ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 15, 2006

ಮಜಾವಾಣಿ ವಿಷಾದಾಂಕ

"ಮೀಸಲಾತಿ ಬೇಕು" - ಮಜಾವಾಣಿ
ಜೂನ್ ೧೫, ೨೦೦೬: ಒಂದು ಕಾಲದಲ್ಲಿ ವಿಶ್ವಾದ್ಯಂತ ಮೂರೂವರೆ ಓದುಗರನ್ನು ಹೊಂದಿ, "ಸಮಸ್ತ ಕನ್ನಡಿಗರ ಎಮ್ಮೆಯ ಪತ್ರಿಕೆ" ಆಗುವ ಆಕಾಂಕ್ಷೆ ಹೊಂದಿದ್ದ ಮಜಾವಾಣಿ ಪತ್ರಿಕೆ ಇಂದು ತನಗಿಂತ ಉತ್ತಮ ಗುಣಮಟ್ಟ ಮತ್ತು ಜನಪ್ರಿಯತೆ ಹೊಂದಿರುವ "ಬೊಗಳೆ ರಗಳೆ" ಪತ್ರಿಕೆಯ ಹೊಡೆತಕ್ಕೆ ತತ್ತರಿಸುತ್ತಿರುವ ಸಂಗತಿ ವರದಿಯಾಗಿದೆ.

ನಮ್ಮ ಪತ್ರಿಕೆಯ ವರದಿಗಾರರು ಮಜಾವಾಣಿಯ ಸಂಪಾದಕರನ್ನು ಸಂದರ್ಶಿಸಿದಾಗ, ಮಜಾವಾಣಿ ಹಿಂದೆ ಬೀಳುತ್ತಿದೆ ಎಂಬುದನ್ನ್ನು ಅವರು ಮೊದಲಿಗೆ ಒಪ್ಪಲಿಲ್ಲ. "ಮಜಾವಾಣಿಯ ಧ್ಯೇಯೋದ್ದೇಶವೇ ಬೇರೆ, ಬೊಗಳೆ ರಗಳೆಯ ಗುರಿಯೇ ಬೇರೆ. ಗಾಂಧಿಯಂತಹ ಮಹಾ ಪುರುಷನನ್ನೇ ಹಾದಿ ತಪ್ಪಿಸಿದ ಸತ್ಯವೆನ್ನುವ ಅಪಾಯಕಾರಿ ಮೌಲ್ಯದ ವಿರುದ್ಧ ಸೆಣೆಸುವುದು ನಮ್ಮ ಪತ್ರಿಕೆಯ ಗುರಿ. ಆದರೆ, ಬೊ.ರ.ದ ಗುರಿ ಅದಲ್ಲ, ಅಸತ್ಯವನ್ನು ಹುಡುಕುವುದು." ಎಂದೆಲ್ಲಾ ತಡಬಡಾಯಿಸುತ್ತಿದ್ದ ಅವರು, ಸಂದರ್ಶನದ ಕೊನೆಯ ವೇಳೆಗೆ, "ನಮ್ಮ ಪತ್ರಿಕೆ ಹಿಂದುಳಿದಿರುವುದು ನಿಜ. ಮಜಾವಾಣಿಯನ್ನು ಹಿಂದುಳಿದ ಪತ್ರಿಕೆ ಎಂದು ಘೋಷಿಸಿ, ೨೭% ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದರು.

"ಇಂಟರ್ನೆಟ್ ಪತ್ರಿಕೆಗೆ ಮೀಸಲಾತಿಯೇ? ಇದು ವಾಸ್ತವದಲ್ಲಿ ಸಾಧ್ಯವೇ?" ಎಂದು ನಾವು ಪ್ರಶ್ನಿಸಿದಾಗ ಕ್ಷೋಭೆಗೆ ಒಳಗಾದ ಅವರು, "ವಾಸ್ತ್ವವ ನಮ್ಮ ಪತ್ರಿಕೆಯ ವಿರುದ್ಧ ಕೆಲಸ ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಬಹು ಸಂಖ್ಯಾತ ಹಿಟಾಸಕ್ತಿಗಳು ವಾಸ್ತವದೊಂದಿಗೆ ಸೇರಿ ನಮ್ಮ ಪತ್ರಿಕೆಯ ವಿರುದ್ಧ ಬಹಿರಂಗವಾಗಿ ಒಳ ಸಂಚು ನಡೆಸುತ್ತಿರುವುದು ವಿಷಾದಕರ ಸಂಗತಿ" ಎಂದರು.

