ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, July 12, 2007

ಮಜಾವಾಣಿ: ಶಿಕ್ಷಣ ವಾಣಿ

ನಿರಕ್ಷರತೆ ತಗ್ಗಿಸಲು ಅಂಡರ್‌ವೇರ್ ಬಳಕೆ ಹೆಚ್ಚಿಸಲು ಕರೆ

ನವ ದೆಹಲಿ, ಜುಲೈ ೧೨: ದೇಶದಲ್ಲಿನ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಒಳ-ಉಡುಪುಗಳ ಪಾತ್ರ ಅತ್ಯಂತ ಮಹತ್ವದ್ದೆಂದು ಸಾರಿರುವ ಕೇಂದ್ರ ಶಿಕ್ಷಣ ಸಚಿವಾಲಯ, ದೇಶದಲ್ಲಿ ಹೆಚ್ಚು ಹೆಚ್ಚು ಜನರು ಒಳ-ಉಡುಪುಗಳನ್ನು ಧರಿಸುವಂತೆ ಕರೆ ನೀಡಿದೆ.

ಭಾರತದಲ್ಲಿ ಶೇ.೪೦ರಷ್ಟು ಜನರು ನಿರಕ್ಷರಸ್ತರಿದ್ದು, ಒಂದು ಅಂದಾಜಿನ ಪ್ರಕಾರ ಶೇ.೨೫ರಷ್ಟು ಮಂದಿ ಯಾವುದೇ ಒಳ ಉಡುಗೆ ತೊಡುವುದಿಲ್ಲವೆಂದು ತಿಳಿದು ಬಂದಿದೆ. ಅಕ್ಷರಸ್ತರ ಸಂಖ್ಯೆಯನ್ನು ಹೆಚ್ಚು ಮಾಡಲು ಸೂಕ್ತ ಪುಸ್ತಕಗಳ ಅವಶ್ಯಕತೆಯಿದ್ದು ಈ ಪುಸ್ತಕಗಳ ಮುದ್ರಣಕ್ಕೆ ಹೆಚ್ಚು ಹೆಚ್ಚು ಕಾಗದವನ್ನು ತಯಾರಿಸುವ ಅನಿವಾರ್ಯತೆ ಎದುರಾಗಿದೆ.

ಒಳ-ಉಡುಪುಗಳೂ ಸೇರಿದಂತೆ ಹಳೆಯ ವಸ್ತ್ರಗಳು ಕಾಗದದ ತಯಾರಿಕೆಯಲ್ಲಿ ಕಚ್ಚಾವಸ್ತುಗಳಾಗಿದ್ದು, ಈ ಒಳ-ಉಡುಪುಗಳ ಹೆಚ್ಚಿನ ಬಳಕೆಯಿಂದ ಕಾಗದದ ತಯಾರಿಕೆಯಲ್ಲಿ, ಪುಸ್ತಕದ ಮುದ್ರಣದಲ್ಲಿ ಮತ್ತು ಅಂತಿಮವಾಗಿ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಪ್ರಗತಿಯನ್ನು ಸಾಧಿಸಬಹುದೆಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ನಿರಕ್ಷರತೆ ಮತ್ತು ಒಳ-ಉಡುಪುಗಳ ನಡುವೆ ಅತ್ಯಂತ ಮಹತ್ವದ ಸಂಬಂಧವಿದ್ದು, ಇತ್ತೀಚೆಗೆ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು.

Labels: ,

5 Comments:

Blogger Sudhindra said...

ಹೊರಉಡುಪುಗಳ ಬಳಕೆ ಕಡಿಮೆಯಾದಷ್ಟೂ ಅಕ್ಷರಸ್ಥರ ಸಂಖ್ಯೆ ಹೆಚ್ಚುತಿರುವದನ್ನು ಮುಂದುವರಿದ ದೇಶಗಳಲ್ಲಿ ಹಾಗು ಮುಂದುವರಿಯುತ್ತಿರುವ ಭಾರತದಲ್ಲಿ ಗಮನಿಸಬಹುದು.

July 13, 2007 9:39 AM  
Anonymous ಶೂನ್ಯಸಂಪಾದಕ said...

