ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 29, 2006

ಮಜಾವಾಣಿ ವಿಷಾದಾಂಕ: ನಕಲಿ ಗೊಬ್ಬರ ತಿನ್ನಿಸುವ ಪ್ರಯತ್ನ ವಿಫಲ

ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಪ್ರಯತ್ನ ವಿಫಲ!

ಬೆಂಗಳೂರು ಜೂನ್ ೨೮, ೨೦೦೬: ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸುವ ಪ್ರಯತ್ನದ ವಿಚಾರ ದಟ್ಸ್ ಕನ್ನಡ ಇಂಟರ್‌ನೆಟ್ ಪತ್ರಿಕೆಯಲ್ಲಿ ಓದಿ ನಮ್ಮ ಪತ್ರಿಕೆಗೆ ವಿಷಾದವಾಗಿದೆಯೆಂದು ತಿಳಿಸಲು ವಿಷಾದಿಸುತ್ತೇವೆ. ಈ ವಿಷಾದಕರ ಪ್ರಸಂಗದ ಕುರಿತಾದ ವರದಿಯ ಜೊತೆಗೆ ಮಣ್ಣಿನ ಮಗನ ಅಥವಾ ಮಣ್ಣಿನ ಮೊಮ್ಮಗನ ಚಿತ್ರ ಪ್ರಕಟಿಸದಿರುವ ಆ ಪತ್ರಿಕೆಯ ಸಂಪಾದಕರ ನಿರ್ಧಾರ ನಿಜಕ್ಕೂ ವಿಷಾದಕರ.

ಮಣ್ಣಿನ ಮಗನಿಗೆ ಅಸಲೀ ಗೊಬ್ಬರ ತಿನ್ನಿಸುವ ಪ್ರಯತ್ನ ಸಫಲವಾದಲ್ಲಿ ಮಾತ್ರ ಮಣ್ಣಿನ ಮಗನ ಚಿತ್ರ ಪ್ರಕಟಿಸಬೇಕೆಂಬ ಧೋರಣೆ ಆ ಸಂಪಾದಕರಿಗೆ ಇದ್ದಂತಿದೆ. ವರದಿಯ ಜೊತೆಗೆ ಪ್ರಕಟಿಸುವ ಚಿತ್ರಗಳು ವರದಿಗೆ ಸಂಬಂಧ ಪಟ್ಟೇ ಇರಬೇಕೆಂಬ ಸಂಪಾದಕರ ನಿರ್ಣಯ ನಿಜಕ್ಕೂ ವಿಷಾದನೀಯ.

ವರದಿಗಳು ಮಾತ್ರ ಯಾವುದೇ ವಿಷಯದಲ್ಲಿರಬಹುದು ಆದರೆ ಚಿತ್ರಗಳು ಮಾತ್ರ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಸಂಪಾದಕರ ಮಾತಿನ ಹಿಂದೆ ಚಿತ್ರ-ಸ್ವಾತಂತ್ರ್ಯ ವಿರೋಧಿ ಮನೋಭಾವ ಎದ್ದು ಕಾಣುತ್ತಿದೆ. ಪತ್ರಿಕಾಸ್ವಾತಂತ್ರ್ಯದ ಕುರಿತು ಮಾತನಾಡುವ ಪತ್ರಕರ್ತರೇ ಚಿತ್ರ-ಸ್ವಾತಂತ್ರ್ಯವನ್ನು ಹರಣಮಾಡಿರುವುದು ವಿಷಾದಕರ ಸಂಗತಿ.

ವರದಿಗಳ ದಬ್ಬಾಳಿಕೆ ಇದೇ ರೀತಿ ಮುಂದುವರೆದಲ್ಲಿ, ವರದಿಯ ಶೀರ್ಷಿಕೆ ಮತ್ತು ವರದಿಯಲ್ಲಿನ ವಿಚಾರಗಳೂ ಸಹ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಅಪಾಯಕಾರಿ ಒತ್ತಾಯ ಕೇಳಿ ಬಂದರೆ ಆಶ್ಚರ್ಯವೇನೂ ಇಲ್ಲ.

