ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 21, 2007

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ಇಲ್ಲ - ಸಿ.ಎಂ.

ಬೆಂಗಳೂರು, ಜೂನ್ ೨೦: ನಿನ್ನೆಯಷ್ಟೇ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ ಎಂದಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಇಂದು ಸಾಹಿತಿಗಳ ವಿವಾದಕ್ಕೆ ಸರ್ಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

ರೀಮೇಕ್ ಚಲನಚಿತ್ರಗಳಿಗೂ ಸರ್ಕಾರದ ಸಬ್ಸಿಡಿ ಬೇಡಿರುವ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮುಖ್ಯ ಮಂತ್ರಿಗಳು, ಸಾಹಿತಿಗಳ ವಿವಾದ ಸ್ವಮೇಕ್ ಎಂದು ಒಪ್ಪಿಕೊಂಡರಾದರೂ, "ಸಾಹಿತಿಗಳ ಜಗಳಕ್ಕೆ ಯಾರ್ರೀ ಕೊಡ್ತಾರೆ ಸಬ್ಸಿಡಿ? ಏನು ತಮಾಷೆನಾ?" ಎಂದು ಈ ವಿಷಯ ಪ್ರಶ್ನಿಸಿದ ನಮ್ಮ ವರದಿಗಾರರ ಮೇಲೆ ರೇಗಿದರು.
ಯೋಚನೆ ಮಾಡಬೇಕಾದ ವಿಚಾರ: ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ನೀಡುವ ಬಗ್ಗೆ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಖ್ಯಾತ ಸಾಹಿತ್ಯ ವಿವಾದ ತಜ್ಞ ರವಿ ಬೆಳಗೆರೆಯವರು, "ಮೊದಲನೆಯದಾಗಿ ವಿವಾದ ೧೦೦% ಸ್ವಮೇಕ್. entertainment value ಅಂತೂ ಇದ್ದೇ ಇದೆ. ಜೊತೆಗೆ ಮೆಸೇಜ್ ಸಹ ಇದೆ. ಮೊನ್ನೆ ನಮ್ಮ ಸ್ಕೂಲ್ ಮುಂದೆ ಹುಡುಗ್ರು ಜಗಳ ಆಡ್ತಿದ್ರು. ಆಫೀಸ್‌‍ಗೆ ಕರೆಸಿ, ಏನ್ರೋ ಒಳ್ಳೆ ಕನ್ನಡ ಸಾಹಿತಿಗಳ ತರ ಕಚ್ಚಾಡ್ತೀರಲ್ಲ ಅಂದೆ. ಅಷ್ಟೇ ಸಾಕು, ಜಗಳ ಪೂರ್ತಿ ನಿಲ್ಲಿಸಿದರು. ಸಬ್ಸಿಡಿ ಕೊಡಬೇಕು ಅನ್ನೋದು ಯೋಚನೆ ಮಾಡಬೇಕಾದ ವಿಚಾರ" ಎಂದರು.

Labels: , ,

3 Comments:

Anonymous someone-you-know said...

ಮನರಂಜಕವಲ್ಲದ ಮನರಂಜನೆಗೆ ಸಬ್ಸಿಡಿ ಸಿಗುವಾಗ ಮನರಂಜಕ ಮನರಂಜನೆಗೆ ಅದು ಸಲ್ಲದೆಂದು ಚಿಕ್ಕ ಗೌಡ್ರು ಹೇಳಿದರೆಂಬ ಮನರಂಜಕ ಸುದ್ದಿ ಮನರಂಜನೆಯಿಲ್ಲದ ನಮ್ಮಂಥ ಸೈಬರ್ ಝಾಂಬೀಗಳಿಗೆ ಸಕ್ಕತ್ ಮನರಂಜನೆಯಾಯ್ತು. ಈಗ ಸಬ್ಸಿಡಿ ಮನರಂಜಿಸಿಕೊಂಡವರಿಗೂ ಸಿಗಬಹುದೋ?

June 21, 2007 1:24 PM  
Anonymous sritri said...

ಮಜಾವಾಣಿ ಸಂಪಾದಕರೇ, ನಿಮ್ಮ ಪತ್ರಿಕೆ ಸರಿಯಾಗಿ ಬರದೆ ನಮಗೆ ಮನರಂಜನೆಯೇ ಕಡಿಮೆಯಾಗಿದೆ.:)

June 21, 2007 1:35 PM  
Blogger v.v. said...

ಪರಿಚಿತರೇ,
ಮಜಾವಾಣಿಗೂ ಸಬ್ಸಿಡಿ ಸಿಗಬಹುದೇ ಎಂಬ ಆಶೆ ನಮ್ಮದು.

ಶ್ರೀತ್ರಿಯವರೇ,
ನಮ್ಮ ಪತ್ರಿಕೆ ಅಷ್ಟು ಹಾಸ್ಯಾಸ್ಪದವಾಗಿದೆಯೇ?

ವಂದನೆಗಳು.

June 22, 2007 2:58 PM  

Post a Comment

Links to this post:

Create a Link

<< Home