ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, September 25, 2007

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಹೇಮಮಾಲಿನಿ ಕೆನ್ನೆಯಿಂದ ಸರ್ಕಾರಕ್ಕೆ ಪೇಚು!
ನವದೆಹಲಿ, ಸೆ. ೧೩: ಖ್ಯಾತ ಚಿತ್ರತಾರೆ ಮತ್ತು ಸಂಸದೀಯ ನೃತ್ಯ ಪಟು ಹೇಮ ಮಾಲಿನಿಯವರ ಕೆನ್ನೆಗಳು ಕೇಂದ್ರ ಸರ್ಕಾರಕ್ಕೆ ಪೇಚುಂಟು ಮಾಡಿರುವ ಸಂಗತಿ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿರುವ ಎಲ್. ಅಂಡ್ ಟಿ. ಸಂಸ್ಥೆ ಹೇಮ ಮಾಲಿನಿಯವರ ಕೆನ್ನೆಗಳನ್ನು ಸವರಿ ಪರೀಕ್ಷಿಸಲು ಬೇಡಿದ್ದ ಅನುಮತಿಯನ್ನು ಆಕೆ ನಿರಾಕರಿಸಿರುವುದು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿದೆ. ಕೇಂದ್ರ ಕಾಮಗಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಎಲ್. ಅಂಡ್ ಟಿ.ಗೆ ನೀಡಿದ್ದ ಕರಾರು ಪತ್ರದಲ್ಲಿ, ರಸ್ತೆಯ ಗುಣ ಮಟ್ಟದ ಮಾಪನಕ್ಕಾಗಿ ಹೇಮ ಮಾಲಿನಿಯವರ ಕೆನ್ನೆಗಳನ್ನು ಪ್ರಸ್ತಾಪಿಸಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಕೇಂದ್ರ ಕಾಮಗಾರಿ ಇಲಾಖೆಯ ಪ್ರಕಾರ ರಸ್ತೆಯ ಗುಣ ಮಟ್ಟ -- ನುಣುಪು, ಧೃಡತೆ ಮತ್ತು ಬಿಗಿತ -- ಹೇಮ ಮಾಲಿನಿಯವರ ಕೆನ್ನೆಗಳ ಗುಣ ಮಟ್ಟಕ್ಕೆ ಸಮನಾಗಿ ಇರಬೇಕು. ಇಲ್ಲದಿದ್ದಲ್ಲಿ, ಕಾಮಗಾರಿ ಕಂಟ್ರಾಕ್ಟುದಾರರು ಶೇ.೨೫ರಷ್ಟು ಹಣವನ್ನು ವಾಪಸು ನೀಡಬೇಕು.

ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಬಿಹಾರದ ರಸ್ತೆಗಳನ್ನು ಹೇಮಮಾಲಿನಿಯವರ ಕೆನ್ನೆಗಳಿಗೆ ಹೋಲಿಸಿರುವ ಸಂಗತಿ ವರದಿಯಾದಂದಿನಿಂದ, ಕೇಂದ್ರ ಕಾಮಗಾರಿ ಇಲಾಖೆಯಲ್ಲದೆ, ಹಲವಾರು ರಾಜ್ಯಗಳ ಕಾಮಗಾರಿ ಇಲಾಖೆಗಳೂ ಸಹ ರಸ್ತೆ ಕಂಟ್ರಾಕ್ಟುದಾರರಿಂದ ತಮ್ಮ ರಸ್ತೆಗಳಲ್ಲಿ ಹೇಮಾರವರ ಕೆನ್ನೆಗಳ ಗುಣಮಟ್ಟವನ್ನೇ ನಿರೀಕ್ಷಿಸುತ್ತಿದ್ದು, ಹೇಮ ಮಾಲಿನಿಯವರ ಕೆನ್ನೆ ಸವರಿ ಪರೀಕ್ಷಿಸಲು ವಿಪರೀತ ಬೇಡಿಕೆ ಉಂಟಾಗಿದೆ.

Labels: , , ,

2 Comments:

Blogger ಶ್ರೀನಿವಾಸ ವೀ. ಬಂಗೋಡಿ said...

