ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 02, 2007

ಮಜಾವಾಣಿ: ಕ್ರೈಮ್ ಸ್ಟೋರಿ


ಈಜುಡುಗೆ ತೊಟ್ಟು ನಡುಬೀದಿಯಲ್ಲಿ ನಿಂತಿದ್ದ ಸಂಪಾದಕನ ಬಂಧನ!
ಬೆಂಗಳೂರು ಫೆಬ್. ೨೩: ಈಜುಡುಗೆ ತೊಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.

ಈಜುಡುಗೆ ತೊಟ್ಟು ನಗರದ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಸಂಪಂಗಿ ರಾಮ ದೇವಸ್ತಾನದ ಬೀದಿ ಮುಂತಾದ ಪ್ರಮುಖ ರಸ್ತೆಗಳಲ್ಲಿ ನಿಂತು, ಕಂಡ ಕಂಡವರಿಗೆಲ್ಲಾ ಮುಗಳ್ನಗೆಯನ್ನು ಬೀರುತ್ತಿದ್ದ ವ್ಯಕ್ತಿಯ ಬಗೆಗೆ ಕಳೆದ ಕೆಲವು ದಿನಗಳಿಂದ ನಗರದೆಲ್ಲೆಡೆ ಭಯ ಮಿಶ್ರಿತ ಕುತೂಹಲ ಮನೆ ಮಾಡಿತ್ತು. ಹಲವರು ಈತನೊಬ್ಬ ವಿದೇಶಿ ಬೇಹುಗಾರನಿರಬೇಕೆಂಬ ಸಂದೇಹ ವ್ಯಕ್ತಪಡಿಸಿದ್ದರೆ, ಇನ್ನೂ ಹಲವರು "ಕರ್ನಾಟಕದಲ್ಲಿ ನೀರಿಗೇನೂ ಕೊರತೆ ಇಲ್ಲ. ಬೀದಿ-ಬೀದಿಗಳಲ್ಲೂ ಸ್ವಿಮ್ಮಿಂಗ್ ಪೂಲ್ ಇದೆ" ಎಂದು ತೋರಿಸಲು ತಮಿಳು ನಾಡಿನವರು ಮಾಡಿರುವ ಸಂಚಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪೋಲೀಸರ ಕ್ಷಿಪ್ರಾಚರಣೆಯಿಂದ ಬೆಂಗಳೂರಿನ ಜನತೆ ಈಗ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಿದೆ.

ನಿರಾಕರಣೆ: ಪೋಲೀಸರ ಬಂಧನಕ್ಕೆ ಒಳಗಾಗಿದ್ದು ತಾವೇ ಎಂಬುದನ್ನು ಮಜಾವಾಣಿ ಸಂಪಾದಕರು ನಿರಾಕರಿಸಿದ್ದಾರೆ. ತಮ್ಮ ಈಜುಡುಗೆಯ ಕುರಿತು ಮಾತನಾಡಲು ಇಚ್ಛಿಸದ ಅವರು, "ಇಂಡಿಬ್ಲಾಗೀಸ್ ಪ್ರಶಸ್ತಿಯ ಆಯೋಜಕರಾಗಲೀ, ಕಳೆದ ಬಾರಿಯ ಪ್ರಶಸ್ತಿ ವಿಜೇತ ಕನ್ನಡವೇ ನಿತ್ಯ ಬ್ಲಾಗಿನ ಎಂ.ಎಸ್.ಶ್ರೀರಾಂ ಆಗಲಿ, ಕೊನೆಗೆ ಸಂಪದದ ನಾಡಿಗರಾಗಲೀ, ಈ ಸ್ಪರ್ಧೆಯಲ್ಲಿ ಸ್ವಿಮ್ ಸ್ಯೂಟ್ ರೌಂಡ್ ಇಲ್ಲ ಎಂದು ಎಲ್ಲೂ ತಿಳಿಸಿಲ್ಲ. ಇದು ನಮ್ಮ ಪತ್ರಿಕೆಯ ಘನತೆಗೆ ಕುಂದು ತರಲು ನಮ್ಮನ್ನು ನೋಡಿ ನಗುವ ಜನರು ಮಾಡಿರುವ ವ್ಯವಸ್ಥಿತ ಸಂಚು!" ಎಂದು ಆವೇಶಭರಿತರಾಗಿ ನುಡಿದರು.
["ಓದುಗರ ಮೆಚ್ಚಿಕೆಗಿಂತ ಹೆಚ್ಚಿನ ಪ್ರಶಸ್ತಿ ಇಲ್ಲ" ಎಂಬ ಮಾತು ನಿಜವಾದರೂ, ಇಂಡಿಬ್ಲಾಗೀಸ್ ಪುರಸ್ಕಾರ ಸಂತೋಷ ತಂದಿದೆ ಎಂಬುದೂ ನಿಜ. ನನ್ನ ಬ್ಲಾಗನ್ನು ಮೆಚ್ಚಿ ಮತ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು. - ಶೇಷಾದ್ರಿ]

Labels:

6 Comments:

Anonymous ಶ್ರೀವತ್ಸ ಜೋಶಿ said...

