ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, September 12, 2006

ಮಜಾವಾಣಿ: ಕನ್ನಡ ಕಾಳಜಿ

"ಮಿತಿಮೀರಿದ ಬಳಕೆಯಿಂದ ವಿನಾಶ ಖಚಿತ" - ಡುಂಡಿರಾಜ್
ಬೆಂಗಳೂರು ಸೆಪ್ಟೆಂಬರ್ ೧೦, ೨೦೦೬: ಯಾವುದೇ ವಸ್ತುವನ್ನೂ ವಿಪರೀತವಾಗಿ ಬಳಸಿದಲ್ಲಿ ಅದು ವಿನಾಶವಾಗುವುದು ಖಂಡಿತ. ಭಾಷೆ ಸಹ ಇದರಿಂದ ಹೊರತಲ್ಲ. ಮಿತಿಮೀರಿದ ಬಳಕೆಯಿಂದ ಇಂದು ಕನ್ನಡ ವಿನಾಶದಂಚಿನಲ್ಲಿದೆ. ಹೇಳಬೇಕೆಂದಿರುವುದನ್ನು ಅತಿ ಕಡಿಮೆ ಪದ/ಅಕ್ಷರಗಳಲ್ಲಿ ವ್ಯಕ್ತಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ" ಎಂದು ಖ್ಯಾತ ಕವಿ ಡುಂಡಿರಾಜ್ ಇಡೀ ಕನ್ನಡ ಕಾವ್ಯ ಜಗತ್ತಿಗೆ ಕರೆಯಿತ್ತಿದ್ದಾರೆ.
ಭಾಷೆಯನ್ನು ತಾವು ಮಿತವಾಗಿ ಬಳಸಿ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಲು ಪ್ರಯತ್ನಿಸುತ್ತಿರುವಾಗ, ಇತರೆ ಕವಿಗಳು ನೀಳ್ಗವನದ ಹೂಗಳ ಕುರಿತು ಹೊಂಗನಸುಗಳನ್ನು ಕಾಣುತ್ತಿರುವುದು ಅತ್ಯಂತ ವಿಷಾದಕರ ಎಂದಿದ್ದಾರೆ.

ಬಿ.ಆರ್.ಎಲ್. ಮನವಿ: ಡುಂಡಿರಾಜರ ಕರೆಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದಿರುವ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್, "ಕನ್ನಡ ಪದಗಳ ಮಿತ ಬಳಕೆಯೊಂದಿಗೇ, ಕನ್ನಡದ ಕವಿಗಳು ಹೆಚ್ಚು ಹೆಚ್ಚು ಇಂಗ್ಲೀಷ್ ಪದಗಳನ್ನೂ ಬಳಸುವುದೂ ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿದೆ" ಅಭಿಪ್ರಾಯ ಪಟ್ಟಿದ್ದಾರೆ.

ಈ ಆಘಾತಕಾರಿ ವಿಷಯದ ಕುರಿತು ನಮ್ಮ ಪತ್ರಿಕೆ ವಿಖ್ಯಾತ ಪದಬೇಧಿ ನಿವಾರಣಾ ತಜ್ಞ ಡಾ.ಗೋಪಾಲಕೃಷ್ಣರವರನ್ನು ಸಂದರ್ಶಿಸಿದಾಗ, ಅವರು, "ಕನ್ನಡ ಈಗಾಗಲೇ ಕ್ಯಾಪಿಟಲ್ ಲೆಟರ್‍ಸ್ ಕೊರತೆಯನ್ನು ಅನುಭವಿಸುತ್ತಿದ್ದು, ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸಮರೋಪಾದಿಯಲ್ಲಿ ಕನ್ನಡ ಭಾಷೆಗೆ ಕ್ಯಾಪಿಟಲ್ ಅಕ್ಷರಗಳನ್ನು ಅಳವಡಿಸುವುದು ಮಾತ್ರವಲ್ಲದೇ, ಕ್ಯಾಪಿಟಲ್ ಲೆಟರುಗಳನ್ನು ಬರಹದೊಂದಿಗೇ ಉಚ್ಚಾರಣೆಯಲ್ಲೂ ಬಳಕೆಗೆ ತಂದರೆ, ಕನ್ನಡದ ಉಳಿವು ಮಾತ್ರವಲ್ಲ ಇಂಗ್ಲೀಷಿನ ಮೇಲೆ ಗೆಲುವನ್ನೂ ಸಾಧಿಸಬಹುದು" ಎಂದಿದ್ದಾರೆ.

