ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, January 24, 2007

ಮಜಾವಾಣಿ: ವಿವಾದ

ಅಡಿಗರ ಇಡ್ಲಿ ಪ್ರೇಮ ವಿವಾದ: "ಇರಲಿಲ್ಲ"-ಭೈರಪ್ಪ, "ಇತ್ತು"-ಕಾರ್ನಾಡ್
ಬೆಂಗಳೂರು ಜನವರಿ ೨೪, ೨೦೦೬: ಟಿಪ್ಪು ಸುಲ್ತಾನನ ಕನ್ನಡ ಪ್ರೇಮದ ಕುರಿತು ಕನ್ನಡ ಸಾಹಿತ್ಯರಂಗದ ದಿಗ್ಗಜರೆನ್ನಿಸಿಕೊಂಡಿರುವ ಎಸ್.ಎಲ್.ಭೈರಪ್ಪ ಮತ್ತು ಗಿರೀಶ್ ಕಾರ್ನಾಡ್ ನಡುವಿನ ಚರ್ಚೆಯ ಬಿಸಿ ಆರುವ ಮುಂಚೆಯೇ ಮತ್ತೊಂದು ವಿವಾದಾಸ್ಪದ ಸಂಗತಿಯ ಕುರಿತಾದ ಚರ್ಚೆಗೆ ಕಾವೇರಿದೆ.
ಟಿಪ್ಪು ಸುಲ್ತಾನನ ಕನ್ನಡ ಪ್ರೇಮವನ್ನು ಪ್ರಶ್ನಿಸಿ ಆ ಚರ್ಚೆಗೆ ಕಾರಣೀಭೂತರಾಗಿದ್ದ ಸಚಿವ ಶಂಕರಮೂರ್ತಿಯವರೇ ಅಡಿಗರ ಇಡ್ಲಿ ಪ್ರೇಮವನ್ನು ಪ್ರಶ್ನಿಸಿ ಈ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಬೆಂಗಳೂರಿನಲ್ಲಿ ಅಡಿಗಡಿಗೂ ಕಾಣಬರುವ ಉಪಹಾರಗೃಹಗಳಿಗೆ "ಅಡಿಗಾಸ್" ಎಂದು ಹೆಸರಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, "ಗೋಪಾಲಕೃಷ್ಣ ಅಡಿಗರಿಗೆ ಇಡ್ಲಿಯ ಮೇಲೆ ಪ್ರೇಮವಿತ್ತೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಸಚಿವರ ಮಾತನ್ನು ಬೆಂಬಲಿಸಿರುವ ಖ್ಯಾತ ಸಾಹಿತಿ ಎಸ್.ಎಲ್,ಭೈರಪ್ಪನವರು, ಅಡಿಗರ ಪ್ರತಿಯೊಂದು ಬರಹವನ್ನೂ ತಾವು ಆಳವಾಗಿ ಅಭ್ಯಾಸ ಮಾಡಿದ್ದು, ಅಡಿಗರ ಇಡ್ಲಿ ಪ್ರೇಮ ತಮಗೆಲ್ಲೂ ಕಾಣಬರಲಿಲ್ಲ ಎಂದಿದ್ದಾರೆ. "ಚಿಂತಾಮಣಿಯಲ್ಲಿ ಮುಖ ಕಂಡ ಅಡಿಗರು ತಟ್ಟೆಯಲ್ಲಿನ ಇಡ್ಲಿ ಕಾಣಲಿಲ್ಲ" ಎಂದು ವಿಷಾದಿಸಿರುವ ಅವರು, ಈಗ ರೆಸ್ಟಾರಂಟುಗಳಿಗೆ ಅಡಿಗರ ಹೆಸರು ಇಡುತ್ತಿರುವುದು "ಇತಿಹಾಸವನ್ನು ತಿರುಚುವ ಪ್ರಯತ್ನ" ಎಂದು ಖಂಡಿಸಿದ್ದಾರೆ.
ಭೈರಪ್ಪನವರ ಮಾತನ್ನು ತಿರಸ್ಕರಿಸಿರುವ ಜ್ಞಾನಪೀಠ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್, "ಅಡಿಗರಿಗೆ ಇಡ್ಲಿಯ ವಿಚಾರದಲ್ಲಿ ಅಪಾರ ವಿಶ್ವಾಸ ಇತ್ತು. ಕೊಂಚ್ ಇಮ್ಯಾಜಿನೇಷನ್ ಉಪಯೋಗಿಸಿದರೆ ಅವರ ಯಾವ ಮೋಹನ್ ಮುರಲಿ... ಗೀತೆ ಇಡ್ಲಿಯ ಬಗೆಗೆ ಎಂದು ತಿಳಿದು ಬರುತ್ತದೆ." ಎಂದಿದ್ದಾರೆ. ಮುಂದುವರೆದ ಕಾರ್ನಾಡರು, "ಭೈರಪ್ಪನವರ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ನನಗೇನೂ ಲೈಕ್ ಆಗ್ಲಿಲ್ಲ. ಸುಮ್ನೆ ಅವಾರ್ಡ್ ಬರ್ಲಿ ಅಂತ ಫಿಲಂ ತೆಗ್ದೆ" ಎಂದಿದ್ದಾರೆ.

