ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, June 25, 2007

ಮಜಾವಾಣಿ: ಪಾಶವೀ ಪ್ರೇಮ

ಸಕ್ರಿಯ ಕಪ್ಪೆ ಎಸೆತದಿಂದ ದೇವೇ ಗೌಡ ನಿವೃತ್ತಿ

ಬೆಂಗಳೂರು, ಜೂನ್ ೨೫: ಇನ್ನು ಮುಂದೆ ತಾವು ಕಪ್ಪೆ ಎಸೆಯುವುದನ್ನು ನಿಲ್ಲಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.

ನಮ್ಮ ಪತ್ರಿಕೆಯ ಅತ್ಯಂತ ಸಮೀಪ ಸ್ಪರ್ಧಿಯಾದ ವಿಜಯ ಕರ್ನಾಟಕ ಪತ್ರಿಕೆ ಗೌಡರ ಕಪ್ಪೆ ಎಸೆಯುವ ಹವ್ಯಾಸದ ಕುರಿತು ವರದಿಮಾಡಿದ್ದು, ಅದನ್ನು ಒಂದು ರಾಜಕೀಯ ತಂತ್ರವೆಂಬಂತೆ ವರದಿ ಮಾಡಿತ್ತು. ಆದರೆ, ಇದನ್ನು ಅಲ್ಲಗೆಳೆದ ಗೌಡರು, "ಇದೊಂದು ಹವ್ಯಾಸ ಅಷ್ಟೇ. ಇದಕ್ಕೆ ರಾಜಕೀಯದ ಬಣ್ಣ ಬೇಡ. ಇತ್ತೀಚೆಗೆ ಕಪ್ಪೆಗಳನ್ನು ಹಿಡಿದಿಡಿಯುವುದೂ ಕಷ್ಟವಾಗುತ್ತಿದೆ. ಜೊತೆಗೆ ಹಾವುಗಳ ಕಾಟ ಬೇರೆ. ಹೀಗಾಗಿ, ಇನ್ನು ಮುಂದೆ ಕಪ್ಪೆ ಎಸೆಯುವುದನ್ನು ನಿಲ್ಲಿಸುತ್ತೇನೆ" ಎಂದಿದ್ದಾರೆ.

Labels: ,

3 Comments:

Anonymous hpn said...

ಬೆಂಗಳೂರಿನಲ್ಲಿದ್ದ ಕಪ್ಪೆಗಳೆಲ್ಲ ಎಲ್ಲಿಗೆ ಹೋದ್ವು ಅನ್ನೋದು ಈಗ ಗೊತ್ತಾಯಿತು.

June 25, 2007 4:27 PM  
Anonymous ವಿಚಿತ್ರಾನ್ನಭಟ್ಟ said...

ಪಿಯುಸಿ ಭಯಾಲಜಿ ಲ್ಯಾಬ್‌ನಲ್ಲಿ ಕಪ್ಪೆಯ ಡಿಸೆಕ್ಷನ್ ಮಾಡಿದಂತೆ (ನಾನು ಮಾಡಿಲ್ಲ, ನನ್ನದು ಫಿಸಿಕ್ಸ್+ಕೆಮೆಸ್ಟ್ರಿ+ಮ್ಯಾತ್ಸ್+ಸ್ಟಾಟಿಸ್ಟಿಕ್ಸ್ ಕಾಂಬಿನೇಶನ್), ಈ ಬರಹದ ತಲೆಬರಹವನ್ನು ಡಿಸೆಕ್ಟ್ ಮಾಡಿ ಸ್ವಲ್ಪ ತಲೆಹರಟೋಣ.

1) ಗೂಗ್ಲಿ ಎಸೆತದಿಂದ ಗಾಯವಾಗಿ ಬ್ಯಾಟ್ಸ್‌ಮನ್ ನಿವೃತ್ತಿ (retired hurt) ಆಗುವುದನ್ನು ಕೇಳಿದ್ದೇವೆ/ನೋಡಿದ್ದೇವೆ. ಸೋ, ದೇವೇಗೌಡ ನಿವೃತ್ತರಾಗುವಷ್ಟು ಪ್ರಬಲವಾಗಿತ್ತೇ ಸಕ್ರಿಯ ಕಪ್ಪೆ ಎಸೆತ?

