂತಸ ತಂದಿದೆ.

ಅನ್ವೇಷಿಗಳೇ,

ನಮ್ಮ ಸ್ಪಷ್ಟನೆಯ ಅರ್ಥ ನಿಮಗೇನಾದರೂ ತಿಳಿದಿದ್ದಲ್ಲಿ, ನಮಗೂ ತಿಳಿಸಬೇಕೆಂದು ಯಾಚಿಸುತ್ತೇನೆ.

"ಸತ್ಯ" ಎಂಬುದು ಅನಾದಿಕಾಲದಿಂದಲೂ ಬಂದಿರುವಂತಹ, ಹರಿಶ್ಚಂದ್ರನಿಂದ ಹಿಡಿದು ಮಹಾತ್ಮ ಗಾಂಧೀಜಿಯವರೆಗೆ ಹಲವಾರು ಮಹಾಮಹಿಮರನ್ನೇ ಬಿಡದಂತೆ ಅಂಟಿಕೊಂಡಿರುವ ವ್ಯಸನ. ಹೀಗಾಗಿ, ನಮ್ಮ ಪತ್ರಿಕೆ ಅದನ್ನು ಮೊದಲಿನಿಂದಲೂ ವಿರೋಧಿಸುತಲೇ ಬಂದಿದೆ. ಈಗ ಅದರ ಅರ್ಥ ನಮಗೆ ತಿಳಿದಿಲ್ಲವೆಂದರೆ, ನಮ್ಮ ಪತ್ರಿಕೆ ನಗೆಪಾಟಲಿಗೀಡಾಗಬಹುದೆಂಬ ಭಯ ನಮ್ಮನ್ನು ಕಾಡುತ್ತಿದೆ.

ವಂದನೆಗಳು.

October 23, 2007 7:18 AM  
Blogger Sham said...

ಮಾನ್ಯರೇ,
ತಾವು ಬಹಳ ಸತ್ಯನಿಷ್ಠರೆಂದು, ಸತ್ಯವಾದದ್ದನ್ನೇ ಬ್ಲಾಗಿಸುವಿರೆಂದೂ ಕೇಳಿ ತಿಳಿದಿದ್ದೇನೆ. ಹೀಗಿದ್ದೂ ಕಿರಣ್ ಗಂಗೂಲಿಯವರ ನಿಜವಾದ ಫೋಟೋ ಹಾಕದೆ ಕಾಲ್ ಪೆನ್ ಅವರ ಫೋಟೋ ಯಾಕೆ ಹಾಕಿರುವಿರಿ? ಕಿರಣ್ ಗಂಗೂಲಿಗೆ ಎಷ್ಟು ಬೇಜಾರಗಿರಲಿಕ್ಕಿಲ್ಲ...

October 23, 2007 8:58 AM  
Blogger v.v. said...

ಶ್ಯಾಮ್ ಕಶ್ಯಪ್‌ರವರಿಗೆ,

ಮಜಾವಾಣಿ ಸಂಪಾದಕ ಬಳಗದಿಂದ ಹೃತ್ಪೂರ್ವಕ ಸ್ವಾಗತ. ಮುಳ್ಳನ್ನು ಮುಳ್ಳಿನಿಂದಲೇ ಹೊರತೆಗೆಯುವಂತೆ, ಸತ್ಯವನ್ನು ಸತ್ಯದಿಂದಲೇ ಧೂಳಿಪಟ ಮಾಡಬಹುದೇ?

ಕಿರಣ್ ಗಂಗೂಲಿಯವರಿಗೂ ಮತ್ತು ಹಾಲಿವುಡ್ ನಟ ಕಾಲ್ ಪೆನ್ ಅವರಿಗೂ ಹೊಂದಾಣಿಕೆ ಇರುವುದು ನಿಜ. ಇವರಿಬ್ಬರೂ ಬೇರ್ಪಡೆಯಾಗಿರುವ ಅವಳಿ ಸಹೋದರರಾಗಿದ್ದು ಒಂದೇ ಹಾಡಿನ ಮೂಲಕ ಒಬ್ಬರನ್ನೊಬ್ಬರು ಗುರುತಿಸಲು ಸಿದ್ಧರಾಗುತ್ತಿದ್ದಾರೆ. ಆದರೆ, ಕಾಲ್ ಪೆನ್, ಕಿರಣ್ ಗಂಗೂಲಿಯವರು ಹಾಕಿಕೊಂಡಿರುವ ಕನ್ನಡಕವನ್ನು ಮಾತ್ರ ಹಾಕಿಕೊಂಡಿರಲಾರರು. ಏಕೆಂದರೆ, ಅದು ಮಜಾವಾಣಿಯ ಉಚಿತ ಕೊಡುಗೆ.

