ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, September 06, 2006

ಮಜಾವಾಣಿ ಸೆನ್ಸೇಷನಲ್ ಸುದ್ದಿ!!!!!ಮುಂಬೈನಲ್ಲಿ ಕಾಲಯಂತ್ರ: ಭವಿಷ್ಯತ್ತಿನಿಂದ ಬಂದಿಳಿದ ಸುಂದರಾಂಗಿಯರು!

ಮುಂಬೈ, ಸೆಪ್ಟೆಂಬರ್ ೫: ಆಶ್ಚರ್ಯ! ಅದ್ಭುತ!! ನಂಬಲಾಗದ ಸುದ್ದಿ!!! ಇಂದು ಸಂಜೆ ನಗರದ ಜುಹು ಬೀಚಿನಲ್ಲಿ ಕಾಲಯಂತ್ರವೊಂದು ಕಾಲಿಟ್ಟಿರುವ ಸಂಗತಿ ನಾಳಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಲಿದೆ!!!!

ನಮ್ಮ ಪತ್ರಿಕೆಯ ಗುಣ ಮಟ್ಟದ ಬಗೆಗೆ ಅಪಾರ ಅಭಿಮಾನ ಮತ್ತು ಗೌರವ ಹೊಂದಿರುವ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಸೆನ್ಸೇಷನಲ್ ಸುದ್ದಿಯನ್ನು ಎಕ್ಸ್‌ಕ್ಲೂಸಿವ್ ಆಗಿ ಇಟ್ಟುಕೊಳ್ಳದೆ ನಮ್ಮ ಪತ್ರಿಕೆಯೊಂದಿಗೆ ಹಂಚಿಕೊಂಡು ಪತ್ರಿಕಾಸೋದರತೆಯನ್ನು ಎತ್ತಿ ತೋರಿದೆ.

ಟೈಮ್ಸ್ ಆಫ್ ಇಂಡಿಯಾ ವಿಶೇಷ ವರದಿಗಾರ ಜನಾರ್ಧನ ರೆಡ್ಡಿಯವರು ಈ ಕಾಲಯಂತ್ರವನ್ನು ಕಣ್ಣಾರೆ ಕಂಡಿದ್ದು, ಆ ಕಾಲಯಂತ್ರದ ಪ್ರಯಾಣಿಕರನ್ನು ಸಂದರ್ಶನ ಸಹ ಮಾಡಿದ್ದಾರೆ.

ಈ ವಿಷಯದ ಕುರಿತು ರೆಡ್ಡಿಯವರು ನಮಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಆ ಯಂತ್ರದಲ್ಲಿನ ಪ್ರಯಾಣಿಕರು ಕ್ರಿ.ಶ. ೩೧ನೆಯ ಶತಮಾನದಿಂದ ಬಂದಿಳಿದಿದ್ದು, ಇಂದಿನ ಖ್ಯಾತ ಬಾಲಿವುಡ್ ತಾರೆಯರಾದ ಐಶ್ವರ್ಯ ರೈ, ಮಲ್ಲಿಕಾ ಶರಾವತ್ ಮತ್ತು ಪ್ರಿಯಾಂಕ ಚೋಪ್ರಾರವರ ವಂಶಸ್ತರಾಗಿದ್ದಾರೆ. ಪ್ರಯಾಣಿಕರು ಈ ತಾರೆಯರ ತದ್ರೂಪಿಗಳಾಗಿದ್ದು, ಒಂದು ವಿಷಯದಲ್ಲಿ ಮಾತ್ರ ವಿಭಿನ್ನರಾಗಿದ್ದಾರೆ; ನಾಭಿಯಿರಬೇಕಾದ ಜಾಗದಲ್ಲಿ ನಯನವಿದೆ!

ಈ ವೈಶಿಷ್ಟ್ಯದ ಕುರಿತು ರೆಡ್ಡಿಯವರು ಪ್ರಯಾಣಿಕರನ್ನು ಪ್ರಶ್ನಿಸಿದಾಗ, ಆ ಕಾಲಯಾನಿಗಳು, "೨೦ನೆಯ ಶತಮಾನದ ಅಂತ್ಯ ಮತ್ತು ೨೦ನೆಯ ಶತಮಾನದ ಆದಿಯಲ್ಲಿ, ಹೊಕ್ಕಳು ಪ್ರದರ್ಶನ ಫ್ಯಾಷನ್ ಸ್ಟೇಟ್‌ಮೆಂಟ್ ಆಯಿತು. ಅದೇ ಸಮಯದಲ್ಲಿ ಮಹಿಳಾ ವಿಮೋಚನಾ ಚಳುವಳಿಯೂ ನಡೆದಿತ್ತು. ಇವೆರಡೂ ಜೊತೆಗೂಡಿ, ಎವೆಲ್ಯೂಷನರಿ ಮಾರ್ಪಾಡುಗಳಿಂದ ಹೊಕ್ಕಳಿರಬೇಕಾದ ಜಾಗದಲ್ಲಿ ನಮಗೆ ಮೂರನೆಯ ಕಣ್ಣು ಬಂದಿದೆ. ಈಗ ಪುರುಷರು ನಮ್ಮೆಡೆ ನೋಡುವಾಗ, ನಾವು ದಿಟ್ಟತನದಿಂದ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಹುದು" ಎಂದಿದ್ದಾರೆ.
(ಹಲವು ವರ್ಷಗಳ ಹಿಂದಿನ ಎಸ್.ಎನ್.ಎಲ್. ಪ್ರಸಂಗವೊಂದರಿಂದ ಕದ್ದದ್ದು)

12 Comments:

Blogger Dr U B Pavanaja said...

