ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, August 21, 2007

ಮಜಾವಾಣಿ: ವಿಜ್ಞಾನ - ರಾಜಕಾರಣ

'ಜನಸಂಖ್ಯಾ ಸ್ಫೋಟಕ್ಕೆ ಪುನರ್ಜನ್ಮವೇ ಕಾರಣ'

ಕೊಲ್ಕತಾ, ಆಗಸ್ಟ್ ೨೧: ಭಾರತದಲ್ಲಿನ ಜನಸಂಖ್ಯಾ ಸಮಸ್ಯೆಗೆ ಪುನರ್ಜನ್ಮವೇ ಕಾರಣ ಎಂದು ಸಿ.ಪಿ.ಎಂ. ನಾಯಕಿ ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ.

ಕೋಲ್ಕೊತಾದಲ್ಲಿ ನಡೆಯುತ್ತಿರುವ ಪುನರ್ಜನ್ಮ: ಒಂದು ಸಾಮಾಜಿಕ ಸಮಸ್ಯೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, "ಪುನರ್ಜನ್ಮ ಪೀಡಿತ ರಾಷ್ಟ್ರಗಳಾದ ಭಾರತ, ಚೈನಾಗಳಲ್ಲೇ ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಕೇವಲ ಕಾಕತಾಳೀಯವಲ್ಲ. ಪುನರ್ಜನ್ಮರಹಿತ ರಾಷ್ಟ್ರಗಳಲ್ಲಿ ಒಮ್ಮೆ ಸತ್ತವರು ಮರು ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಪ್ರಥಮ ಜನ್ಮಿಗಳೊಡನೆ, ಪುನರ್ಜನ್ಮಿಗಳೂ ಪದೇ ಪದೇ ಹುಟ್ಟುತ್ತಿರುವುದರಿಂದ ಭಾರತದಲ್ಲಿ ಈ ಸಮಸ್ಯೆ ಎದುರಾಗಿದೆ. ಪುನರ್ಜನ್ಮವನ್ನು ಸರ್ಕಾರ ತಕ್ಷಣವೇ ನಿಷೇಧಿಸಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸಹ ಸೋವಿಯತ್ ರಷ್ಯಾದಂತೆ ಪ್ರಗತಿ ಪರ ದೇಶವಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.

ಸರ್ಕಾರದ ಕ್ರಮ?: ಪುನರ್ಜನ್ಮವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪುನರ್ಜನ್ಮದ ಮೇಲೆ ಸಂಪೂರ್ಣ ನಿಷೇಧ ಚೈನಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ಸೂಕ್ತವೆನ್ನಿಸಬಹುದಾದರೂ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಸತ್ತ ಆತ್ಮಗಳ ಸ್ವಾತಂತ್ರ್ಯ ಹರಣ ನಿಷಿದ್ಧ. ಜೊತೆಗೆ, ಆತುರದಲ್ಲಿ ಇಂತಹ ನಿಷೇಧ ತಂದಲ್ಲಿ, ಪ್ರೇತಾತ್ಮಗಳ ಸಂಖ್ಯೆಯಲ್ಲಿ ಒಮ್ಮೆಲೆ ವಿಪರೀತ ಹೆಚ್ಚಳವಾಗುವ ಅಪಾಯ ಸಹ ಇದ್ದು, ಅದರ ಬದಲು, ಆಧ್ಯಾತ್ಮಿಕ ಗುರುಗಳು, ಮಠಾಧೀಶರನ್ನೊಳಗೊಂಡ ತಜ್ಞರ ಸಮಿತಿಯನ್ನೊಂದು ರಚಿಸಿ, ಪುನರ್ಜನ್ಮವಿಲ್ಲದ ಮೋಕ್ಷ ಮಾರ್ಗ ತೋರುವ "ನಾನೊಬ್ಬ-ನನಗೊಂದು" ಆಂದೋಲನವನ್ನು ಜಾರಿಗೆ ತರುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

Labels:

3 Comments:

Anonymous Anonymous said...

ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ದಿನಾಂಕ: ಸೆಪ್ಟಂಬರ್ ೨೮, ೨೯
ಸ್ಥಳ: ಬೆಂಗಳೂರಿನ ಅರಮನೆ ಮೈದಾನ

ಎಲ್ಲ ಕನ್ನಡಿಗರು ಈ ಸಮಾವೇಶದಲ್ಲಿ ಭಾಗವಹಿಸುವುದಾಗಿ ವಿನಂತಿ
http://karnatakarakshanavedike.org/modes/view/50/6ne-swaabhimaani-kannadigara-samavesha.html

September 01, 2007 11:00 AM  
Anonymous Anonymous said...

ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ದಿನಾಂಕ: ಸೆಪ್ಟಂಬರ್ ೨೮, ೨೯
ಸ್ಥಳ: ಬೆಂಗಳೂರಿನ ಅರಮನೆ ಮೈದಾನ

ಎಲ್ಲ ಕನ್ನಡಿಗರು ಈ ಸಮಾವೇಶದಲ್ಲಿ ಭಾಗವಹಿಸುವುದಾಗಿ ವಿನಂತಿ
http://karnatakarakshanavedike.org/modes/view/50/6ne-swaabhimaani-kannadigara-samavesha.html

September 01, 2007 11:00 AM  
Blogger Krishna Shastry said...

ಈ ಪುನರ್ಜನ್ಮದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು, ಪುನರ್ಜನ್ಮವೆಂಬ ಪರಿಕಲ್ಪನೆಯು ಮೂಡುವ ಅಪಾಯಕಾರಿ 60ನೇ ವಯಸ್ಸಿನ ಆಸು-ಪಾಸಿನ ಪ್ರಜೆಗಳನ್ನು ಗುರುತಿಸಿ ಅವರನ್ನೆಲ್ಲಾ ಗಡೀಪಾರು ಮಾಡುವ ಉಕ್ತಿಯು ನಮ್ಮ ಎಡಪಂಥೀಯ ನಾಯಕರುಗಳಿಗೆ ಹೊಳೆಯದೇ ಇರುವುದು, ನಮ್ಮೆಲ್ಲರ ದೌರ್ಭಾಗ್ಯವೇ ಸರಿ.

September 03, 2007 1:52 PM  

Post a Comment

<< Home