ಕನ್ನಡದ ಗೆಲುವಿಗಾಗಿ ಪರಿಶ್ರಮಿಸುತ್ತಿರುವ ಹಲವಾರು ರಾಜಕಾರಣಿಗಳು, ಚಿತ್ರ ತಾರೆಯರು, ಬೇಕೆಂದೇ ಇಂಗ್ಲೀಷಿನಲ್ಲಿ ಮಾತನಾಡಿ ಆ ಭಾಷೆಯ ಕೊಲೆ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

(ಚಿತ್ರ ಕೃಪೆ: ದಟ್ಸ್ ಕನ್ನಡ ಮತ್ತು ವಿಚಿತ್ರಾನ್ನ ದಾನಿಗಳಿಂದ)

7 Comments:

Anonymous ಹನುಮಂತೂ said...

ಇಗೋ ಕನ್ನಡ ಎನ್ನುವ ನಮಗೆ ಕ್ಯಾಪಿಟಲ್ ಇಲ್ಲ ಅಂತ ದುಃಖ ಪದುವುದು ಬೇಡ.

ಮಾರ್ಕ್ಸ್ ಕೈಯಲ್ಲಿ ಕ್ಯಾಪಿಟಲ್ ದಾಸ್ ಆಯಿತು. [ಬಿಲ್ ಗೇಟ್ಸ್ ಕೈಯಲ್ಲಿ Dos ಆಯಿತು]

ಕನ್ನಡಕ್ಕೆ ಯಾಕೆ ನಿಮ್ಮ ವರದಿಗಾರಗು ಈ ರೀತಿಯ ಕ್ಯಾಪಿಟಲ್ ಪನಿಷ್ಮೆಂಟ್ ಕೊಡುತ್ತಿದ್ದಾರೆ, ಭಾಷೆ ಇಲ್ಲವಾದೀತು ಹುಷಾರ್.

ನಾವು ಕ್ಲಾಸಿಕಲ್ ಭಾಷೆ ತಮಿಳಿನಿಂದ ಕಲಿತದ್ದು ಏನು [ಕಲಿಯಬಾರದೆಂಬ ತಾತ್ವಿಕ ನಿಲುವಿದ್ದರೆ ಅದು ಬೇರೆ]ಅವರು ಕಖಗಘ ಕ್ಕೆ ಒಂದೇ ಅಕ್ಷರವನ್ನು ಬಳಸುವ ತಮಿಳು ಬಾಸೆಯಿಂದ ನಾವು ಐಡಿಯಾಗಲನು ತೆಗೆದುಕೊಲಬೇಕು. ಅಲುಪಪರಾನ, ಹರಸವ ಎರದನೂ ನಮದಾಗಿಸಿಕೊಲಬೆಕು. ಆಗ ಕದಿಮೆ ಪದಗಲಿರುವ ಬಾಸೆ ಕಲಿಯಲು ಹೆಚುಜನರಿಗೂ ಉಪಯೊಗವಾಗುತದೆ. ಬರಹದಲಿ ಜಾಸತಿ ತೈಪು ಮಾದಿ ಹೆಚು ಬರೆಯಲೂ ಸಾದಿಯವಾಗುತೆ. ಹೀಗೆ ಕನದ ಉಲಿಯುತೆ

ಕಸಮೆಇರಲಿ,

September 12, 2006 9:53 PM  
Blogger kaaloo said...

ವಿದೂಶಕರೇ,

ಮೂರು ತಿಂಗಳ ನಂತರವಾದರೂ ನಿಮ್ಮ ಅಂಗಡಿಯನ್ನು ಪುನಃ ತೆರೆದು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಕನ್ನಡದಲ್ಲಿ ಪದಗಳಿರಲಿ ಬಿಡಲಿ, ಕನ್ನಡಿಗರಿಗೆ ಪದಗಳು ಸೇರಲಿ, ಸೇರದಿರಲಿ, ಯಾರು ಕರ್ತರಿ-ಕರ್ಮಣಿ ಪ್ರಯೋಗಗಳನ್ನು ಎಷ್ಟು ಬೇಕಾದರೂ ಮಾಡಿಕೊಳ್ಳಲಿ ನೀವು ಮಾತ್ರ ಮಜಾವಾಣಿಯನ್ನು ಸೊರಗಿಸಬೇಡಿ.