ನೀವು ಇನ್ನೊಂದು ಹೊಂದಾಣಿಕೆಯನ್ನು ಗುರುತಿಸಿದಂತಿಲ್ಲ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಮೈತ್ರಿ ಮತ್ತು ಅಮೆರಿಕದ ಟೆಕ್ ಟಿ.ವಿ. (ಮತ್ತು ಸಿ.ಎನ್.ಎನ್. ?) ವರದಿಗಾರ್ತಿ ಸುಮಿ ದಾಸ್ ಅವರಿಗೂ ಹೊಂದಾಣಿಕೆಯಿದ್ದಂತಿದೆ. ಆದರೆ, ಸುಮಿ ದಾಸ್ ಸಹ ಮಜಾವಾಣಿ ಕನ್ನಡಕವನ್ನು ಧರಿಸಿರುವ ಸಾಧ್ಯತೆ ಇಲ್ಲ.

ವಂದನೆಗಳೊಂದಿಗೆ,

ಮಜಾವಾಣಿ ಉಚಿತ ಕನ್ನಡಕ ಧಾರಣಾ ಮೇಲ್ವಿಚಾರಕ

October 23, 2007 11:37 AM  
Blogger Sham said...

ಕನ್ನಡಕ ಧಾರಣ ಮೇಲ್ವಿಚಾರಕರೆ,

ಕಿರಣ್ ಗಂಗೂಲಿ, ಕಾಲ್ ಪೆನ್ ಇಬ್ಬರೂ ನನ್ನ ಚಡ್ಡಿ ದೋಸ್ತಿಗಳಾದದ್ದರಿಂದ ನನಗೀ ಸಂದೇಹ ಬಂತು. ಇನ್ನು ನಾನು ಬೆಂಗಳೂರಿನ ಮೈತ್ರಿ ಕಾಲೇಜಿನ ಹುಡುಗಿಯರ ಭಯದಿಂದ ಅದರ ಆಸುಪಾಸಿನಲ್ಲೂ ಸುತ್ತುವನಲ್ಲ (ನಾನು ಗಾಂಧಿ ಸ್ವಾಮಿ). ಆದ್ದರಿಂದ ಸುಮಿ ದಾಸ್‍ಗೂ ಈ ವಿದ್ಯಾರ್ಥಿನಿಗೂ ಇರುವ ಸಾಮ್ಯದ ಬಗ್ಗೆ (ಗೊತ್ತಿದ್ದೂ ;-) )ಮಾತಾಡಲಿಲ್ಲ.

ನಮಗೂ ನಿಮ್ಮ ಈ ಉಚಿತ ಕನ್ನಡಕ ಕೊಡಿಸಿ, ಸತ್ಯವನ್ನು ನೋಡುವ ಬಗೆಯನ್ನು ತಿಳಿಸಿ.

ಧನ್ಯವಾದಗಳು
ಶ್ಯಾಮ್

October 24, 2007 1:02 AM  
Blogger v.v. said...

ಶ್ಯಾಮ್,

ನೀವು, ಕಿರಣ್ ಗಂಗೂಲಿ ಮತ್ತು ಕಾಲ್ ಪೆನ್ ಆರ್.ಎಸ್.ಎಸ್.ನಲ್ಲಿರುವ ವಿಚಾರ ತಿಳಿದಿರಲಿಲ್ಲ.

ಚಡ್ಡಿ ಮತ್ತು ಗಾಂಧಿ ಎಂದೆಲ್ಲಾ ಬರೆದು ಮಜಾವಾಣಿ ಸಂಪಾದಕವರ್ಗವನ್ನು ಕನ್‌ಫ್ಯೂಸ್ ಮಾಡುವ ತಂತ್ರ ಸಫಲವಾಗುವುದಿಲ್ಲ; ಬ್ರಹ್ಮಾಂಡದ ಮೋಸ್ಟ್ ಕನ್‌ಫ್ಯೂಸ್ಡ್ ಪತ್ರಿಕೆ ನಮ್ಮದು.

ಗಾಂಧಿ ಎಂದರೆ ಯಾವ ಗಾಂಧಿ?
ನಮ್ಮ ಪತ್ರಿಕೆಗೆ ತಿಳಿದಿರುವ ಯಾವ ಗಾಂಧಿಗೂ ಕಾಲೇಜು ಹುಡುಗಿಯರ ಭಯ ಇರಲಿಲ್ಲ, ಇಲ್ಲ.

ಮಜಾವಾಣಿ ಕನ್ನಡಕವನ್ನು ಸದ್ಯಕ್ಕೆ ಕೇವಲ ತದ್ರೂಪಿಗಳಿಗೆ ಮಾತ್ರ ತೊಡಿಸುತ್ತಿದ್ದೇವೆ. ನಿಮ್ಮ ತದ್ರೂಪಿ ಎಲ್ಲಾದರೂ ಕಂಡರೆ, ದಯಮಾಡಿ ತಿಳಿಸಿ. ತಕ್ಷಣವೇ ಕನ್ನಡಕವನ್ನು ತೊಡಿಸುತ್ತೇವೆ.

ವಂದನೆಗಳೊಂದಿಗೆ,

ಸಕಲ ಗಾಂಧಿ ತಜ್ಞ

October 24, 2007 11:17 AM  

Post a Comment

<< Home