ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, January 29, 2007

ಮಜಾವಾಣಿ: ತನಿಖಾ ವರದಿ

ಅರುಂಧತಿ ರಾಯ್ ಐಶ್ವರ್ಯ ರೈ ಅಕ್ಕ ಅಲ್ಲ!
ಮುಂಬೈ, ಜನವರಿ ೨೯, ೨೦೦೬: ಖ್ಯಾತ ಸಾಹಿತಿ ಮತ್ತು ರೂಪದರ್ಶಿ ಅರುಂಧತಿ ರಾಯ್ ಮತ್ತು ಖ್ಯಾತ ನಟಿ, ಕನ್ನಡ(ಬಾರ)ದ ಕುವರಿ ಐಶ್ವರ್ಯ ರೈ ಒಡಹುಟ್ಟಿದ ಸಹೋದರಿಯರಲ್ಲ.

ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೂ, ಅಭಿಷೇಕ್-ಐಶ್ವರ್ಯ ವಿವಾಹದ ಸಂದರ್ಭದಲ್ಲಿ ಇಂತಹ ಯಾವುದೇ ಅನುಮಾನಗಳಿಗೆ ಆಸ್ಪದ ಇರಬಾರದೆಂದು ನಮ್ಮ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ. ಜೊತೆಗೆ, ಇತರೆ ಪತ್ರಿಕೆಗಳು ಐಶ್ವರ್ಯ ಅವರ ಸೋದರನ ಹೆಂಡತಿಯ ಅಜ್ಜಿಯಿಂದ ಹಿಡಿದು ಆಕೆಯ ಮುದ್ದಿನ ನಾಯಿಯ ಸೋದರಿಯ ಪಶು ವೈದ್ಯನವರೆಗೆ ಎಲ್ಲ ಸಂಬಂಧಿಕರ ವಿವರಗಳನ್ನು ಈಗಾಗಲೇ ನೀಡಿರುವುದರಿಂದ ನಮ್ಮ ಪತ್ರಿಕೆಗೆ ಉಳಿದಿದ್ದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Labels:

3 Comments:

Anonymous Anonymous said...

ಸ್ನೇಹ ಉಳ್ಳಾಳ್ ಕೂಡ ಐಶ್ವರ್ಯಾಳ ತಂಗಿ ಅಲ್ಲ.

February 23, 2007 6:08 PM  
Anonymous karkerac@gmail.com said...

ವ್ಹಾ!ವ್ಹಾ! ಸಕತ್ತಾಗಿದೆ..
ಗೌರ್ವಾನ್ವಿತ ಸಂಪಾದಕರೇ,
ಭಾರೀ ಒಳ್ಳೆಯ ವಿಷಯಗಳನ್ನು ನೀವು ಹೇಳ್ತಾ ಇದ್ದೀರಿ. ಅಂದಹಾಗೆ ನಿಮ್ಮ ತನಿಖಾ ವರದಿ ಮುಂದುವರಿಯಲಿ.'ಸಮಾಜದ ನಿಜವಾದ ಕನ್ನಡಿಯಂತೆ' ನಿಮ್ಮ ಪತ್ರಿಕೆ ಆಗಲಿ ಎಂದು ನನ್ನ,ನನ್ನ ಆಪ್ತರ, ಸಹೋದ್ಯೋಗಿಗಳ ಎಲ್ಲರ ಪರವಾಗಿ ಮನತುಂಬಿ ಹಾರೈಸುತ್ತಿದ್ದೇನೆ. ನಿಮ್ಮ ತನಿಖೆ ಮುಂದುವರೆಯಲಿ. ಸಮಾಜದ ನಡುವಿರುವ ಭ್ರಷ್ಠಾಚಾರಿಗಳನ್ನು ಪತ್ತೆಹಚ್ಚಿರಿ. ದುಡ್ಡುಮಾಡಲು ರಾಜಕೀಯ ಸೇರುವ, ಗಿಫ್ಟ್ ಆಸೆಯಿಂದ ಪ್ರೆಸ್ ಮೀಟ್ ಗೆ ಹೋಗುವ ಪತ್ರಕರ್ತರು, ಹುಡುಗಿಯರನ್ನು ನೋಡಲು ಅಥವ ಹುಡುಗರನ್ನು ನೋಡಲು ಮದುವೆ ಮನೆಗೆ ಹೋಗುವ ಚೋರ/ಚೋರಿಯರನ್ನು ಪತ್ತೆ ಹಚ್ಚಿರಿ

November 29, 2007 5:54 AM  
Blogger v.v. said...

karkerac-ರವರಿಗೆ ನಮಸ್ಕಾರ.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಮ್ಮ ಪತ್ರಿಕೆ ಸಮಾಜದ ಕನ್ನಡಿಯಾಗಬೇಕೇ? ತಲೆ-ಬಾಚಲು, ಮುಖ-ತೊಳೆಯಲು, ಮೇಕ್-ಅಪ್ ಮಾಡಿಕೊಳ್ಳಲು, ಶೇವ್ ಮಾಡಿಕೊಳ್ಳಲು, ಸ್ವರೂಪಾನಂದರಾಗಲು, ನಮ್ಮ ಪತ್ರಿಕೆಯನ್ನು ಜನ ಬಳಸಬೇಕೇ? ಕನ್ನಡಿ ಒಂದು ಬಹುಪಯೋಗಿ ಪದಾರ್ಥವಲ್ಲವೇ? ಮಜಾವಾಣಿ "ಕನ್ನಡಿ" ಆದಲ್ಲಿ, "ಜಗತ್ತಿನ ಅತ್ಯಂತ ನಿರುಪಯೋಗಿ ಪತ್ರಿಕೆ" ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದಾದರೂ ಹೇಗೆ?!

ಭ್ರಷ್ಟಾಚಾರಿಗಳೂ ಮನುಷ್ಯರೇ ಅಲ್ಲವೇ? ಅವರ ಬಗೆಗೆ ನಮ್ಮ ಪತ್ರಿಕೆಗೆ ಆದರ, ಅಭಿಮಾನ, ಕನಿಕರ, ಕಾಳಜಿ, ಇದ್ದೇ ಇದೆ.
ಆದರೆ, ಹುಡುಗ/ಹುಡುಗಿಯರನ್ನು ನೋಡಲು ಮದುವೆಮನೆಗೆ ಹೋಗುವ ಚೋರಿ/ಚೋರರನ್ನು ತಕ್ಷಣವೇ ಬಂಧಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ನಾವು ಈ ಮೂಲಕ ಆಗ್ರಹಿಸುತ್ತೇವೆ.

ಪ್ರೆಸ್ ಮೀಟ್‌‍ಗಳಲ್ಲಿ ಗಿಫ್ಟ್ ನೀಡುತ್ತಾರೆಯೇ? ಛೇ! ಎಂಥದ್ ಮರಾಯ್ರೇ?! ಮೊದ್ಲೇ ಹೇಳ್ ಬಾರ್ದಾ?!! ನಾವೂ ಹೋಗ್ತಿರ್ಲಿಲ್ವಾ?!!!

ವಂದನೆಗಳೊಂದಿಗೆ,

ವಿ.ವಿ.

November 29, 2007 8:51 AM  

Post a Comment

Links to this post:

Create a Link

<< Home