ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, April 23, 2007

ಮಜಾವಾಣಿ: ವ್ಯಾಪಾರ - ತಂತ್ರಜ್ಞಾನ


ಪಾಮ್ ಪ್ರಿಂಟರ್: ಎಚ್.ಪಿ. ಸಂಸ್ಥೆಯ ನೂತನ ಪ್ರಿಂಟರ್ ಸದ್ಯದಲ್ಲೇ ಮಾರುಕಟ್ಟೆಗೆ
ಬೆಂಗಳೂರು ಏಪ್ರಿಲ್ ೨೪:
ಈಗಾಗಲೇ ಹಲವಾರು ವಿಧದ ಕಂಪ್ಯೂಟರ್ ಪ್ರಿಂಟರುಗಳನ್ನು ಮಾರುಕಟ್ಟೆಗೆ ತಂದಿರುವ ಎಚ್.ಪಿ. ಸಂಸ್ಥೆ, ಸದ್ಯದಲ್ಲಿಯೇ ವಿನೂತನ ಪಾಮ್ ಪ್ರಿಂಟರುಗಳನ್ನು ಮಾರುಕಟ್ಟೆಗೆ ತರಲಿದೆ.
ನಿನ್ನೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಎಚ್.ಪಿ. ಸಂಸ್ಥೆಯ ತಂತ್ರಜ್ಞಾನ ಮುಖ್ಯಸ್ಥ ಎರಿಕ್ ವಾನ್ ಡಾನಿಕೆನ್ "ಭಾರತೀಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವಲ್ಲಿ ಈ ಪ್ರಿಂಟರುಗಳು ಮಹತ್ವದ ಪಾತ್ರ ವಹಿಸಲಿವೆ. ಭಾರತೀಯ ಲೇಖಕರು, ಸಾಹಿತಿಗಳು ಈ ಪ್ರಿಂಟರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು" ಎಂದು ಕರೆ ಇತ್ತರು.
ಕರ್ನಾಟಕ ಗಣಕ ಸಂಗ್ರಾಮ ಪರಿಷದ್ ನೆರವಿನೊಂದಿಗೆ ನಿರೂಪಿಸಲಾದ ಅಪ್ಪಟ ಭಾರತೀಯ ತಂತ್ರಜ್ಞಾನದಿಂದ ಈ ಪ್ರಿಂಟರ್ ಅನ್ನು ನಿರ್ಮಿಸಲಾಗಿದ್ದು, ತಾಳೆ ಗರಿಯ ಮೇಲೆ ಮುದ್ರಿಸಬಲ್ಲ ಜಗತ್ತಿನ ಪ್ರಪ್ರಥಮ ಪ್ರಿಂಟರ್ ಇದಾಗಿದೆ.
ಬರಗೂರು ಹರ್ಷ: ಪಾಮ್ ಪ್ರಿಂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ಈ ಪ್ರಿಂಟರ್ ಕುರಿತು ತಮ್ಮ ಹರ್ಷ ವ್ಯಕ್ತಪಡಿಸಿದರು. "ಇದೊಂದು ಅತ್ಯಂತ ಆರೋಗ್ಯಕರ ಬೆಳವಣಿಗೆ" ಎಂದ ಅವರು, "ಇಲ್ಲಿಯವರೆಗೆ ತಾಳೆಗರಿಗಳು ಬಹುಮಟ್ಟಿಗೆ ಶೋಷಕ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಈ ಪ್ರಿಂಟರ್‌ನಿಂದಾಗಿ, ಬಂಡಾಯ ಸಾಹಿತ್ಯದಂತಹ ಪ್ರೋಗ್ರೆಸ್ಸಿವ್ ಸಾಹಿತ್ಯ ಸಹ ತಾಳೆಗರಿಯಲ್ಲಿ ಲಭ್ಯವಾಗಲಿದೆ. ನನ್ನ 'ಶಬರಿ' ಕಾದಂಬರಿಯನ್ನು ತಾಳೆಗರಿಯ ಮೇಲೆ ಮುದ್ರಿತ ಲಿಮಿಟೆಡ್ ಡೀಲಕ್ಸ್ ಎಡಿಷನ್ನಿನಲ್ಲಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದೇನೆ" ಎಂದರು.

Labels:

5 Comments:

Anonymous ಗುತ್ತ್ತಿ said...

ನೋ ಕಾಮೆಂಟ್! :P

(ಇಲ್ಲಿ ಕಾಮೆಂಟ್ ಇಲ್ಲಾಂತಲ್ಲ)

April 23, 2007 2:50 PM  
Anonymous Anonymous said...

ಈ ಪ್ರಿಂಟರನ್ನು ಬರಗೂರು ಸ್ವಾಗತಿಸಿರುವುದರಿಂದ ಹಲವು ಅನುಮಾನಗಳು ಕಾಡುತ್ತಿವೆ. ಇವನ್ನು ಬಳಸಿ ಪ್ರಾಚೀನ ಕಾಲದಲ್ಲಿಯೇ ಡಂಬಾಯ ಸಾಹಿತ್ಯವಿತ್ತು ಎಂದು ಸಾಧಿಸಲು ತಾಳೆಗರಿಗಳನ್ನು ಮುದ್ರಿಸಬಹುದೇ?

April 24, 2007 9:50 AM  
Blogger Shiv said...

ಆಹಾ ! ಎಂತಹ ಅದ್ಬುತ ಸುದ್ದಿ..
ಪ್ರಾಚೀನ ತಾಳೆಗರಿಗಳ ತರ ಹೆಚ್.ಪಿ.ತಾಳೆಗರಿಗಳು ಅಂತಾ ಹೇಳಬೇಕಾಗುತ್ತೆ :)
ಬರಗೂರು ಆ ತಾಳೆಗರಿಯ ಜೊತೆ ಪೋಟೋ ತಗೆಸಿಕೊಳ್ಳುವಾಗ ಆ ಬಾಲೆ ಅಲ್ಲೇನು ಮಾಡ್ತೀಯಾಳೇ?

April 26, 2007 1:39 AM  
Anonymous Anonymous said...

ಎರಿಕ್ ವ್ಯಾನ್ ಡೆನಿಕೆನ್ !
ಬರಗೂರು ರಾಮಚಂದ್ರಪ್ಪ !

ಬಹಳ ಚೆನ್ನಾಗಿದೆ.

May 11, 2007 10:32 AM  
Blogger Karthik said...

ಇದೇನು ಮಜಾವಾಣಿ ನಿಂತು ಹೋಗಿರೋ ಹಾಗಿದೆ??

May 18, 2007 1:25 AM  

Post a Comment

Links to this post:

Create a Link

<< Home