ಟೈಂಸ್ ಆಫ್ ಇಂಡಿಯಕ್ಕೆ ಟ್ಯಾಬ್ಲಾಯಿಡ್ ಆಫ್ ಇಂಡಿಯ ಎಂಬ ಹೆಸರಿರುವುದು ನಿಮಗೆ ಗೊತ್ತೆ? ಅವರು ಈಗ ಅದನ್ನು ಕನ್ನಡ ಭಾಷೆಯಲ್ಲೂ ಹೊರತರಲು ಸರ್ವಸಿದ್ಧತೆ ನಡೆಸುತ್ತಿದ್ದಾರೆ. ಆ ಯೋಜನೆ ಪೂರ್ತಿಗೊಂಡ ನಂತರ ಟೈಂಸ್‌ನ ಗಲೀಜನ್ನು ನೀವು ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದ ಮಾಡಬೇಕಾಗಿಲ್ಲ. ಅವೆಲ್ಲ ಕನ್ನಡ ಭಾಷೆಯಲ್ಲೇ ನಿಮಗೆ ಲಭ್ಯವಾಗಲಿವೆ.

-ಪವನಜ

September 08, 2006 3:58 AM  
Anonymous ಹನುಮಂತೂ said...

ಸುಂದರಾಂಗಿಯರು ಅನ್ನುತ್ತಿದ್ದೀರಿ. ಅಂಗಿಯಿಲ್ಲವಲ್ಲ. ಹಿಂದೆ ಬಿಳಿಗಿರಿಯವರು ಶಿವನಿಗೆ ಮೂರೈ ನನಗೆ ನಾಲ್ಕೈ ಬಿ I ಎಲ್ I ಜಿ I ಆರ್ I ಅಂದಿದ್ದರು. ಇಲ್ಲಿ ಸುಂದರಿಯರಿಗೆ ಮೂರೈ ಆಗಿದೆ. ಸತ್ಯಂ ಶಿವಂ ಸುಂದರಂ.

ರಾಮಾನುಜನ್ ಹೊಕ್ಕುಳಲ್ಲಿ ಹೂವಿಲ್ಲ ಅಂದು ಅಲ್ಲಿಗೇ ನಿಲ್ಲಿಸಿದ್ದರು. ನೀವು ಆ ಅಧೂರಾ ಕೆಲಸವನ್ನು ಮುಂದುವರೆಸೆ ಹೂವಿಲ್ಲ ಕಂಣಿದೆ ಅಂದಿದ್ದೀರೆ. ಭೇಷ್. ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೆ ಬೇರೆಯದೇ ಅರ್ಥ ಬರಬಹುದು ಅಲ್ಲವೇ?/

September 09, 2006 12:24 PM  
Blogger V.V. said...

This comment has been removed by a blog administrator.

September 12, 2006 3:10 AM  
Blogger V.V. said...

ಮೊದಲು ಪವನಜ ಈಗ ಹನುಮಂತೂ..!
ಇದೇನಿದು?! ನಮ್ಮ ಪತ್ರಿಕೆ ನರರಿಗಿಂತ ವಾನರರಿಗೇ ಪ್ರಿಯವಾಯಿತೇ?!!!.
ಇರಲಿ, ಎಲ್ಲಾ ಆ ಶ್ರೀರಾಮನ ದಯೆ.

ಪವನಜರೇ, ಟೈಮ್ಸ್ ಆಫ್ ಇಂಡಿಯಾದ ಗಾರ್ಬೇಜ್ ರೀಸೈಕ್ಲಿಂಗ್ ಪ್ರಯತ್ನದ ಬಗೆಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು. ನಮ್ಮ ಪತ್ರಿಕೆ ಈ ಪ್ರಯತ್ನವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ದಿಗಂಬರ ಸುಂದರಿಯರ ಮೂರೈ, ಬಿಳಿಗಿರಿಯವರ ನಾಲ್ಕೈ, ರಾಮಾನುಜನ್ನರ ನಳಿನವಿಲ್ಲದ ನಾಭಿ ಎಲ್ಲವನ್ನೂ ಒಟ್ಟಿಗೇ ಕಾಣುವಂತಹ ದಿವ್ಯದೃಷ್ಟಿಯುಳ್ಳ ಹನುಮಂತೂರವರಿಗೆ ಒಂದೂ I ಇಲ್ಲದಿರುವುದು ನಿಜಕ್ಕೂ ಒಂದು ಆಸಕ್ತಿಕರ Iರನಿ.

