ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, January 31, 2007

ಮಜಾವಾಣಿ: ವಿದೇಶ ಸುದ್ದಿ
ಇರಾಕಿನಲ್ಲಿ ಗಾಂಧಿ ಸ್ಮರಣೆ
ಬಾಗ್ದಾದ್, ಜನವರಿ ೩೦, ೨೦೦೬: ಶಾಂತಿ ದೂತ ಗಾಂಧೀಜಿಯವರ ೫೯ನೆಯ ಪುಣ್ಯ ತಿಥಿಯನ್ನು ಇರಾಕಿನಾದ್ಯಂತ ಇಂದು ಆಚರಿಸಲಾಯಿತು. ಪರಸ್ಪರ ಹೊಡೆದಾಡುತ್ತಿರುವ ಸುನ್ನಿ, ಷಿಯಾ ಮತ್ತು ಅಮೆರಿಕನ್ ಪಡೆಗಳು ಈ ದಿನ ಸಂಜೆ ೫:೧೭ಕ್ಕೆ ೨ ನಿಮಿಷದ ಮೌನ ಆಚರಿಸಿ ಮತ್ತೆ ಕೂಗಾಡುತ್ತಾ ತಮ್ಮ ಹೊಡೆದಾಟ ಮುಂದುವರೆಸಿದವು.

Labels:

4 Comments:

Blogger ಅಸತ್ಯ ಅನ್ವೇಷಿ said...

ಶಾಂತಿದೂತನ ಪುಣ್ಯ ತಿಥಿಗೆ ಮೌನವನ್ನು ಭರ್ಜರಿಯಾಗಿ ಕಾರು ಬಾಂಬ್, ನೆಲಬಾಂಬ್ ಮುಂತಾದ ಪಟಾಕಿಗಳೊಂದಿಗೆ ಆಚರಿಸಿದ ಕಾರ್ಯಕ್ರಮದಲ್ಲಿ ಲಾರ್ಜ್ ಬುಷ್ ಅವರೇ ಅಧ್ಯಕ್ಷತೆ ವಹಿಸಿರುವುದು ನಿಮ್ಮ ವರದಿಗಾರರ ಗಮನಕ್ಕೆ ಬಂದಿಲ್ಲವೇ?

January 31, 2007 6:52 AM  
Blogger v.v. said...

ಅನ್ವೇಷಿಗಳಿಗೆ,

ನಮಸ್ಕಾರ.

ಭರ್ಜರಿ ಪುಣ್ಯ ತಿಥಿಯ ವಿಷಯ ನಮ್ಮ ವರದಿಗಾರರ ಗಮನಕ್ಕೆ ಬಂದಿಲ್ಲ. ಇರಾಕಿನಲ್ಲಿ ಪ್ರತಿದಿನ ದೀಪಾವಳಿಯೇ ಆದರೂ, ಯಾಕೋ ಏನೋ ನಮ್ಮ ಪತ್ರಿಕೆಯ ವರದಿಗಾರರಲ್ಲಿ ಒಬ್ಬರೂ ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ.

January 31, 2007 11:37 PM  
Blogger Shiv said...

ಅದೇ ಸಮಯದಲ್ಲಿ ಗಾಂಧೀಜಿಯ ಸ್ವಂತ ನಾಡಿನಲ್ಲಿ ಆ ೨ ನಿಮಿಷವನ್ನು ಸಹ ಮೌನದಿಂದ ಇರಲಾಗದೇ ಕಾಶ್ಮೀರದಲ್ಲಿ ಇನ್ನೂ ಹೆಣಗಳು ಉರುಳಿದವಂತೆ...

February 02, 2007 12:41 AM  
Blogger v.v. said...

ಶಿವ್,

ಹೆಣಗಳು ಉರುಳುತ್ತಿದ್ದರೆ ಕೊನೆಗೆ ಚಿರಮೌನವೇ ತಾನೇ?

February 16, 2007 3:53 AM  

Post a Comment

Links to this post:

Create a Link

<< Home