13 Comments:

Blogger mavinayanasa said...

ಗೊಬ್ಬರ ನಕಲಿಯೋ ಅಥವಾ ಮಣ್ಣಿನ ಮಗ ನಕಲಿಯೋ? ನನಗೆ ಸಂದೇಹ ಏಕೆ ಅಂದ್ರೆ, ಮಣ್ಣಿನಮಗ ನಕಲಿ ಇರುವ ಸಾಧ್ಯತೆ ಇರೋದ್ರಿಂದ ಅವರ ಚಿತ್ರವನ್ನು ಪ್ರಕಟಿಸಿಲ್ಲ. ನಕಲಿ ಮಣ್ಣಿನ ಮಗ ಗೊಬ್ಬರ ತಿಂದರೆ ಅಸಲಿಯಾಗುವ ಸಂಭವವಿದೆ. ಅವರು ನಕಲಿ ಗೊಬ್ಬರ ತಿಂದರೂ ಅಸಲಿಯಾಗುವ ಸಂಭವ ಹೆಚ್ಚು.

ಇನ್ನು ಅಸಲಿ ಮಣ್ಣಿನ ಮಗ ನಕಲಿ ಗೊಬ್ಬರ ತಿಂದರೆ ಅನಾರೋಗ್ಯ ಆಗುವುದು. ಬಹುಶ: ಈ ವಿಷಯವನ್ನು ವರದಿ ಮಾಡಲು ಹೋಗಿ ಇನ್ನೇನೋ ವರದಿ ಮಾಡಿರಬಹುದು. ಅಂದ ಹಾಗೆ ಮಣ್ಣಿನ ಮೊಮ್ಮಗನೇ ಮಣ್ಣಿನ ಮಗನಿಗೆ ನಕಲಿ ಗೊಬ್ಬರ ತಿನ್ನಿಸುವ ಸಂಚು ಮಾಡಿರಬಹುದೇ? ಅನ್ವೇಷಣೆ ಮಾಡಿ ನನ್ನ ಸಂದೇಹ ಪರಿಹರಿಸುವಿರಿ ಎಂದು ನಂಬಿರುವೆ.

June 30, 2006 3:35 AM  
Blogger ಅಸತ್ಯ ಅನ್ವೇಷಿ said...

ಮಾವಿನಯನಸ ನಮ್ಮನ್ನೆಲ್ಲಾ ಗೊಂದಲದಲ್ಲಿ ಸಿಲುಕಿಸಿದ್ದಾರೆ.
ಅವರ ಮಾತುಗಳನ್ನೆಲ್ಲಾ ಸೇರಿಸಿ ಒಂದೇ ಮಾತಿನಲ್ಲಿ ಹೇಳಿದರೆ (ಹೇಗ್ ಹೇಗೋ)ಹೀಗಾಗುತ್ತದೆ ಅಂತ ಅನಿಸುತ್ತದೆ.

ಗೊಬ್ಬರ ನಕಲಿಯಾಗಿರಲಿ, ಅಸಲಿಯಾಗಿರಲಿ, ಕೊಟ್ಟ ಕೊನೆಯಲ್ಲಿ ಮಣ್ಣಿನ ಮಗ, ಮೊಮ್ಮಗ ಎಲ್ಲಾ ಸೇರಿಕೊಂಡು ಕರ್ನಾಟಕದ ಜನತೆಯ ಮುಸುಡಿಗೆ ಗೊಬ್ಬರದ ಕೈ ಸವರಿದ್ದಾರೆ.

June 30, 2006 4:40 AM  
Anonymous ಶ್ರೀವತ್ಸ ಜೋಶಿ said...