ಈಗಾಗಲೇ ಇನ್ಸ್‌ಟಂಟ್ ಮೆಸ್ಸೇಜುಗಳಲ್ಲಿ ದೇಶ ಪೂರ್ತಿ ಜನ ಕಡಿಮೆ ಪದಗಳನ್ನು ಬಳಸಿ ಬೆಳೆದಿದ್ದಾಯಿತು...ಇನ್ನು ಕಾವ್ಯ-ಗದ್ಯವೂ ಅದರ ಹಾದಿಯನ್ನು ಹಿಡಿದು ಈಗಾಗಲೇ 'ಪದಗಳ ಕೆಳಗೆ ಪದ ಬಂದರೆ ಪದ್ಯ' ಎನ್ನುವ ಮಾತು 'ಅಕ್ಷರದ ಕೆಳಗೆ ಅಕ್ಷರ' ವಾದರೆ ಏನು ಮಾಡೋದು!

September 13, 2006 8:35 AM  
Blogger ಅಸತ್ಯ ಅನ್ವೇಷಿ said...

ಹ್ಹ ಹ್ಹ ಹ್ಹ....
ಸ್ವಾಮಿ ವಿದೂಷಕರೆ,
ನಗುವನ್ನು ಉಳಿತಾಯ ಮಾಡಿಕೊಳ್ಳಲು ಆಗುತ್ತಲೇ ಇಲ್ಲವಲ್ಲ...!

September 13, 2006 9:31 AM  
Blogger ಪಬ್ said...

ಪೆಟ್ರೋಲು ಉಳಿಸಬೇಕಾದರೆ ಪೆಟ್ರೋಲು ಬಳಸಬಾರದು. ಅಂತೆಯೇ ಕನ್ನಡ ಉಳಿಸಬೇಕಾದರೆ ಕನ್ನಡ ಬಳಸಬಾರದು. ವ್ಹಾ. ಚೆನ್ನಾಗಿದೆ, ಲಾಜಿ ಕಿಕ್ಕು.

ಹಂಗೆಯೇ ಹೆಂಡ ಉಳಿಸಬೇಕಾದರೆ? ಹೊಟ್ಟೆಯ ಒಳಗೆ ಇಟ್ಟುಕೊಳ್ಳಬೇಕು. ಎಂಗೈತೆ ಲಾಜಿಕ್ಕು?

-ಪಬ್

September 13, 2006 1:22 PM  
Blogger Fangyaya said...

adidas outlet
air jordans
cheap jordan shoes
louis vuitton handbags
air jordan retro
ray ban sunglasses
adidas yeezy
oakley outlet
replica watches
oakley sunglasses
coach outlet online
gucci outlet online
coach outlet
coach outlet
lebron james shoes 13
jordan shoes
michael kors
oakley vault
burberry outlet online
louis vuitton handbags
cheap jordans
basketball shoes
jordan concords
coach factory outlet
nike free run
ray ban outlet
adidas nmd r1
kate spade handbags
coach outlet online
nike uk
michael kors outlet
asics outlet
timberland boots
retro jordans
cartier watches
coach outlet store online
louis vuitton
coach outlet
giuseppe zanotti sneakers
nike air jordan
20167.13chenjinyan

July 13, 2016 3:59 AM  
Blogger xjd7410@gmail.com said...

supra shoes
coach factory outlet
ray ban sunglasses outlet
insanity workout
beats wireless headphones
louis vuitton
longchamp outlet
celine outlet
giuseppe zanotti sandals
fake watches
true religion jeans
michael kors handbags
cartier watches
oakley vault
coach outlet
louis vuitton outlet
louis vuitton outlet
christian louboutin sale
cheap oakley sunglasses
coach outlet store online
coach outlet
ray ban sunglasses
polo ralph lauren outlet
michael kors outlet
kate spade outlet
louis vuitton
kobe bryant shoes
christian louboutin outlet
kevin durant shoes 8
jordan 3 infrared
beats headphones
coach factory outlet
christian louboutin outlet
gucci handbags
cheap jordan shoes
michael kors outlet
michael kors outlet clearance
louis vuitton outlet
louis vuitton
louis vuitton
2016.7.15haungqin

July 14, 2016 9:16 PM  
Blogger jeje said...

ecco outlet
superdry clothing
ugg boots clearance
canada goose
supreme shirt
christian louboutin outlet
off white shoes
nike shoes for women
hugo boss outlet
true religion outlet

July 13, 2018 9:07 PM  

Post a Comment

Links to this post:

Create a Link

<< Home