ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, February 03, 2007

ಮಜಾವಾಣಿ: ತಾರಾ ತಮ್ಯ

"ವರ್ಣಭೇದದ ವಿರುದ್ಧ ಸಿಡಿದೇಳಿ" - ಶಿಲ್ಪಾ ಶೆಟ್ಟಿ
ಲಂಡನ್, ಫೆಬ್ರುವರಿ ೩, ೨೦೦೬: "ವರ್ಣತಾರತಮ್ಯ ಜಗತ್ತಿನಲ್ಲಿ ಇನ್ನೂ ಇದೆ. ಅದರ ನಿರ್ಮೂಲನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲೇಬೇಕಿದೆ" ಎಂದು ಸಂದರ್ಶನವೊಂದರಲ್ಲಿ ಬಿಗ್ ಬಾದರ್ ತಾರೆ ಶಿಲ್ಪಾ ಶೆಟ್ಟಿ ನುಡಿದಿದ್ದಾರೆ ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಕನ್ನಡ ಪ್ರಭ ವರದಿಮಾಡಿದೆ.

ಈ ವರದಿಯ ಪ್ರಕಾರ, ತನಗೆ ಜನಾಂಗೀಯ ಅವಹೇಳನವಾಗಿದೆಯೆಂದು ಬೊಬ್ಬೆ ಹೊಡೆದು, ನಂತರ ಏನೂ ಆಗಿಲ್ಲ, ನಡೆದಿದ್ದನ್ನು ಮರೆತುಬಿಡಿ ಎಂದು ಹೇಳಿದ್ದ ಶೆಟ್ಟಿ, ಈಗ ಮತ್ತೆ ಈ ವಿವಾದ ಪ್ರಸ್ತಾಪಿಸಿ, ವರ್ಣಭೇದದ ವಿರುದ್ಧ ವಿಶ್ವಾದ್ಯಂತ "ಸಿಡಿದೇಳುವಂತೆ" ತಮ್ಮ ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

"ವರ್ಣತಾರತಮ್ಯ ನಿರ್ಮೂಲನೆಗೆ, ಗಾಂಧೀಜಿಯವರ ನಾಡಿನವರಾದ ನಾವು ಅಹಿಂಸಾತ್ಮಕ ಹೋರಾಟ ನಡೆಸಬೇಕು. ಇದಕ್ಕೆ ಫೇರ್ N ಲವ್ಲೀಗಿಂತ ಉತ್ತಮ ಆಯುಧವಿಲ್ಲ. ಭಾರತೀಯರು ಮಾತ್ರವಲ್ಲ, ಇಡೀ ಜಗತ್ತಿನ ಕಪ್ಪು ಜನರು ಇದರ ಬಳಕೆಯನ್ನು ಮಾಡಬೇಕು" ಎಂದಿದ್ದಾರೆ.

Labels:

3 Comments:

Blogger Shiv said...

ವಿವಿಯವರೇ,

'ಫೇರ್ ನ ಲವ್ಲೀ' ಅನ್ನು ಉಚಿತವಾಗಿ ಅಥವಾ ಸಬ್ಸಿಡಿಯಲ್ಲಿ ಕೊಟ್ಟರೆ ವರ್ಣಭೇದ ವಿರುದ್ದ ಇನ್ನೂ ಹೆಚ್ಚು ಜನ ಹೋರಾಡಬಹುದಲ್ಲವೇ..

ನಿಮಗೆ ಫೇರ್ ನ ಲವ್ಲೀ ಡಬ್ಬ ಸಿಕ್ಕರೆ ನನಗೂ ಒಂದು ಕಳಿಸಿ :)

February 04, 2007 8:44 PM  
Anonymous ಶೂನ್ಯಸಂಪಾದಕ said...

ಸ್ವಾಮೀ ವಿವಿಗಳೇ ತಾವು ತಾರಾ, ರಮ್ಯರ ಬಗ್ಗೆ ಬರೆದದ್ದು ತಪ್ಪಾಗಿ ತಾರಾ ತಮ್ಯವಾಗಿದೆ ಎಂದುಕೊಡು ಓದಲು ತೊಡಗಿದರೆ ನೀವು ಫೇರ್ n ಲವ್ಲೀ ಜಾಹೀರಾತು ಪ್ರಕಟಿಸಿದ್ದೀರಿ. ಸತ್ಯದ ವಿರುದ್ಧ ಹೋರಾಡುವ ನಿಮ್ಮ ಪತ್ರಿಕೆ ಜಾಹೀರಾತಾಕಾಂಕ್ಷಿಯಲ್ಲ ಎಂದು ತಿಳಿದಿದ್ದ ನನಗೆ ಆಘಾತವಾಯಿತು. ಹೀಗೆ ಪ್ರಚ್ಛನ್ನ ಜಾಹೀರಾತುಗಳ ಪ್ರಕಟಣೆಗಳಿಗಾಗಿ ನೀವು ಓದುಗರ ಕ್ಷಮೆ ಕೋರುವುದು ಅಗತ್ಯವೆಂದು ಈ ಶೂನ್ಯ ಮನಸ್ಸಿಗೆ ಅನ್ನಿಸುತ್ತಿದೆ.

February 10, 2007 4:53 AM  
Blogger v.v. said...

ಶಿವ್,
ನೀವು ಉಚಿತ ಫೇರ್ ನ್ ಲವ್ಲೀ ಕೇಳುತ್ತಿದ್ದರೆ, ಮಾನ್ಯ ಶೂ. ಸಂಪಾದಕರು, ನಮ್ಮ ವರದಿಯನ್ನು ಜಾಹಿರಾತೆಂದು ಹೀಗೆಳಿದಿದ್ದಾರೆ.

ಶೂ.ಸಂ.,
ರಮ್ಯ ನಮ್ಮ ನೆಚ್ಚಿನ ತಾರೆ. ಅವರ ಕುರಿತು ಈಗಾಗಲೇ ಒಂದು ಸಚಿತ್ರ ಮುದ್ರಣದೋಷಸಹಿತ ವರದಿಯನ್ನು ನಮ್ಮ ಪತ್ರಿಕೆ ಪ್ರಕಟಿಸಿದೆಎಂದು ಪ್ರಕಟಿಸಲು ಹೆಮ್ಮೆಪಡುತ್ತೇವೆ.

ವಂದನೆಗಳೊಂದಿಗೆ,

ವಿ.ವಿ.

February 16, 2007 4:15 AM  

Post a Comment

Links to this post:

Create a Link

<< Home