ಮಣ್ಣಿನ ಮಕ್ಕಳು ಎಸ್ಸೆಲ್ಸಿ /ಪಿಯುಸಿ ಪರೀಕ್ಷೆಗಳಲ್ಲಿ ನಕಲಿ ಮಾಡಿಯಾದರೂ ಪಾಸಾಗಬೇಕೆಂಬ ಘನ ಉದ್ದೇಶದಿಂದ ಅವರಿಗೆಲ್ಲ ನಕಲಿಗೆ ಒಬ್ಬರನ್ನು ಪೂರೈಸುವ (= ಒದಗಿಸುವ = ತಿನ್ನಿಸುವ...) ಘನ ಸರಕಾರದ ಉದ್ದೇಶವು ಆ ಲೋಪಸಂಧಿಯ (ನಕಲಿಗೆ + ಒಬ್ಬರ = ನಕಲಿಗೊಬ್ಬರ) ಅವಾಂತರದಿಂದಾಗಿ ಹೀಗಾದದ್ದು!!!

June 30, 2006 6:20 AM  
Anonymous Anonymous said...

the attempt is only to make more farmers to turn away from farming and make them into software engineers. it is a gross mistake and a pitiful misjudgement.

July 03, 2006 12:11 PM  
Blogger Karthik said...

ನನ್ನ ಮೂರು 'ಹ'..

ಇಲ್ಲಿ ನಕಲಿ ಅಸಲಿ .. ವ್ಯಾಖ್ಯಾನಕ್ಕಿಂತ ಪತ್ರಕರ್ತರ ಚಡ್ಪಡಿಕೆ ಬಗ್ಗೆ ನಾವು ಗಮನ ವಹಿಸಬೇಕು ..

ವಿಷಯಕ್ಕೆ ತಕ್ಕಂತೆ ತಲೆಬರಹ, ಅಂಕಣ, ಚಿತ್ರಗಳು ಇರಬೇಕೆಂದರೆ ಹೇಗೆ ? ಖಂಡಿತ ಅದು ಸಹಿಸಲಾರದ ವಿಚಾರ..

ನಿಜ ನಿಜ

July 03, 2006 11:53 PM  
Blogger Shiv said...

ಗೊಬ್ಬರ ನಕಲಿಯೋ ಅಸಲಿಯೋ ಅನ್ನೋದನ್ನು ಮಣ್ಣಿನ ಮಗನಿಗೆ-ಮೊಮ್ಮಗನಿಗೆ ತಿನಿಸಿ ಟೆಸ್ಟ್ ಮಾಡ್ಬೇಕು.

ಇನ್ನು ಸಂಪಾದಕರಿಗೆ ಬೇಕಾದದ್ದು ಚಿತ್ರ-ಅದಕ್ಕೆ ಬೇಕಾದ/ಬೇಕಿಲ್ಲದ ಲೇಖನ ಪ್ರಕಟಿಸುವ ಕ್ರಿಯೇಟಿವಿಟಿ ಇಲ್ಲದಿದ್ದರೆ ಹೆಂಗೆ?

July 07, 2006 1:01 AM  
Blogger ಅಸತ್ಯ ಅನ್ವೇಷಿ said...

ಮಜಾವಾಣಿ ಸಂಪಾದಕರು ನಾಪತ್ತೆಯಾಗಿದ್ದಾರೆ ಅಂತ ನಮ್ಮ ಪತ್ರಿಕೆಯಲ್ಲಿ ಒಂದು ಕಾಲಮ್ಮು ಜಾಹೀರಾತು ಬಂದಿದೆ.

ಅದನ್ನು ನಿಮ್ಮನ್ನು ಕೇಳಿಯೇ ಪ್ರಕಟಿಸೋಣ ಅಂದ್ಕೊಂಡಿದ್ದೇವೆ.

ಛೆ... ಎಲ್ಲಿ ಹೋದ್ರು ಇವ್ರು...?
;)

July 08, 2006 7:19 AM  
Anonymous Anonymous said...

