ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, February 05, 2007

ಮಜಾವಾಣಿ: ಸರ್ಕಾರಿ ಪ್ರಕಟಣೆ

ಕರನಾಟಕ ಸರ್ಕಾರ
ಅಧಿಸೂಚನೆ
ಕರ್ನಾಟಕದ ಹಲವಾರು ಸ್ಥಳಗಳಲ್ಲಿ -- ಬೆಂಗಳೂರನ್ನು ಹೊರತುಪಡಿಸಿ -- ಊರಿನ ಮೂರ್ಖ/ಮುಠ್ಠಾಳ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಹಲವಾರು ಊಹಾಪೋಹಗಳಿಗೆ ಮತ್ತು ವದಂತಿಗಳಿಗೆ ಕಾರಣವಾಗಿದೆ. ಒಂದೇ ಬಾರಿಗೆ ಕರ್ನಾಟಕದ ಹಲವಾರು ಊರುಗಳಿಂದ ಮೂರ್ಖರೂ, ಮುಠ್ಠಾಳರು ಒಟ್ಟಿಗೆ ನಾಪತ್ತೆಯಾಗಿರುವುದು ಆಶ್ಚರ್ಯದ ಮತ್ತು ಆಸಕ್ತಿಕರ ವಿಷಯವಾದರೂ, ಆನಂದ/ಆತಂಕ ಪಡಬೇಕಾದ ವಿಚಾರವಲ್ಲ.

ಇದೊಂದು ಕೇವಲ ಅಲ್ಪಕಾಲಿಕ ಪರಿಸ್ಥಿತಿ ಮಾತ್ರ. ಸಾರ್ವಜನಿಕರು ಈ ವಿಷಯದ ಕುರಿತು ಹೆಚ್ಚಿನ ಆನಂದ/ಆತಂಕ ವ್ಯಕ್ತಪಡಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ನೆನಪಿಡಿ: ಇದೊಂದು ತಾತ್ಕಾಲಿಕ ಪರಿಸ್ಥಿತಿ ಮಾತ್ರ. ಜನವರಿ ೨೫ರಿಂದ ಪ್ರಾರಂಭವಾದ ವಿಧಾನ ಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಪರಿಸ್ಥಿತಿ ಯಥಾಸ್ಥಿತಿಗೆ ಮರಳಲಿದೆ.
ಕ.ರಾ.ಸ.ಅ.ಸೂ. ೦೫/೦೨/೨೦೦೭-೪೨೦

Labels:

4 Comments:

Anonymous ಶ್ರೀವತ್ಸ ಜೋಶಿ said...

ಕರ್ನಾಟಕ ಸರಕಾರದ ಅಧಿಸೂಚನೆಯಿರಲಿ ಅಧಿಆದೇಶವಿರಲಿ ಅಧಿಕಪ್ರಸಂಗವಿರಲಿ ಅವನ್ನೆಲ್ಲ "ಕಸ" (ಶಾರ್ಟ್‍ಫಾರ್ಮ್)ಎಂಬ ಲೇಬಲ್ ಹಚ್ಚಿರುವ ಕ.ಬು ಫೋಲ್ಡರ್‍ಗೆ ರವಾನಿಸುವಂತೆ ಪ್ರಜೆಗಳು ತಂತಮ್ಮ ಔಟ್‍ಲುಕ್‍ಏಕ್ಸ್‍ಪ್ರೆಸ್‍ನಲ್ಲಿ ರೂಲ್ ಡಿಫೈನ್ ಮಾಡಿಕೊಂಡರೆ ಕ್ಷೇಮ.

February 05, 2007 8:53 AM  
Blogger Shiv said...

ಈ ಮುಠ್ಠಾಳರನ್ನು ಪರ್ಮೆನೆಂಟಾಗಿ ನಾಪತ್ತೆ ಮಾಡೋಕೆ ಏನಾದರೂ ಉಪಾಯವಿದೆಯೇ ವಿವಿಯವರೇ?

February 07, 2007 1:42 AM  
Blogger Sreeharsha said...

ನಮಸ್ತೆ,
ಮೊನ್ನೆ ದೂರದರ್ಶನದಲ್ಲಿ ಅಧಿವೇಶನ ನೋಡುತ್ತಿದ್ದಾಗೆ ತಮ್ಮ ದರ್ಶನ ಕೂಡ ಆಯಿತು.. ;-)

(ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ...)


~ಹರ್ಷ

February 07, 2007 9:29 AM  
Blogger v.v. said...

ವಿಚಿತ್ರಾನ್ನದಾನಿಗಳಿಗೆ ನಮಸ್ಕಾರ!
ನಮ್ಮ ನಾಟಕ ಸರಕಾರದ ಅಧಿಸೂಚನೆಗಳು ನೀವೆನ್ನುವಂತೆ ಸುಲಭವಾಗಿ ಕ.ಬು. ಫೋಲ್ಡರ್ ತಲುಪಲೆಂದೇ ಸರ್ಕಾರ ನಮ್ಮ ಎಮ್ಮೆ ಎಲ್ಲುಗಳಿಗೆ ಮತ್ತು ಎಮ್ಮೆ ಎಲ್ಸಿಗಳಿಗೆ ಲ್ಯಾಪ್ ಟಾಪ್ ದಯಪಾಲಿಸಿರುವುದು ದೂರದಲ್ಲಿರುವ ನಿಮಗೂ ತಿಳಿದುಹೋಯಿತೇ?!

ಶಿವ್,

ಗಾಂಪರ ಗುಂಪಿನಲ್ಲಿ ಒಬ್ಬನಾದ ಮುಠ್ಠಾಳನನ್ನು ದಾಶರಥೀ ದೀಕ್ಷಿತರು, ಲಂಡನ್ನಿಗೆ ಒಮ್ಮೆ ಕಳುಹಿಸಿದ್ದ ನೆನಪಿದೆ. ಆದರೆ, ಅವರಿಗೂ ಸಹ ಒಬ್ಬ ಮುಠ್ಠಾಳನನ್ನೇ ಪರ್ಮನೆಂಟಾಗಿ ನಾಪತ್ತೆ ಮಾಡಕ್ಕಾಗಲಿಲ್ಲ ಅಂದಮೇಲೆ, ಕೇವಲ ಮ.ವಾ.ದ ಉ.ಮು.ಪ್ರ.ವ್ಯ.ಸಂಪಾದಕನಾದ ನಮ್ಮಿಂದ ಈ ಮಹಾನ್ ಯೋಜನೆ ಸಾಧ್ಯವೇ?!

ಶ್ರೀಹರ್ಷ,

ನಮಸ್ಕಾರ.
ದೂರದರ್ಶನದಲ್ಲಿ ಅಧಿವೇಶನ ನೋಡುತ್ತಿದ್ದವರು ನೀವೇಯೋ?! "ಯಾರೋ ನೋಡ್ತಾ ಇದ್ದಾರೆ. ಯಾರಿರಬಹುದು?" ಎಂದು ನಮಗೆಲ್ಲಾ ಯೋಚನೆಯಾಗಿತ್ತು. ನೀವು ನೋಡೋದು ನಿಲ್ಲಿಸಿದಾಗ ದಯಮಾಡಿ ತಿಳಿಸಿದರೆ, ಅಧಿವೇಶನವನ್ನು ಮುಂದೂಡಲಾಗುವುದು.

ವಂದನೆಗಳೊಂದಿಗೆ,

ವಿ.ವಿ.

February 16, 2007 4:38 AM  

Post a Comment

Links to this post:

Create a Link

<< Home