Labels:

8 Comments:

Anonymous sritri said...

ಅಡಿಗರು ಮೊಟ್ಟೆ ತಿನ್ನದೆ ಬರೀ ಇಡ್ಲಿ ತಿಂತಾ ಇದ್ದಿದ್ದು ಯಾಕೆ? ಎಂದು ಸದ್ಯದಲ್ಲೇ ಈ ವಿವಾದಕ್ಕೆ ಯಾರಾದರೂ ತುಪ್ಪ ಸುರಿಯಲಿದ್ದಾರೆ ನೋಡ್ತಾ ಇರಿ.

ಬಾಗಿಲು ಹಾಕಿಕೊಂಡು ಹೋಗಿದ್ದ ಮಜಾವಾಣಿ ಪತ್ರಿಕೆ ಮತ್ತೆ ಶುರುವಾಗಿದ್ದು ನೋಡಿ ಓದುಗರಿಗೆಲ್ಲ ಸಂತೋಷವಾಗಿದೆ.

January 24, 2007 8:00 AM  
Anonymous ಶೂನ್ಯ ಸಂಪಾದಕ said...

ಕಾವ್ಯದಿಂದಷ್ಟೇ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತಿದ್ದ ಅಡಿಗರು ಅಡಿಗಡಿಗೆ ಆಹಾರವೀಯುವ ಅಡಿಗಾಸ್ ಸ್ಥಾಪಿಸಿದ್ದು ಎಂದು ಬಲವಾಗಿ ನಂಬಿದ್ದ ನಮ್ಮಂಥವರಿಗೆ ಆಘಾತ ಹುಟ್ಟಿಸುವಂಥ ಸುದ್ದಿಯನ್ನು ಮಜಾವಾಣಿ ನೀಡಿದೆ. ಕೇವಲ ಪ್ರಸಾರದ ಹೆಚ್ಚಳಕ್ಕೆ ವಿವಾದವೊಂದನ್ನು ಹುಟ್ಟು ಹಾಕುತ್ತಿರುವ ಮಜಾವಾಣಿ ಥೇಟ್ 24 ಅವರ್ ನ್ಯೂಸ್ ಚಾನೆಲ್ ರೀತಿ ವರ್ತಿಸುತ್ತಿರುವುದನ್ನು ಶೂನ್ಯ ಸಾಕ್ಷಿಯಾಗಿ ಖಂಡಿಸುತ್ತೇನೆ.

January 24, 2007 8:14 AM  
Blogger v.v. said...

ಶ್ರೀತ್ರಿಯವರೆ,
ಧನ್ಯವಾದಗಳು. ನಮ್ಮ ಪತ್ರಿಕೆ ಸತ್ಯದ ವಿರುದ್ಧ ಸಮರ ಸಾರಿರುವಂತೆ, ಇಂಟರ್‌ನೆಟ್ ಸಹ ನಮ್ಮ ಪತ್ರಿಕೆಯ ಕಾರ್ಯಾಲಯದ ವಿರುದ್ಧ ಕದನ ಹೂಡಿದೆ. ಹೀಗಾಗಿ ನಮ್ಮ ಪತ್ರಿಕೆಯ ಕಾರ್ಯಾಲಯಕ್ಕೆ ಬೀಗ ಜಡಿಯ ಬೇಕಾಯಿತು. ಈಗ ಕದನ ಪೂರ್ತಿ ನಿಂತಿದೆಯೋ ಅಥವಾ ಕದನ-ವಿರಾಮವೋ ತಿಳಿಯದು. ನೋಡೋಣ...

ಇಡ್ಲಿ ವಿವಾದಕ್ಕೆ ತುಪ್ಪ ಸುರಿಯುವುದು ಅತ್ಯಂತ ಸ್ವಾಗತಾರ್ಹ ವಿಚಾರ. ಚಟ್ನಿ ಮಾಡಿದರಂತೂ ಇನ್ನೂ ಸಂತೋಷ!