ಈಗ ತಾನೆ ಬಂದ ವರದಿಯಂತೆ ಮಜಾವಾಣಿ ಸಂಪಾದಕರು ಮಜಾವಾಣಿಗಿಂತ ಹೆಚ್ಚು ಸರ್ಕುಲೇಶನ್ ಇರುವ ಬೊಗಳೆರಗಳೆ ಪತ್ರಿಕೆಯಲ್ಲಿ ಉಪಸಂಪಾದಕರ ಹುದ್ದೆಗೆ ಅರ್ಜಿಹಾಕಿ ಕಾಯುತ್ತಿದ್ದಾರೆ.

-ಪಬ್

July 13, 2006 9:51 AM  
Blogger Mental said...

Oh oh, lot of Kannada Mentals. My dear Mentals (including the commenters here, other than me), you all can visit my Mental Dot Com Health care unit and getaway with lot of mysteries as gift vouchers.

Don't think this is a marketing strategy. I have to tell you that you are all mentally ill. You need a Mental center with more than world class infrastructure. My Company provides that. It is absolutely Universe class.

Come and Visit. Pay no money but comments. All are free.

July 17, 2006 10:11 AM  
Blogger Fangyaya said...

adidas stan smith
true religion shorts
michael kors outlet online
michael kors outlet
cheap jordans
nike basketball shoes
christian louboutin shoes
louis vuitton bags
gucci outlet
louis vuitton outlet
coach outlet
louis vuitton outlet
nike huarache shoes
rolex submariner
nike roshe run
timberland outlet
nike trainers
kobe shoes 11
pandora jewelry
tory burch handbags
fitflops sale clearance
ray ban sunglasses outlet
coach outlet store online
louis vuitton
air jordans
louis vuitton
gucci outlet
true religion jeans
abercrombie
nike air force
louis vuitton outlet
michael kors outlet
coach factory outlet
tory burch outlet
jordan retro 3
christian louboutin outlet
replica watches
michael kors outlet
michael kors outlet
20167.13chenjinyan

July 13, 2016 3:50 AM  
Blogger xjd7410@gmail.com said...

supra shoes
coach factory outlet
ray ban sunglasses outlet
insanity workout
beats wireless headphones
louis vuitton
longchamp outlet
celine outlet
giuseppe zanotti sandals
fake watches
true religion jeans
michael kors handbags
cartier watches
oakley vault
coach outlet
louis vuitton outlet
louis vuitton outlet
christian louboutin sale
cheap oakley sunglasses
coach outlet store online
coach outlet
ray ban sunglasses
polo ralph lauren outlet
michael kors outlet
kate spade outlet
louis vuitton
kobe bryant shoes
christian louboutin outlet
kevin durant shoes 8
jordan 3 infrared
beats headphones
coach factory outlet
christian louboutin outlet
gucci handbags
cheap jordan shoes
michael kors outlet
michael kors outlet clearance
louis vuitton outlet
louis vuitton
louis vuitton
2016.7.15haungqin

July 14, 2016 9:16 PM  
Anonymous Pengobatan Radang Paru-Paru Basah (Pneumonia) said...

Thanks for sharing the information

Pengobatan Fistula Ani
Obat Kista Rahim
Cara Mengangkat Kista Payudara
Obat Atasi Ginjal Bengkak
Pengobatan Untuk Sembuhkan Radang Amandel
Cara Mengobati Vertigo Sampai Tuntas

March 26, 2018 3:01 AM  
Blogger Rino Febri said...

thank you information, very helpful, do not forget to visit also kunju our page to berai information about health
obat kesrek di selangkangan
Cara Mengobati Tukak Lambung
cara menghilangkan budug
Obat Luka Lebam

May 23, 2018 12:20 AM  

Post a Comment

Links to this post:

Create a Link

<< Home