ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, September 12, 2006

ಮಜಾವಾಣಿ ವಾಣಿಜ್ಯ - ಧರ್ಮ

Apple - AOL ಸಹಯೋಗದಲ್ಲಿ iGod ಮಾರುಕಟ್ಟೆಗೆ
ಸ್ಯಾನ್ ಹೋಸೆ (ಕ್ಯಾಲಿಫೋರ್ನಿಯ), ಸೆಪ್ಟೆಂಬರ್ ೧೫, ೨೦೦೬: ಶರವೇಗದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಲು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ (AOL) ಅಮೆರಿಕದ ಪ್ರಖ್ಯಾತ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ತಯಾರಕರಾದ Apple ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಫಲಿತವಾದಲ್ಲಿ ಮುಂದಿನ ಕ್ರಿಸ್‌ಮಸ್ ವೇಳೆಗೆ ಅಮೆರಿಕನ್ ಮಾರುಕಟ್ಟೆಯಲ್ಲಿ iGod ಲಭ್ಯವಾಗಲಿದೆ.

ಆರ್ಟ್ ಆಫ್ ಲಿವಿಂಗ್ ತಂತ್ರಜ್ಞಾನ ಮತ್ತು ಆಪಲ್ ಸಂಸ್ಥೆಯ ವಿನ್ಯಾಸದಿಂದ ಹೊರಬರಲಿರುವ iGod, ಹಲವಾರು ಬಣ್ಣ, ರೂಪ ಮತ್ತು ಗಾತ್ರಗಳಲ್ಲಿ ಲಭ್ಯವಾಗಲಿದ್ದು ಧಾರ್ಮಿಕ ಮಾರುಕಟ್ಟೆಯಲ್ಲಿ ಒಂದು ಹೊಸ ಕ್ರಾಂತಿಯನ್ನು ಉಂಟುಮಾಡುವ ನಿರೀಕ್ಷೆ ಇದೆ.
ಒಪ್ಪಂದ ಸಹಿ ಹಾಕಿದ ನಂತರ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಮತ್ತು ಆಪಲ್ ಸಂಸ್ಥೆಯ ಮುಖ್ಯಸ್ಥ ಸ್ಟೀವ್ ಜಾಬ್ಸ್, " ಪೂರ್ವದ ತಂತ್ರಜ್ಞಾನ ಮತ್ತು ಪಶ್ಚಿಮದ ವಿನ್ಯಾಸಗಳ ಅಪೂರ್ವ ಮಿಲನವಾಗಿರುವ iGod, ಇಂದಿನ iPod ಜನಾಂಗಕ್ಕೆ ಅಧ್ಯಾತ್ಮಿಕ ಅನುಭವವನ್ನು ಆಕರ್ಷಕ ಬೆಲೆಗೆ ದೊರಕಿಸುವುದರಲ್ಲಿ ಸಂದೇಹವೇ ಇಲ್ಲ" ಎಂದರು.

NASDAQನತ್ತ AOL?: "ಭಾರತೀಯ ಧಾರ್ಮಿಕ ಮಾರುಕಟ್ಟೆ ಇನ್ನೂ ಅಷ್ಟೊಂದು ಮೆಚ್ಯೂರ್ ಆಗಿಲ್ಲ. ಇಂಡಿಯನ್ ಆಧ್ಯಾತ್ಮಿಕ ಬಳಕೆದಾರ ತನ್ನ ನೀಡ್ಸ್‌ಗೆ ಇನ್ನೂ ಬಹಳ ಮಟ್ಟಿಗೆ ಲೋಕಲ್ ಸರಬರಾಜುದಾರರ ಮೊರೆ ಹೋಗುತ್ತಿದ್ದಾನೆ. ಮುಂದಿನ ವರ್ಷದ ದೀಪಾವಳಿ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ iGod release ಮಾಡುವ ಆಲೋಚನೆ ಇದೆಯಾದರೂ, ಅದನ್ನು ಸದ್ಯಕ್ಕೆ ಎಕ್ಸ್‌ಕ್ಲೂಸಿವ್ ಲೈಫ್‌ಸ್ಟೈಲ್ ಶಿಬಿರಗಳಲ್ಲಿ ಆಯ್ದ ವ್ಯಕ್ತಿಗಳಿಗೆ ಮಾತ್ರ ಮಾರಲಾಗುವುದು. Coolness factor ಕಾಪಾಡಿಕೊಳ್ಳುವುದು ಅತ್ಯವಶ್ಯಕ" ಎಂದು ರವಿಶಂಕರ್ ನುಡಿದರು.

