ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, June 20, 2007

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ - ಮು.ಮಂ.

ಬೆಂಗಳೂರು, ಜೂನ್ ೧೯: ಕನ್ನಡ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ವಿಧಿಸುವ ಸಂಭವವನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ.

ಈ ವಿಷಯದ ಕುರಿತು ಪತ್ರಕರ್ತರೊಡನೆ ಮಾತನಾಡಿದ ಕುಮಾರಸ್ವಾಮಿಯವರು, "ಮನರಂಜನೆ ಒದಗಿಸುವವರ ಮೇಲೆಲ್ಲಾ ಮನರಂಜನಾ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಅದರಲ್ಲೂ ನಿರುದ್ದೇಶವಾಗಿ ಬಿಟ್ಟಿ ಮನರಂಜನೆ ಒದಗಿಸುತ್ತಿರುವವರ ಮೇಲೆ ಯಾವುದೇ ತೆರಿಗೆ ವಿಧಿಸುವುದು ಕಾನೂನಿನ ಪ್ರಕಾರ ಸಾಧ್ಯವೇ ಇಲ್ಲ" ಎಂದಿದ್ದಾರೆ.

ಇತ್ತೀಚೆಗೆ ಕನ್ನಡದ ಹೆಸರಾಂತ ಸಾಹಿತಿಗಳು ಪ್ರತಿದಿನ ಉಚಿತ ಮನರಂಜನೆ ನೀಡುತ್ತಿದ್ದು, ಸಾರ್ವಜನಿಕರಲ್ಲಿ ಅವರ ಮೇಲೆ ಸರ್ಕಾರ ಮನರಂಜನಾ ಶುಲ್ಕ ವಿಧಿಸಬಹುದೆಂಬ ಶಂಕೆ ಮೂಡಿತ್ತು.

Labels: , ,

4 Comments:

Blogger shiva said...

:-)

June 21, 2007 12:40 AM  
Blogger v.v. said...

!

June 22, 2007 2:59 PM  
Anonymous ಎಚ್ ಪಿ ಎನ್ said...

:P

June 25, 2007 4:31 PM  
Blogger sunaath said...

ಅಜ್ಞಾನ ಪೀಠವೇರಿದ ಆಸ್ಥಾನ ವಿದೂಷಕರ ಮೇಲೆ ವೃತ್ತಿ ತೆರಿಗೆ ಹಾಕುವದು ಯೋಗ್ಯವಾದದ್ದು. ಸಾಹಿತಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗುತ್ತಿದ್ದಾಗ ಶಾಸಕರಿಗೆ ಹಾಗು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಬೇಕು.

June 26, 2007 6:07 AM  

Post a Comment

Links to this post:

Create a Link

<< Home