ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 22, 2006

ಮಜಾವಾಣಿ: ಪರಿಸರ ಸುದ್ದಿ


ವಿಧಾನ ಸೌಧದ ಬಳಿಯ ದುರ್ಗಂಧದ ಕಾರಣ ಪತ್ತೆ!

ಜೂನ್ ೨೨, ೨೦೦೬, ಬೆಂಗಳೂರು: ಹಲವು ವರ್ಷಗಳಿಂದ ವಿಧಾನ ಸೌಧದಿಂದ ಹೊರ ಬರುತ್ತಿದ್ದ ದುರ್ಗಂಧ ಬೆಂಗಳೂರಿನ ಏಕೆ, ಇಡೀ ಕರ್ನಾಟಕದ ಜನತೆಗೇ ತಿಳಿದಿರುವ ಸಂಗತಿ. ಕೆಲ ವರ್ಷಗಳಿಂದ ಈ ದುರ್ನಾತ ಮಿತಿ ಮೀರಿದ್ದು, ಆ ಪ್ರದೇಶದ ಸುತ್ತ ಓಡಾಡುವರನ್ನು ರಕ್ಷಿಸಲು, ವಿಧಾನ ಸೌಧದ ಸುತ್ತ ಬೇಲಿ ಹಾಕಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇಂದು, ಆ ದುರ್ನಾತದ ಹಿಂದಿನ ರಹಸ್ಯ ಕೊನೆಗೂ ಹೊರ ಬಿದ್ದಿದೆ. " 'ನೈಸ್' ಕಾರಿಡಾರ್ ರಸ್ತೆಯಲ್ಲಿ ಗಲೀಜು ಮಾಡಿದವರು ಯಾರು?" ವಿಷಯದ ಕುರಿತು ವಿಧಾನ ಮಂಡಲದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ ಅವರು, "ಕೊಳಕು ಸಮುದ್ರದಲ್ಲಿ ನಾವೆಲ್ಲರೂ ಈಜಾಡುತ್ತಿದ್ದೇವೆ" ಎಂದು ಹೇಳಿ ಕರ್ನಾಟಕದ ಜನರಿಗೆ ಹಲವು ವರ್ಷಗಳಿಂದ ಕಾಡುತ್ತಿದ್ದ ಈ ರಹಸ್ಯವನ್ನು ಹೊರಗೆಡವಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದ ಜನತೆ ವಿಧಾನ ಸೌಧದ ಬಳಿ ಸುಳಿಯುವಾಗ ಮೂಗು ಮುಚ್ಚಿಕೊಳ್ಳಬೇಕಾದ್ದು ತಪ್ಪಿಲ್ಲವಾದರೂ, ಇನ್ನು ಮುಂದೆ ಈ ವಿಚಾರಕ್ಕೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ.
(ಪಿ.ಟಿ.ಹೈ.)

5 Comments:

Anonymous ಶ್ರೀವತ್ಸ ಜೋಶಿ said...

ಕೊಳಕು ಸಮುದ್ರದಲ್ಲಿ "ಈಸಬೇಕು..." ಅಲ್ಲಿಂದ ಆಚೆ ಬಂದರೂ ಮತ್ತೆ ಚುನಾವಣೆಯ ಕಣದಲ್ಲಿ "ಇದ್ದು ಜೈಸಬೇಕು"!!

- ಇದು ಸಿಂಹಾಸನಾಸಕ್ತ ರಾಜ-ಕಾ-ರಣಿಗಳಿಗೆ ಪುರಂದರದಾಸರ swimmoಪದೇಶ!

June 22, 2006 8:51 PM  
Blogger ಅಸತ್ಯ ಅನ್ವೇಷಿ said...

ಮಜಾ ಸಂಪಾದಕರೆ,

ನಿಮ್ಮ ಬಿ.ಪಿ. ಹೈ ವರದಿಗಾರರು ಅಮೆರಿಕದಿಂದ ನೇರವಾಗಿ ಬೆಂಗಳೂರಿಗೆ ಬಂದು ಬಿದ್ದಿದ್ದರಿಂದ ಇನ್ನು ಬೆಂಗಳೂರು ಉದ್ಧಾರವಾದ ಹಾಗೆಯೇ.

June 23, 2006 1:01 AM  
Blogger Shiv said...

ಕೊನೆಗೆ ಈ ರಮೇಶಕುಮಾರದರೂ ಒಸಿ ಕೊಳಕುಮಯ ನಿಜ ಹೇಳಿದರಲ್ಲ..

ಜೋಶಿ ಅವರು ಹೇಳಿದಂತೆ ಈಸಬೇಕು..ಇದ್ದು ಜೈಸಬೇಕು..ಹಾಗೂ ಆಗದಿದ್ದರೆ ಮೇಲ್ಮನೆಯ ದಾರಿ ನೋಡಬೇಕು !

ವಿ.ವಿ ಅವರೇ, ದುರ್ನಾತದ ಮೂಲದ ಬಗ್ಗೆ ಏನೋ ಬರೆದಿರಿ..ಹಂಗೆ ಅದರ ವಾಸನೆ ಕಡಿಮೆ ಮಾಡೋದು ಹೆಂಗೆ ಅಂತಾ ಏನಾದರೂ ಎಡಿಯಾ ??

June 23, 2006 2:45 AM  
Blogger mavinayanasa said...

ಓಹೋ ರಾಜರ ಗಲೀಜಿನ ವಾಸನೆ ಅಂತ ನನಗೆ ತಿಳಿದಿರಲೇ ಇಲ್ಲ. ಈ ಗಲೀಜಿನ ವಾಸನೆ ಕಡಿಮೆ ಮಾಡಿದರೆ ರಾಜರ ಬಿಪಿ ಹೈ ಆಗೋದಿಲ್ವಾ? ಯಾಕೆಂದರೆ ಈಗಾಗ್ಲೇ ಇವರುಗಳು ಮೂಗು ಈ ವಾಸನೆಗೆ ಒಗ್ಗಿ ಹೋಗಿದೆ.

ಬೆಂಗಳೂರಿಗೆ ಬಂದ ಮೇಲೆ ಒಳ್ಳೊಳ್ಳೆ ಸಮಾಜಕಾರ್ಯ ಮಾಡುತ್ತಿದ್ದೀರಿ. ನಿಮ್ಮ ಅನ್ವೇಷಣೆ ಹೀಗೆಯೇ ಮುಂದುವರೆಸಿ ನಮಗೆಲ್ಲಾ ಜ್ಞಾನ ಕರುಣಿಸಿ.

June 23, 2006 3:04 AM  
Blogger Karthik said...

ಆ ವಾಸನೆಗೆ ಆಕರ್ಷಿತವಾದ ಕಾಗೆಗಳನ್ನು ಓಡಿಸಲೆಂದೇ ಗಾಂಧಿ ತಾತ ಕೋಲು ಹಿಡ್ಕೊಂಡು ನಿಂತಿರೋದು ಮತ್ತೆ ಅಂಬೇಡ್ಕರರು ಆ ಕಡೆ ಹೋಗು ಅಂತ ಕೈ ತೋರಿಸ್ತಾ ಇರೋದು ..

ತಿಳಿತಾ ?

July 03, 2006 11:55 PM  

Post a Comment

Links to this post:

Create a Link

<< Home