ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, June 16, 2007

ಮಜಾವಾಣಿ: ತನಿಖಾ ವರದಿ

ಅಮೆರಿಕದ ಸೇನೆಗೆ ಭಾರತದ ಚಡ್ಡಿ?
ವಾಷಿಂಗ್‌ಟನ್ ಡಿ.ಸಿ., ಜೂನ್ 16: ಇರಾಕಿನಲ್ಲಿ ಅಮೆರಿಕದ ಸೇನೆ ಅನುಭವಿಸುತ್ತಿರುವ ಸೋಲಿಗೆ, ಅಲ್ಲಿನ ಸೆಖೆಯಲ್ಲೂ ಅಮೆರಿಕದ ಸೈನಿಕರು ಪೂರ್ಣ ಪ್ಯಾಂಟ್ ಧರಿಸುತ್ತಿರುವುದೇ ಕಾರಣವೆಂದು ಅರಿತಿರುವ ಅಮೆರಿಕದ ಅಧ್ಯಕ್ಷ ಬುಶ್, ತಕ್ಷಣವೇ ಅಮೆರಿಕನ್ ಸೈನಿಕರಿಗೆ ಖಾಕಿ ಚಡ್ಡಿಗಳನ್ನು ನೀಡುವಂತೆ ಆಜ್ಞೆ ಮಾಡಿದ್ದಾರೆ. ಈ ಖಾಕಿ ಚಡ್ಡಿಗಳನ್ನು ಸರಬರಾಜು ಮಾಡಲು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯನ್ನು ಅಮೆರಿಕದ ರಕ್ಷಣಾ ಸಚಿವಾಲಯ ಆಯ್ಕೆ ಮಾಡಿದ್ದು, ಇನ್ಫೋಸಿಸ್ ಸದ್ಯದಲ್ಲಿಯೇ 5೦೦,೦೦೦ ಖಾಕಿ ಚಡ್ಡಿಗಳನ್ನು ಪೆಂಟಗನ್ನಿಗೆ ರವಾನಿಸಲಿದೆ.


ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿಯವರು ಮತ್ತು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಈ ಕುರಿತು ಅತಿ ಗುಪ್ತ ಒಪ್ಪಂದವೊಂದನ್ನು ಮಾಡಿಕೊಂಡಿರುವರೆನ್ನಲಾಗಿದ್ದು, ಇನ್ಫೋಸಿಸ್ ಸಂಸ್ಥೆ ಇದೇ ಮೊದಲ ಬಾರಿಗೆ ಸಾಫ್ಟ್‌ವೇರಿನಿಂದ ಮಿಲಿಟರಿ ಉಡುಪುಗಳ ವಹಿವಾಟಿಗೆ ಕೈಹಾಕಿದೆ.

ಇತ್ತೀಚೆಗೆ ನ್ಯೂಯಾರ್ಕಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ, ನಾರಾಯಣಮೂರ್ತಿಯವರು ಎಸ್.ಎಲ್.ಭೈರಪ್ಪನವರ ಆವರಣ ಕಾದಂಬರಿಯನ್ನು ಓದುತ್ತಿದ್ದುದು ಈ ರಹಸ್ಯ ಒಪ್ಪಂದ ಬೆಳಕಿಗೆ ಬರಲು ಕಾರಣವಾಗಿದೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ. ಈ ಪುಸ್ತಕವನ್ನು ತನ್ನ ಸೀಕ್ರೆಟ್ ಕೋಡ್ ಬುಕ್ಕಾಗಿ ಬಳಸುತ್ತಿರುವ ಎಲ್ಲ ಸಾಧ್ಯತೆಗಳಿದ್ದು, ಭಾರತದ ಉದ್ಯಮಿಗಳು ಅದನ್ನು ಓದುತ್ತಿರುವುದು ಬುಷ್ ಜೊತೆಗಿನ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ.

ಖ್ಯಾತ ಸಾಹಿತಿ, ಚಿಂತಕ ಮತ್ತು ನಮ್ಮ ಪತ್ರಿಕೆಯ ಮಿಲಿಟರಿ-ಬಂಡವಾಳಷಾಹಿ ತಜ್ಞ ಡಾ.ಯು.ಆರ್.ಅನಂತಮೂರ್ತಿಯವರು ಈ ಅತ್ಯಂತ ಗೋಪ್ಯ ರಹಸ್ಯ ಹೊರಬೀಳಲು ಕಾರಣರಾಗಿದ್ದು, ಆವರಣದ ಕುರಿತಾದ ತಮ್ಮ ಭಾಷಣದಲ್ಲಿ ಉದ್ಯಮಿಗಳ ಮತ್ತು ಬುಷ್ ನಡುವಿನ ಈ ಒಳ ಒಪ್ಪಂದವನ್ನು ಸಾಕ್ಷ್ಯಾಧಾರಸಮೇತ ಬಯಲಿಗೆಳೆದಿದ್ದಾರೆ.

Labels: , , , ,

5 Comments:

Anonymous Anonymous said...

ಬುಷ್ ಅವರ ವಾಚಿಗಾದ ಗತಿ (http://politicalticker.blogs.cnn.com/2007/06/12/mystery-surrounding-bushs-watch-solved/) ಅವರ ಚಡ್ದಿಗಾಗದಿರಲಿ ಅಂತ ಹಾರೈಸೋಣ.

June 17, 2007 4:14 AM  
Anonymous Thejesh GN said...

sooper :)

June 21, 2007 1:37 AM  
Blogger v.v. said...

ಅನಾನಿಮಸರೇ,
ವಾಚಿನ ಬೆಲ್ಟಿಗಿಂತ ಚಡ್ಡಿಯ ಬೆಲ್ಟ್ ಉತ್ತಮ ಮಟ್ಟದ್ದಿರಲಿ ಎಂದೇ ಮಜಾವಾಣಿಯ ಆಶಯ.

ತೇಜೇಶ್ ಜಿ.ಎನ್.,
ಧನ್ಯವಾದ.

ವಂದನೆಗಳು.

June 22, 2007 3:03 PM  
Anonymous Anonymous said...

skhathagide.....!!!!!!!! Superb!!

November 29, 2007 3:47 AM  
Blogger v.v. said...

ಅನಾನಿಮಸರಿಗೆ ನಮಸ್ಕಾರ.

ನಿಮ್ಮ ಮೆಚ್ಚುಗೆಯನ್ನು ನಮ್ಮ ತನಿಖಾ ವರದಿಗಾರರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು.

ವಂದನೆಗಳೊಂದಿಗೆ,

ವಿ.ವಿ.

November 29, 2007 8:15 AM  

Post a Comment

Links to this post:

Create a Link

<< Home