ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, February 19, 2007

ಮಜಾವಾಣಿ: ರಾಷ್ಟ್ರೀಯ ವಾರ್ತೆ


ಅಮಿತಾಬ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಣೆ!
ನವ ದೆಹಲಿ, ಫೆಬ್. ೨೦: ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ಕ್ರೀಡೆ... ಈಗ ಈ ಪಟ್ಟಿಗೆ ರಾಷ್ಟ್ರೀಯ ಎತ್ತರ ಸಹ ಸೇರಿದೆ!


ಇಂದು ಸಂಜೆ ನವ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅವರು ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಿಸಿದರು. "ಬಚನ್‌ಜೀಯವರ ಎತ್ತರ ಇಡೀ ರಾಷ್ಟ್ರಕ್ಕೇ ಒಂದು ಮಾದರಿಯಾಗಿದ್ದು, ಭಾರತದಲ್ಲಿ ಬೆಳೆಯುತ್ತಿರುವ ಮಕ್ಕಳೆಲ್ಲರೂ ಈ ಎತ್ತರಕ್ಕೆ ಬೆಳೆಯುವಂತೆ ತಂದೆ-ತಾಯಿಯರು, ಶಿಕ್ಷಕ-ಶಿಕ್ಷಕಿಯರು ಮಾತ್ರವಲ್ಲ ಇಡೀ ಸಮಾಜವೇ ಪ್ರೋತ್ಸಾಹಿಸಬೇಕು" ಎಂದರು.


ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರೀಯ ಮಾದರಿಯನ್ನು ಗುರುತಿಸಿ ಆ ದಿಕ್ಕಿನೆಡೆಗೆ ಇಡೀ ಭಾರತೀಯ ಸಮಾಜವನ್ನು ಕೊಂಡೊಯ್ಯಲು ರಾಷ್ಟ್ರೀಯ ಮಾದರಿ ಆಯೋಗವನ್ನು ಈಗಾಗಲೇ ಕೇಂದ್ರ ಸರ್ಕಾರ ನಿಯೋಜಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.


ಸ್ಪರ್ಧೆಯಲ್ಲಿ ಅಂಬಿ, ರಜನಿ? - ಸದ್ಯದಲ್ಲಿಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ "ರಾಷ್ಟ್ರೀಯ ನಡಿಗೆ"ಯನ್ನು ಘೋಷಿಸಲಿದ್ದು, ಮಂಡ್ಯದ ಗಂಡು ಅಂಬರೀಶ್ ಅವರ ನಡಿಗೆ ಸಹ ಕೇಂದ್ರ ರಾಷ್ಟ್ರೀಯ ಮಾದರಿ ಆಯೋಗದ ನಡಿಗೆ ಸಬ್ ಕಮಿಟಿ ತಯಾರಿಸಿರುವ ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಆದರೆ, ನವ ದೆಹಲಿಯ ಕೇಂದ್ರ ನಡಿಗೆ ವೀಕ್ಷಣಾಲಯದ ತಜ್ಞರ ಮಾತನ್ನು ನಂಬುವುದಾದರೆ, ರಾಷ್ಟ್ರೀಯ ನಡಿಗೆ ಮಾದರಿಗಾಗಿ ಅಂಬಿ ಮತ್ತು ದಕ್ಷಿಣ ಭಾರತದ ಖ್ಯಾತ ತಾರೆ ರಜನಿಕಾಂತ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದೊಂದು ಅಂತರರಾಜ್ಯ ವಿವಾದವಾಗುವ ಸಂಭವ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಒಂದು ರಾಜೀ ಸೂತ್ರದ ತಯಾರಿಯಲ್ಲಿದ್ದು ಅಂಬಿಯವರ ಎಡ ಹೆಜ್ಜೆ ಮತ್ತು ರಜನಿಕಾಂತ್ ಅವರ ಬಲ ಹೆಜ್ಜೆಯನ್ನು ಸೇರಿಸಿ "ರಾಷ್ಟ್ರೀಯ ನಡಿಗೆ" ಘೋಷಿಸುವ ಸಂಭವ ಸಹ ಇದೆ.

Labels: ,

6 Comments:

Anonymous hp said...

he he!

Can't get better :-)

Majavani at its best ;-)

February 19, 2007 5:18 PM  
Blogger Shiv said...