2) ಹೌದು, ಗೌಡರು ’ಸಕ್ರಿಯ ಕಪ್ಪೆ’ ಎಸೆಯುವುದನ್ನು ನಿಲ್ಲಿಸಿದ ಮೇಲೆ ಇನ್ನು ಮುಂದೆ ’ಸಕ್ರೆಯ ಕಪ್ಪೆ’ ಎಸೆಯುವುದಕ್ಕೆ ಶುರುಮಾಡಲಿದ್ದಾರಂತೆ ಎಂದು ಪದ್ಮನಾಭನಗರದಲ್ಲಿ(ನನ್ನ ಮಾವನಮನೆಯೂ ಅಲ್ಲಿಯೇ ಇರೋದು) ಎಂದು ಅಂತೆಕಂತೆಗಳ ಸಂತೆ ಶುರುವಾಗಿದೆ. ಸಕ್ರೆಯ ಕಪ್ಪೆ ಎಂದರೆ ಸಿಹಿಮಾತುಗಳ (sugar coated words) ಕಂತೆ. ದೇವೇಗೌಡರ ಬಾಯಿಂದ ಸಿಹಿಮಾತುಗಳಾ!? ಇದನ್ನು ನಂಬಲಿಕ್ಕಾಗದವರಿಗಾಗಿ ಈ ವಿವರಣೆ: ಮುಂದಿನ ಸಂಕ್ರಾಂತಿಹಬ್ಬದ ವೇಳೆ ’ಸಕ್ರೆಯ ಕಪ್ಪೆ’ ಎಸೆದು (ಸಂಕ್ರಾಂತಿ ವೇಳೆ ಎಳ್ಳುಬೆಲ್ಲ + ಸಕ್ರೆಅಚ್ಚು ಡಿಸ್ಟ್ರಿಬ್ಯೂಟಿಸುವ ಕ್ರಮ ಬೆಂಗಳೂರಲ್ಲಿದೆ ತಾನೆ?) ಗೌಡರು some ಕ್ರಾಂತಿ ಮಾಡಲಿದ್ದಾರೆ ಎಂದು ತಿಳಿದುಕೊಳ್ಳತಕ್ಕದ್ದು!

3) ಸಕ್ರಿಯ ಕಪ್ಪೆ ಎಸೆತಕ್ಕೆ ’ದೂಸರಾ’ (ಕೆಲ ವರ್ಷಗಳ ಹಿಂದೆ ಕ್ರಿಕೆಟ್ ಚೆಂಡೆಸೆತದ ವಿಷಯದಲ್ಲಿ ಕೇಳಿಬಂದ ತಕರಾರು) ಇಲ್ಲವೇ?

June 25, 2007 7:31 PM  
Blogger v.v. said...

ಎಚ್.ಪಿ.ಎನ್.,

ಇವತ್ತಿನ ವಿಜಯ ಕರ್ನಾಟಕದ ಪ್ರಕಾರ, ಬೆಂಗಳೂರಿನ ಕಪ್ಪೆಗಳು ಮಾತ್ರ ಅಲ್ಲ, ಇಡೀ ಭಾರತದ ಕಪ್ಪೆಗಳ ವಿಷಯ ಅರುಣ್ ಶೌರಿಯವರಿಗೆ ತಿಳಿದಂತಿದೆ. ಆದರೆ ಒಂದು ಬೇಜಾರಿನ ವಿಷಯ: ಶೌರಿ ಕಪ್ಪೆಗಳನ್ನು ಬೇಯಿಸೋ ವಿಷಯ ಪ್ರಸ್ತಾಪಿಸಿದ್ದಾರೆ.

ವಿಚಿತ್ರಾನ್ನದಾನಿಗಳಿಗೆ,

ಭೋ ಪರಾಕ್!

ಸದ್ಯ ತಲೆಬರಹ ಮಾತ್ರ ಡಿಸೆಕ್ಟ್ ಮಾಡೋ ಯೋಚನೆ ಬಂತಲ್ಲ. ನಮ್ಮ ಪುಣ್ಯ!

ವಂದನೆಗಳೊಂದಿಗೆ,

ವಿ.ವಿ.

June 28, 2007 1:28 PM  

Post a Comment

Links to this post:

Create a Link

<< Home