ನೀವು ಹೇಳುತ್ತಿರುವುದು ನೀರಕ್ಷರತೆಯ ಬಗ್ಗೆಯಲ್ಲವೇ? ನೀರಕ್ಷರತೆ ಅಥವಾ ಶ್ರೀಪಡ್ರೆಯವರು ಹೇಳುವ ಜಲ ಸಾಕ್ಷರತೆಯಿದ್ದರೆ ನೀರನ್ನು ಕಡಿಮೆ ಬಳಸುತ್ತಾರಂತೆ. ಒಳ ಉಡುಪು ಇಲ್ಲದಿದ್ದರೆ ಅದನ್ನು ತೊಳೆಯಲು ನೀರು ಬೇಕಾಗಿಲ್ಲ ಎಂದರ್ಥವಾಗುತ್ತದೆ. ಆದುದರಿಂದ ನೀರನ್ನು ಉಳಿಸುವ ಕಾರಣದಿಂದ ನಾವು ನೀರಕ್ಷರತೆಯನ್ನು ಪ್ರೋತ್ಸಾಹಿಸಬೇಕಲ್ಲವೇ. ಮಜಾವಾಣಿಯಂಥ ಬೇಜವಾಬ್ದಾರಿ ಪತ್ರಿಕೆ ಇದನ್ನು ಮರೆತರೆ ನಿರ್ಜಾಣರಾದ ನಮಗೆ ಅರಿವಾಗುವುದಾದರೂ ಹೇಗೆ?

July 15, 2007 8:40 AM  
Anonymous sarini said...

ah! What a comedy! simply superb. I think I am part of the average community myself. My ola udupu curve is somewhat really similar! :D
----------------------------------------------------------------
If ever you felt you were at a loss because it was so hard to blog in KANNADA. Don't ever
fret again! There's http://quillpad.in/kannada/ just to do it for you!
Try it! Enjoy it!

July 31, 2007 7:34 AM  
Blogger Harsha said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

July 31, 2007 9:54 AM  
Blogger v.v. said...

ಸುಧೀಂದ್ರರವರೇ,
ನಮ್ಮ ಪತ್ರಿಕೆಯ ವರದಿಗೆ ಪೂರಕವಾಗಿರುವ ಮಾಹಿತಿಯನ್ನು ನೀಡಿದ್ದೀರಿ. ನಮ್ಮ ವರದಿ ದೇಶದ ನಿರಕ್ಷರತೆ ಮತ್ತು ಒಳ ಉಡುಪುಗಳ ಸಂಬಂಧವನ್ನು ನಿರೂಪಿಸಿದ್ದರೆ, ನಿಮ್ಮ ಸಂಶೋಧನಾತ್ಮಕ ವಿಶ್ಲೇಷಣೆ, ಇನ್ನೂ ಮುಂದುವರೆದು, ಹೊರ ಉಡುಪು ಮತ್ತು ದೇಶಗಳ ಮುನ್ನಡೆಯನ್ನು ಚಿಕ್ಕದಾಗಿ ಮತ್ತು ಚೊಕ್ಕವಾಗಿ ತಿಳಿಸುತ್ತದೆ. ಧನ್ಯವಾದಗಳು.

ಶೂನ್ಯ ಸಂಪಾದಕರೇ,
ನೀರಿನ ಬಗ್ಗೆ ಬರೆದಿದ್ದೀರಿ. ಪ್ರಶಸ್ತಿ ವಿಜೇತ ಕನ್ನಡ ಚಲನ ಚಿತ್ರ ಮುಂಗಾರು ಮಳೆಯ ಗುಂಗಿನಿಂದ ಹೊರ ಬಂದಂತಿಲ್ಲ. ಎಷ್ಟು ಸಾರಿ ನೋಡೋಣವಾಯ್ತು?! ಅಥವಾ ಇದು ನೀರಾ ಗುಂಗಿನಲ್ಲಿ ಬರೆದದ್ದೋ?!!

ನೀರಾಕ್ಷರತೆಯ ಕುರಿತು ನಮ್ಮ ವರದಿ ಸದ್ಯದಲ್ಲಿಯೇ ಬರಲಿದೆ. ನಿರೀಕ್ಷಿಸಿ.

ಸರಿಣಿ (ಸಾರಿನಿ ?)ಯವರೇ,
ನಮ್ಮ ವರದಿ ನಿಮಗೆ ವಿನೋದವಾಗಿ ಕಂಡಿರುವುದು ವಿಷಾದಕರವಾದ ಸಂಗತಿ. ಇನ್ನು ಮುಂದೆ ಹಾಗಾಗದಂತೆ ಪ್ರಯತ್ನಿಸುತ್ತೇವೆ.

ಹರ್ಷರವರೇ,
ಕಾಮೆಂಟ್ಸ್ ಕೌಂಟ್ ಹೆಚ್ಚಿಸಿದ್ದೀರಿ. ನಿಮ್ಮ ಅಭಿಪ್ರಾಯಕ್ಕೆ ನಮ್ಮ ವಂದನೆಗಳು.

ಧನ್ಯವಾದಗಳೊಂದಿಗೆ,

ವಿ.ವಿ.

August 04, 2007 11:08 AM  

Post a Comment

Links to this post:

Create a Link

<< Home