ವಿವಿಯವರೇ,

ರಾಷ್ಟೀಯ ಎತ್ತರಕ್ಕೆ ಏರಲು ಏಣಿಗಳ ಅವಶ್ಯಕತೆಯಿದ್ದು ನೀವು ಈ ವಿಷಯವನ್ನು ಮಾನ್ಯ ಸಂಪನ್ಮೂಲಕಾರಿ ಸಚಿವರಿಗೆ ತಿಳಿಸತಕ್ಕದ್ದು.

ಅಮಿತಾಭ್ ಎತ್ತರ ಕೇವಲ ಪುರುಷರಿಗೆ ಅನ್ವಯವಾಗುವುದೇ ಅಥವಾ ಮಹಿಳೆಯರಿಗೆ ಜಯಾ ಬಚ್ಚನ್ ಎತ್ತರ ಮಾದರಿಯೇ?

ರಾಷ್ಟ್ರೀಯ ನಡಿಗೆ ತೀರ್ಮಾನಿಸಲು ಒಂದು ಟ್ರಿಬ್ಯುನಲ್ ರಚಿಸಿ, ಮೊದಲೇ ರಜನಿಗೆ ಕೊಡಬೇಕೆಂಡು ತೀರ್ಮಾನಿಸಿ, ನಂತರ ೧೦ ವರ್ಷ ಕಾಲಹರಣ ಮಾಡಿ, ಕೊನೆಗೆ ರಜಿನಿಯೇದೇ ರಾಷ್ಟ್ರೀಯ ನಡಿಗೆಯೆಂದರಾಯಿತು..

February 19, 2007 8:19 PM  
Blogger Dr U B Pavanaja said...

ಹಾಗೆಯೇ ರಾಷ್ಟ್ರೀಯ ಮಟ್ಟಕ್ಕೆ ಏರಿದ, ಗೌರವ ಪಡೆದ ಮಜಾವಾಣಿಗೆ ಅಭಿನಂದನೆಗಳು.

-ಪವನಜ

February 23, 2007 1:14 AM  
Anonymous ಶೂನ್ಯಸಂಪಾದಕ said...

ಮಜಾವಾಣಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡದ್ದು ನಿಜಕ್ಕೂ ಮಜಾತರು ವಿಷಯ. ಮಜಾವಾಣಿಯ ಜೈತ್ರಯಾತ್ರೆ ಮುಂದುವರಿಯಲಿ.

February 23, 2007 10:22 AM  
Anonymous blackberry said...

ಮಜಾವಾಣಿ ಬ್ಯೂರೋಗೆ ಅಭಿನಂದನೆಗಳು!

ಈ ಬಾರಿಯ ನಾಮಿನೇಶನ್ನುಗಳು ಇಲ್ಲಿವೆ
ಮಜಾವಾಣಿ ನಿಜಕ್ಕೂ ಮಜವಾಗಿದೆ ಎಂದುಕೊಂಡು ಮತ ಚಲಾಯಿಸಿದವರಲ್ಲಿ ನಾನೂ ಒಬ್ಬ (ಅಥವ ನಾನೊಬ್ಬನೇ?)

(ತಮ್ಮ ಪಬ್ಲಿಸಿಟಿಗಾಗಿ ಯಾರೋ ನಿಮಗೆ ನೀಡಿದ ಅವಾರ್ಡು ಓದುಗನ ಮೆಚ್ಚುಗೆಗಿಂತ ದೊಡ್ಡದಲ್ಲ ಎಂಬುದು ಮಜಾವಾಣಿಯ ಸಂಪಾದಕರಿಗೆ ಗೊತ್ತಿಲ್ಲದಿಲ್ಲ, ಅಲ್ವೇ ಸಂಪಾದಕರೆ? ;-)

February 23, 2007 3:45 PM  
Anonymous ಶ್ರೀವತ್ಸ ಜೋಶಿ said...

"ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ" ಗೊತ್ತಿತ್ತು, ಈಗಿನ್ನು ರಾಷ್ಟ್ರೀಯ ಎತ್ತರ ಏರುವ ಸ್ಪರ್ಧೆ?

ಹಾಗೆಯೇ 'ರಾಷ್ಟ್ರೀಯ ನಡಿಗೆ' ಪರವಾ ಇಲ್ಲ. ಮಲ್ಲಿಕಾ ಶೆರಾವತ್‍ಳದು (ಏನಾದರೂ ಇದ್ದರೆ) ಅದು 'ರಾಷ್ಟ್ರೀಯ ಉಡುಗೆ' ಎಂದು ಘೋಷಿಸಲ್ಪಡುವ ಸಂಭವವಿದೆಯೇ?

February 25, 2007 10:43 AM  

Post a Comment

Links to this post:

Create a Link

<< Home