ವಂದನೆಗಳೊಂದಿಗೆ,

ಸಂಪಾದಕ

September 12, 2006 10:52 AM  
Anonymous ಹನುಮಂತೂ said...

ಇದೇನು ಐ-ಲು ಪೈಲಾಗಿ ಬರೆಯುತ್ತೀರಿ.. ನನಗೆ ಖಂಡಿತ ಐ ಇಲ್ಲ, ಐ-ಪ್ರಾಬ್ಲಮ್ಮೂ ಇಲ್ಲ. ಹೀಗೆ ನರರಿಗೆ ಮುಖ್ಯವಾದಾ ಇಗೋ ಬಿಟ್ಟು ವಾನರನಾಗಿರುವ ಕನ್ನಡಿಗರ ಬಗ್ಗೇ ನಿಮಗೆ ಎಮ್ಮೆ ಇಲ್ಲವೇ?

ನೀವು ಎವಲ್ಯೂಶನ್ ಬಗ್ಗೆ ಮಾತಾಡುತ್ತಿದ್ದೀರಿ.. ವಾನರ, ನರನಾದಾಗ ಬಾಲಂಗೋಚಿ ಪೋಚಿ. ಈಗ ಮೂರೈ ಆದಾಗ - ಆಪ್ ನೇ ಮೇರೀ ಆಂಖೇಂ ಖೋಲ್ ದೀ... ವಾನರ-ನರ ಈಗ ಬರೇ ರ ಆಗಬೇಕೇ?

ನನ್ನ ಮಂಗಚೇಷ್ಟೆ ಕ್ಷಮಿಸಿ. ನಿಮಗೆ ಮಂಗಳವಾಗಲಿ.

September 12, 2006 9:38 PM  
Anonymous Anonymous said...

ಈ ವಿಶೇಷ ವರದಿಗಾರ ಜನಾರ್ಧನ ರೆಡ್ಡಿಯ 'ಧ'ಗೇಕೆ ಬಾಲವಿದೆ?
ಕೃಷ್ಣಮೂರ್ತಿ

September 15, 2006 9:49 AM  
Blogger Fangyaya said...

adidas stan smith
true religion shorts
michael kors outlet online
michael kors outlet
cheap jordans
nike basketball shoes
christian louboutin shoes
louis vuitton bags
gucci outlet
louis vuitton outlet
coach outlet
louis vuitton outlet
nike huarache shoes
rolex submariner
nike roshe run
timberland outlet
nike trainers
kobe shoes 11
pandora jewelry
tory burch handbags
fitflops sale clearance
ray ban sunglasses outlet
coach outlet store online
louis vuitton
air jordans
louis vuitton
gucci outlet
true religion jeans
abercrombie
nike air force
louis vuitton outlet
michael kors outlet
coach factory outlet
tory burch outlet
jordan retro 3
christian louboutin outlet
replica watches
michael kors outlet
michael kors outlet
20167.13chenjinyan

July 13, 2016 3:50 AM  
Blogger xjd7410@gmail.com said...

air jordan retro
ray ban sunglasses
oakley sunglasses
pandora jewelry
replica watches
kobe shoes 11
gucci bags
supra sneakers
coach outlet store online
michael kors outlet
retro jordans
basketball shoes
louis vuitton outlet
michael kors outlet clearance
michael kors outlet
replica watches
oakley sunglasses wholesale
adidas yeezy
fitflops sale clearance
kobe 11
christian louboutin shoes
nike uk
michael kors outlet
coach factory outlet
michael kors outlet
jordan retro 3
louis vuitton outlet
louis vuitton outlet
nike sb
rolex watches
rolex watches
louis vuitton handbags
michael kors handbags
louis vuitton outlet
kate spade
air max 90
lebron james shoes
adidas shoes
nike air max
jordan shoes
2016.7.15haungqin

July 14, 2016 9:04 PM  
Anonymous Cara Menghentikan Pertumbuhan Tumor said...

The article was very interesting to read, thank you for sharing the information

Obat Untuk Panas Di Lambung
Obat Keropos Tulang Tradisional
Obat Telinga Berdenging
Obat Luka Pada Dinding Lambung
Cara Sembuhkan Bengkak Di Leher
Cara Sembuhkan Pendarahan Ginjal

March 26, 2018 2:56 AM  
Blogger Yaro Gabriel said...

www0606
miu miu handbags
bottega veneta outlet
adidas outlet
michael kors outlet
uggs outlet
canada goose jackets
golden state warriors jerseys
canada goose jackets
air jordan retro
prada shoes

June 06, 2018 4:04 AM  
Blogger Yaro Gabriel said...

www0707


mulberry outlet
ray ban sunglasses
converse shoes
true religion jeans
michael kors outlet
michael kors handbags
pandora charms
visvim shoes
air jordan shoes
brequet wathes

July 07, 2018 2:41 AM  
Blogger jeje said...

ugg boots
polo ralph lauren
canada goose jackets
ugg boots clearance
ralph lauren outlet
nike factory outlet
ugg boots
michael kors outlet
pandora jewelry
off white shoes

July 13, 2018 9:06 PM  

Post a Comment

Links to this post:

Create a Link

<< Home