ಭಾರತೀಯ ಮಾರುಕಟ್ಟೆಯನ್ನು ಕ್ಯಾಪ್ಚರ್ ಮಾಡಲು AOL ಸಂಸ್ಥೆ ಬೇರೊಂದು ತಂತ್ರವನ್ನು ನಿರೂಪಿಸಿದೆ ಎನ್ನಲಾಗಿದ್ದು, ಆ ಯೋಜನೆಯ ಪ್ರಕಾರ ಪ್ರತಿಯೊಂದು ನಗರದಲ್ಲೂ ಧಾರ್ಮಿಕ mallಗಳನ್ನು ತೆರೆಯಲಿದೆ. ಈ mallಗಳಲ್ಲಿ ವಿವಿಧ ದೇವಾಲಯ/ಪ್ರಾರ್ಥನಾ ಮಂದಿರಗಳಿಗೆ ವಿವಿಧ ಗಾತ್ರದ ಮಳಿಗೆಗಳು ಬಾಡಿಗೆಗೆ ದೊರೆಯಲಿದ್ದು, ಭಕ್ತಾದಿಗಳು ತಮ್ಮ ಇಷ್ಟ ದೇವರುಗಳನ್ನು ಒಂದೆಡೆಯೇ ದರ್ಶಿಸುವ ಸೌಲಭ್ಯವಿದೆ. ಏರ್ ಕಂಡೀಷನ್ ವ್ಯವಸ್ಥೆ, ಸೆಕ್ಯೂರಿಟಿ, ಪಾರ್ಕಿಂಗ್ ಸೌಲಭ್ಯ, multi cuisine fast food ಪ್ರಸಾದ ಮಾತ್ರವಲ್ಲದೇ, ಹಬ್ಬ ಹರಿದಿನಗಳಲ್ಲಿ ಹಾಲಿಡೇ-ಸೇಲ್ (ಶಿವನಿಗೆ ಎರಡು ಅಭಿಷೇಕ ಮಾಡಿಸಿದರೆ ಒಂದು ಗಣೇಶ ಅರ್ಚನೆ ಉಚಿತ, ಇತ್ಯಾದಿ) ವ್ಯವಸ್ಥೆಗೆ ಬೇಕಾದ ಕಂಪ್ಯೂಟರ್ ಪರಿಣಿತಿಯನ್ನೂ ಸಂಸ್ಥೆ ಒದಗಿಸಲಿದೆ. ಪ್ರತಿ ಮಾಲಿನಲ್ಲಿಯೂ ಒಂದು ಪ್ರೀಮಿಯಂ ಡ್ರೈವ್-ಇನ್ ದೇವಾಲಯವಿದ್ದು, Fast God ದರ್ಶನದ ವ್ಯವಸ್ಥೆ ಮಾಡುವ ಆಲೋಚನೆ ಇದೆ.

ಈ ಯೋಜನೆಗಳಿಗೆ ಬೇಕಾದ ಕ್ಯಾಪಿಟಲ್ ಅನ್ನು ಸಂಗ್ರಹಿಸಲು, ಆರ್ಟ್ ಆಫ್ ಲಿವಿಂಗ್ ಸಂಸ್ಥೆ Nasdaq ಷೇರು ಮಾರುಕಟ್ಟೆಯಲ್ಲಿ ಸದ್ಯದಲ್ಲಿಯೇ ನಮೂದಾಗಲಿದೆ ಎನ್ನಲಾಗಿದೆ.

