ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 09, 2007

ಮಜವಾಣಿ: ಜಲ ಕ್ರೀಡೆ

ಕಾವೇರಿ ಮರು ನಾಮಕರಣಕ್ಕೆ ಪೂರ್ಣ ಸಿದ್ಧತೆ!

ಬೆಂಗಳೂರು ಫೆಬ್ ೧೦: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಜಲ ವಿವಾದದ ಕೇಂದ್ರ ಬಿಂದುವಾಗಿರುವ ಕಾವೇರಿ ನದಿಗೆ ಕರ್ನಾಟಕ ಸರ್ಕಾರ ಮರು ನಾಮಕರಣಮಾಡಲು ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ವಿಚಾರ ನಮ್ಮ ಪತ್ರಿಕೆಗೆ ತಿಳಿದು ಬಂದಿದೆ. ಈ ವಿಚಾರದ ಕುರಿತು ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ನಮ್ಮ ವರದಿಗಾರರು ಪ್ರಶ್ನಿಸಿದಾಗ ಅವರು ಯಾವುದೇ ಉತ್ತರವನ್ನು ನೀಡಲು ಒಪ್ಪಲಿಲ್ಲ.

ಆದರೆ, ಖ್ಯಾತ ಜಲ ವಿವಾದ ಕಾನೂನು ತಜ್ಞ ಮತ್ತು ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ. ಜಲ್ಜಿತ್ ಸಿಂಗ್ ಬಾರನ್‌ಲಾ ಅವರು ಕೆಲವು ದಿನಗಳ ಹಿಂದೆ ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಾವೇರಿಗೆ ಮರು ನಾಮಕರಣ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ್ದುದು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಡಾ.ಬಾರನ್‌ಲಾ ಅವರ ಪ್ರಕಾರ, ಕರ್ನಾಟಕದಲ್ಲಿ ಕಾವೇರಿ ಎಂಬ ನದಿಯೇ ಇಲ್ಲದಿದ್ದಾಗ ಅದರ ನೀರನ್ನು ತಮಿಳು ನಾಡಿನೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭಸಿವುದಿಲ್ಲ. ತಮಿಳು ನಾಡು ಈ ಮರು ನಾಮಕರಣವನ್ನು ಪ್ರಶ್ನಿಸಿ ನ್ಯಾಯಲಯಕ್ಕೆ ಹೋದರೂ ಸದ್ಯಕ್ಕೆ ಅಂತಹ ತೊಂದರೆಯೇನೂ ಇಲ್ಲ. ಅಂತಿಮ ತೀರ್ಪಿಗೆ ಹಲವಾರು ದಶಕಗಳೇ ಬೇಕು, ಅಷ್ಟೇ ಅಲ್ಲ, ಅಲ್ಲಿಯ ವರೆಗೆ ನೀರು ಹಂಚಿಕೆಯ ವಿವಾದ ನದಿ ಹೆಸರಿನ ವಿವಾದವಾಗಿ ಬದಲಾಗಿರುತ್ತದೆ.

Labels:

4 Comments:

Blogger Sreeharsha said...

ಆತ್ಮೀಯ Someಪಾದಕರೆ,
ಕಾವೇರಿಗೆ ಯಾವ ಹೆಸರು ಇಡಬಹುದು ಎ೦ಬ ಊಹೆ ನಿಮಗಿದೆ? ಅಥವಾ ಯಾವ ಹೆಸರು ಅದಕ್ಕೆ suit ಆಗುತ್ತೆ ಎ೦ದು ನಿಮ್ಮ ಅನಿಸಿಕೆ.

~ಶ್ರೀಹರ್ಷ

March 09, 2007 9:21 PM  
Blogger Shiv said...

ವಿವಿಯವರೇ,
ಕಾವೇರಿಗೆ ಹೊಸ ಹೆಸರು ಎನು ಇಡಬೇಕೆಂದು ಸಧ್ಯದಲ್ಲೇ ಸರ್ವಪಕ್ಷಸಭೆ ಕರೆಯುತ್ತಿದ್ದರಂತೆ ??

ಹಾಗೇ ಈಗ ಚಾಲ್ತಿಯಲ್ಲಿ ಇರುವ ಹಾಗೆ..ಅದಕ್ಕೆ 'ದೇವಗೌಡ ಸ್ಮಾರಕ ಹೊಳೆ', 'ಕುಮಾರಧಾರೆ' ಅಂತಾ ಹೆಸರಿಡಬಹುದಂತೆ

March 10, 2007 4:51 PM  
Blogger Dr U B Pavanaja said...

ಶಿವ್: ಕುಮಾರಧಾರೆ ಎಂಬ ನದಿ ದಕ್ಷಿಣ ಕನ್ನದಲ್ಲಿ ಹರಿಯುತ್ತಿದೆ. ಆದುದರಿಂದ ಆ ಹೆಸರು ಇಡುವಂತಿಲ್ಲ.

ವಿವಿ: ನೀವು ಕಾವೇರಿ ನದಿಯನ್ನು (ವಿವಾದದ) ಕೇಂದ್ರ ಬಿಂದು ಎಂದು ಕರೆದುದರ ಔಚಿತ್ಯ ಅರ್ಥವಾಗಲಿಲ್ಲ. ಕಾವೇರಿಯನ್ನು ಎಲ್ಲರೂ ನದಿ ಎನ್ನುತ್ತಿರುವಾಗ ನೀವು ಅದನ್ನು ಬಿಂದು ಎಂದು ಕರೆದುದು ಉದ್ದೇಶಪೂರ್ವಕವೇ ಅಥವಾ ಕುಟ್ಟೋರಾಕ್ಷಸನ ಹಾವಳಿಯೇ ಗೊತ್ತಾಗಲಿಲ್ಲ.ಅಥವಾ 2020ರಲ್ಲಿ ಕಾವೇರಿ ನದಿಯಾಗುಳಿಯದೆ ಕೇವಲ ಬಿಂದುವಾಗುಳಿಯುತ್ತಾಳೆ ಎಂಬುದರ ಮುನ್ಸೂಚನೆಯೋ?

-ಪವನಜ

March 11, 2007 10:33 AM  
Anonymous SJ said...

So, Kave"re"named?

March 11, 2007 2:46 PM  

Post a Comment

Links to this post:

Create a Link

<< Home