ಶೂ.ಸಂ.ರೇ,
"ಅಡಿಗಾಸ್" ಅಡಿಗರದಲ್ಲವೇ?! ಕನಿಷ್ಠ "ಕಾಮತ್" ಆದರೂ ಕಾಮತರದೆಂದೇ ಭಾವಿಸಿದ್ದೇನೆ.
ಸತ್ಯದ ವಿರುದ್ಧ ಹೋರಾಡಿ, ವೀರ ಮರಣವನ್ನಪ್ಪಲು ನಮ್ಮ ಪತ್ರಿಕೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ವಿವಾದ ಸೃಷ್ಟಿಯಾಗಿ ಮಜಾವಾಣಿಯ ಪ್ರಸಾರ ಸಂಖ್ಯೆ ಹೆಚ್ಚಾದರೆ, ಆ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ.

ಧನ್ಯವಾದಗಳೊಂದಿಗೆ,

ವಿ.ವಿ.

January 25, 2007 1:19 PM  
Anonymous ಹನುಮಂತೂ said...

ಅಡಿಗರು ತೀರಿಕೊಂಡಾಗ ಇಡ್ಲಿ ಸಿಗದೇ ಕಂಗಾಲಾದ ನಾಡಿಗರನ್ನು ಕುರಿತು ಭೈರಪ್ಪನವರು ತಬ್ಬಲಿಯು ನೀನಾದೆ ಮಗನೆ ಬರೆದದ್ದು ಅಂತ ನಮಗೆ ಸುದ್ದಿಮೂಲಗಳಿಂದ ತಿಳಿದಿದೆ. ಈ ಬಗ್ಗೆ ಸ್ವಲ್ಪ ತನಿಖೆ ನಡೆಸಿ. ಅಂದಹಾಗೆ ಅಡಿಗರ ಪರಂಪರೆಯನ್ನು ಭಿನ್ನ ರೀತಿಯಲ್ಲಿ ಮುಂದುವರೆಸಲು ನಾಡಿಗಾಸ್ ಅನ್ನುವ ಪಬ್ಬು ಸರಣಿಯನ್ನು ಪ್ರಾರಂಭಿಸಲಾಗುವುದಂತೆ. ದಯವಿಟ್ಟು ನಿಜವೋ ತಿಳಿಸಿ... ಇಷ್ಟುದಿನ ಈ ಇಂಥ ಸುದ್ದಿಗಳ ಬಗ್ಗೆ ಯಾರಲ್ಲೂ ಕೇಳಲಾಗದ ಪರಿಸ್ಥಿತಿಯಲ್ಲಿ ನಮ್ಮ ಆಗೊನಿ ಆಂಟಾಗಿ ವಾಪಸ್ಸಾಗಿದ್ದೀರಿ. ಸ್ವಾಗತ. ಆಂಟಿ, ಅಂಟಿಕೊಂಡಿರಿ!!

January 27, 2007 5:42 PM  
Blogger Shiv said...

ಬರೀ ಇಡ್ಲಿ ಬಗ್ಗೆ ಬರೆದು ಅಡಿಗರ ಹೆಸರಿಗೆ ಚಟ್ನಿ ಬಳಿಯಲಾಗುತ್ತಿದೆ..ಅವರ ಹೆಸರಿಗೆ ವಡೆ ಸಹ ಸೇರಿಸಬೇಕೆಂದು ಚಂಪಾ ಹೇಳಿದ್ದಾರಂತೆ

February 02, 2007 12:39 AM  
Anonymous Anonymous said...

adigaru eggeaterian alla poor vegetarian adhake

February 27, 2007 2:30 AM  
Anonymous Anonymous said...

vanaja_n_rao said - adigara mommakkalidre avranna kelibitre correct answer siguthe alva shyam avare. Aadru ee vicharadhalli nangothirodiste avru eggeaterian alla poor vegiterian adakke avru motte tinnadhe idli thindadhu antha. neevenathira?

February 27, 2007 2:39 AM  
Blogger Active said...

ನಾನು ಏನು ಮಾತನಾಡಿದರೂ ಜನ ಅದನ್ನು ವಿವಾದ ಮಾಡುತ್ತಿದ್ದಾರೆ ಎಂದು ಬೇಸರ ಪಟ್ಟುಕೊಂಡು ಶಂಕರಮೂರ್ತಿಯವರು ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದರಂತೆ. ಹೌದಾ? ಪುನಃ ಮನೆ ಮುಂದೆ ಜನ ಧರಣಿ ಮಾಡುವುದು ಕಾರ್ನಾಡರಿಗೆ ಇಷ್ಟವಿಲ್ಲದ್ದರಿಂದ, ಈ ಬಾರಿ ಇನ್ನು ಹೆಚ್ಚು ಮಾತನಾಡುವುದು ಬೇಡವೆಂದು ಅವರ ಹಿತೈಷಿಗಳು ಅವರಿಗೆ ಸಲಹೆ ಕೊಟ್ಟಿದ್ದಾರಂತೆ.

March 01, 2007 3:21 AM  

Post a Comment

Links to this post:

Create a Link

<< Home