Labels:

8 Comments:

Anonymous Anonymous said...

Beautiful! This is about the best so far!

September 13, 2006 8:59 AM  
Blogger ಅಸತ್ಯ ಅನ್ವೇಷಿ said...

iGod!
Aiyayyoooo God!

ನೀವು ಲೋಕಮುಖಕ್ಕೆ ತೋರಿಸಿಕೊಡುತ್ತಿರುವ iMall ಗಳಲ್ಲಿ ಯುವಜನಾಂಗದಲ್ಲಿ ಹಾಸುಹೊಕ್ಕಾಗಿರುವ ದೇವರ ಚಿತ್ರಗಳ ಮಾಲು ದೊರೆಯುತ್ತದೆಯೇ ಎಂಬ ಬಗ್ಗೆ ತನಿಖೆಯಾಗಬೇಕಿದೆ.

September 13, 2006 9:27 AM  
Anonymous sritri said...

ಮುಚ್ಚಿದ್ದ ಮಜಾವಾಣಿ ಆಫೀಸ್ ಮತ್ತೆ ತೆರೆದಿದ್ದು ನೋಡಿ ಸಂತೋಷ ಆಯಿತು.

igod, Fast God ಬಳಸುವಷ್ಟು ಶ್ರಿಮಂತರಲ್ಲಪ್ಪ ನಾವು. ಸದ್ಯಕ್ಕೆ local godಗಳೇ ನಮ್ಮ care takersu.

September 13, 2006 12:09 PM  
Blogger ಪಬ್ said...

iಹೆಂಡ, eಹೆಂಡಗಳು ಬಂದಾಗ ಎಚ್ಚರಿಸಿ. ಅಲ್ಲಿ ತನಕ ಸ್ವಲ್ಪ ತೂರಾಡಿ ಬಿದ್ದಿರುತ್ತೇನೆ.

-ಪಬ್

September 13, 2006 1:26 PM  
Anonymous Anonymous said...

Terrific, awesome. This is definitely one of the best from Majavani. Keep it up, welcome back

- kannadiga

September 14, 2006 11:41 PM  
Blogger P Kalyan said...

ಒಂದೇ AOL (Art Of Living) ಮತ್ತು ಬರೀ ನಾಯಿPod ಮಾತ್ರ ಗೊತ್ತಿರುವ ನನ್ನಂತಹ ಇನ್ನೂ ಅಷ್ಟೊಂದು ಮೆಚ್ಯೂರ್ ಆಗದ ಭಾರತದ ಓದುಗರಿಗೆ ಬೇರೆ ಯಾವ ಕೊಂಡಿಯು ಕೊಡದೆ ಇದ್ದರೆ, ನಿಮ್ಮ ವರದಿ ಸಂಪೂರ್ಣ "ಸುಳ್ಳು" ಎಂದೆನಿಸುತ್ತದೆ.

ಆದ್ದ್ದರಿಂದ ಭಾರತೀಯ ಮಾರುಕಟ್ಟೆ ಕ್ಯಾಪ್ಚರ್ ಮಾಡಲು ಸಾಕಷ್ಟು ಪುರಾವೆಗಾಗಿ ಅಲ್ಲಲ್ಲಿ ಹೊರಗಿನ ಕೊಂಡಿಗಳನ್ನು ಕೊಡಬೇಕಾಗಿ ವಿನಂತಿ!

September 24, 2006 6:29 AM  
Blogger yashaswini said...

ಈ ಅಲೋಚನೆ ಚೆನ್ನಾಗಿದೆ. ಪೇಟೆಂಟ್ ಆಗಿದೆಯೇ?
regards
yashaswini

October 07, 2006 6:23 AM  
Anonymous Anonymous said...

Super idea alva? :)

August 30, 2007 4:15 AM  

Post a Comment

Links to this post:

Create a Link

<< Home