ನಮಗೇನೋ ಇದರಲ್ಲಿ "ಕಾಮ"ಗಾರಿ ಸಚಿವಾಲಯದ ತಪ್ಪೇನೂ ಕಂಡು ಬರುತ್ತಿಲ್ಲ. ಬಸ್ ಓಡುವ ರಸ್ತೆಗಾಗಿ ಬಸಂತಿಯ ಗಲ್ಲ standard ಇಟ್ಟು ಕೊಂಡರೆ, ಅವರು ಆ-ಗಲ್ಲ ಎನ್ನುವದೆ? ಅಷ್ಟಕ್ಕೂ co-actorಗಳಿಗೆ ಮಾಡದ ಆಕ್ಷೇಪಣೆ, contr-actorಗಳಿಗೆ ಮಾಡಿದ್ದು ಹೇಮಾ ಮಾಲಿನಿಯವರ ತಪ್ಪಲ್ಲವೇ?

"ಕೇಂದ್ರ ಕಾಮಗಾರಿ ಇಲಾಖೆಯಲ್ಲದೆ, ಹಲವಾರು ರಾಜ್ಯಗಳ ಕಾಮಗಾರಿ ಇಲಾಖೆಗಳೂ ಸಹ ರಸ್ತೆ ಕಂಟ್ರಾಕ್ಟುದಾರರಿಂದ ತಮ್ಮ ರಸ್ತೆಗಳಲ್ಲಿ ಹೇಮಾರವರ ಕೆನ್ನೆಗಳ..."

ಇದು ಮಾತ್ರ ಅಕ್ಷಮ್ಯ ಅಪರಾಧ. ಹೀಗಾಗಿಯೇ ಕನ್ನಡದ ನಾಯಕಿಯರಿಗೆ ಅವಕಾಶ ಕಡಿಮೆಯಾಗುತ್ತಿರುವದು. ಕರ್ನಾಟಕಕ್ಕೆ ಬೇಕು ಕನ್ನಡದ ನಟಿ. ಕೇಂದ್ರ "ಕನಸಿನ ಕನ್ಯೆ"ಯನ್ನು ಆರಿಸಿದರೆ, ನಾವು "ಗಿರಿ ಕನ್ಯೆ" ಜಯಮಾಲಾರವರನ್ನು ಆರಿಸಬಹುದೆಂದು ತೋರುತ್ತದೆ. ಇದಕ್ಕೆ ಹೆಚ್ಚಿನ ಚಿಂತನೆ/ಚರ್ಚೆ ಅಗತ್ಯ.

September 28, 2007 3:46 AM  
Blogger v.v. said...

ಬಂಗೋಡಿಯವರಿಗೆ,

ನಮಸ್ಕಾರ.

ನಿಮ್ಮ ಅಭಿಪ್ರಾಯವನ್ನು ನಮ್ಮ ಪತ್ರಿಕೆ ಹೃತ್ಪೂರ್ವಕವಾಗಿ ಬೆಂಬಲಿಸುತ್ತದೆ. ಇದು ಖಂಡಿತಾ ಹೇಮ ಮಾಲಿನಿಯವರ ತಪ್ಪು ಮತ್ತು ಮತ್ತಷ್ಟು ಚಿಂತನೆ/ಚರ್ಚೆ ನಡೆಸಿ ಇದೇ ತಪ್ಪನ್ನು ಎಸಗಲು ಕನ್ನಡದ ನಟಿಯರಿಗೂ ಅವಕಾಶ ಕಲ್ಪಿಸ ಬೇಕೆಂದು ನಮ್ಮ ಪತ್ರಿಕೆ ಈ ಮೂಲಕ ಸೂಕ್ತ ಇಲಾಖೆಗಳಿಗೆ ಮನವಿ ಮಾಡಿಕೊಳ್ಳುತ್ತದೆ.

ವಂದನೆಗಳೊಂದಿಗೆ,

ಸಂಪಾದಕ

October 03, 2007 7:24 AM  

Post a Comment

<< Home