'ಈಸಬೇಕು ಇದ್ದು ಜೈಸಬೇಕು...' ಎಂದು ಪುರಂದರದಾಸರು ಹೇಳಿದ್ದಾದರೆ ಈ ಆಸಾಮಿ ಅದನ್ನು
'ಜೈಸಬೇಕು (ಇಂಡಿಬ್ಲಾಗ್ ಪ್ರಶಸ್ತಿಯನ್ನು )ಜೈಸಿ ಈಜಬೇಕು' ಎಂದು ಟ್ವಿಸ್ಟಿಸಿದಂತಿದೆಯಲ್ಲ!?

March 02, 2007 6:27 AM  
Blogger ಅಸತ್ಯ ಅನ್ವೇಷಿ said...

ಅಕ್ಷರಗಳಿಂದ ಮಜಾ ಮಾಡೋ.... ಅಲ್ಲಲ್ಲ ಮಜಾ ಕೊಡೋ.... ಸಂಪಾದಕರಿಗೆ ಅಭಿನಂದನೆಗಳು.

ಒಂದು ತಿದ್ದುಪಡಿ: ಇದು ನಿಮ್ಮನ್ನು ನೋಡಿ ನಗುವ ಜನರು ಅಲ್ಲ, ನಿಮ್ಮ ವಿದೂಷಕರ ಬರಹ ನೋಡಿ ನಗುವ ಜನರು ಮಾಡಿರುವ ಸಂಚು ಎಂದು ಸ್ಪಷ್ಟಪಡಿಸುತ್ತಿದ್ದೇವೆ.

March 02, 2007 10:41 PM  
Blogger Shiv said...

ವಿವಿ ಅವರೇ,

ಇಂಡಿಬ್ಲಾಗ್‍ಗೆ ಅಭಿನಂದನೆಗಳು !

ಅಂದಾಗೆ ನೀವು ಸ್ವೀಮ್ ಸೂಟ್ ಎಲ್ಲಿಂದ ಖರೀದಿಸಿದ್ದು ?

March 04, 2007 2:10 PM  
Blogger Sreeharsha said...

ಥೇಟ್ ಅಣ್ಣಾವ್ರ Styleನಲ್ಲಿ ಹೇಳಬೇಕ೦ದ್ರೆ,

"ಪಾರ್ವತಿ ಪಾರ್ವತಿ.... ಇಲ್ಲ್ನೋಡು. ಆಹ್!!! ನಮ್ಮ್ ಕನ್ನಡ ನಾಡ್ನಲ್ಲಿ ಎ೦ತೆ೦ಥಾ ಮಕ್ಕಳಿದ್ದಾರೆ, ಏನೆಲ್ಲಾ ಪ್ರಶಸ್ತಿ ತಗೊ೦ಡಿದ್ದಾರೆ. ಇವ್ರನ್ನ ಪಡೆದ ನಾವೆ ಧನ್ಯ ಅಲ್ವಾ??? ಹ ಹ ಹ ಹ"

~ಶ್ರೀ ಹರ್ಷ

March 06, 2007 8:17 PM  
Blogger Fangyaya said...

nike blazers
supra sneakers
fitflops sale clearance
adidas nmd
toms shoes
true religion jeans
gucci handbags
jordan 13
jordan 3 infrared
polo ralph lauren
louis vuitton handbags
burberry outlet
jordan 8s
jordan 6
louis vuitton outlet stores
kobe bryant shoes
coach factory outlet online
adidas shoes
louis vuitton outlet
cheap oakleys
christian louboutin sale
coach outlet
nike air huarache
michael kors
louis vuitton outlet stores
louis vuitton handbags
adidas uk
michael kors outlet clearance
ray ban sunglasses
oakley outlet
coach outlet
ray ban sunglasses outlet
michael kors handbags
air jordan pas cher
rolex watches outlet
adidas originals shoes
coach outlet
michael kors outlet clearance
mont blanc pens
jordans for sale
20167.13chenjinyan

July 13, 2016 4:06 AM  
Blogger jeje said...

ecco outlet
superdry clothing
ugg boots clearance
canada goose
supreme shirt
christian louboutin outlet
off white shoes
nike shoes for women
hugo boss outlet
true religion outlet

July 13, 2018 9:10 PM  

Post a Comment

Links to this post:

Create a Link

<< Home