8 Comments:

Blogger ಅಸತ್ಯ ಅನ್ವೇಷಿ said...

ಅಯ್ಯಯ್ಯೋ, ಬೊಗಳೆ-ರಗಳೆ ಬ್ಯುರೋದಲ್ಲಿ ವಿಪರೀತ ಕೋಲಾಹಲ, ಭೂಕಂಪವಾದ ಅನುಭವ ಆಗಿ, ಇಲ್ಲಿ ಬಂದು ನೋಡಿದರೆ, ಇದು ವಾರ್ತಾವಿದೂಷಕರ ಕಿತಾಪತಿ ಅಂತ ತಿಳೀತು.

"ಮಜಾವಾಣಿಯ ಧ್ಯೇಯೋದ್ದೇಶವೇ ಬೇರೆ, ಬೊಗಳೆ ರಗಳೆಯ ಗುರಿಯೇ ಬೇರೆ. ಗಾಂಧಿಯಂತಹ ಮಹಾ ಪುರುಷನನ್ನೇ ಹಾದಿ ತಪ್ಪಿಸಿದ ಸತ್ಯವೆನ್ನುವ ಅಪಾಯಕಾರಿ ಮೌಲ್ಯದ ವಿರುದ್ಧ ಸೆಣೆಸುವುದು ನಮ್ಮ ಪತ್ರಿಕೆಯ ಗುರಿ. ಆದರೆ, ಬೊ.ರ.ದ ಗುರಿ ಅದಲ್ಲ, ಅಸತ್ಯವನ್ನು ಹುಡುಕುವುದು" ಎಂಬ ಮಜಾವಾಣಿ ಸಂಪಾದಕರ ಜಾಣ್ನುಡಿ ತಡಬಡಿಕೆಯಾಗಿರಲಿಲ್ಲ ಎಂದು ಈ ಮೂಲಕ ಖಡಾಖಂಡಿತವಾಗಿ ಸ್ಪಷ್ಟಪಡಿಸಲಾಗುತ್ತಿದೆ.

ಅಸತ್ಯವನ್ನೇ ಅನ್ವೇಷಿಸುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದ ನಮ್ಮ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿಗೆ ದೊರೆತ ಪರಮ ಅಸತ್ಯವಿದು. ಆದುದರಿಂದ ಇನ್ನು ಮುಂದೆ ಇಂಥ ಅಸತ್ಯಗಳನ್ನು ಪ್ರಕಟಿಸಿದಲ್ಲಿ ಮತ್ತು ವಿಶೇಷಾಂಕದ ಬದಲು ವಿಷಾದಾಂಕ ಪ್ರಕಟಿಸಿದಲ್ಲಿಇನ್ನಷ್ಟು ನೆಟ್ಟೊದೆತ (hits) ತಿನ್ನಬೇಕಾದೀತು ಅಂತ ಬಲವಾದ ಆ(ಹಾ)ರೈಕೆ.

ಮಜಾ ಮಾಡಲು ಕೋರಲಾಗಿದೆ.!

June 16, 2006 10:54 AM  
Blogger mavinayanasa said...

ಸೋದರ ಸೋದರಿ ಪತ್ರಿಕೆಗಳ ಏಳಿಗೆಗಾಗಿ ಇಷ್ಟು ದಿನಗಳು ಮಜಾವಾಣಿ ಪ್ರಕಟಿಸಿದೇ ಮಜಾ ಮಾಡುತ್ತಿದ್ದುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಓದುಗರಿಗೆ ಒಂದೆರದು ಪತ್ರಿಕೆಗಳು ಮಾತ್ರ ಸಿಕ್ಕರೆ ಸತ್ಯವನ್ನು ಅಸತ್ಯದಿಂದ ಹೇಗೆ ಬೇರ್ಪಡಿಸುವುದು. ಅದಕ್ಕಾಗಿ ಪ್ರತಿನಿತ್ಯವೂ ಸಂಚಿಕೆ ಹೊರಬರಲೆಂದು ಕೋರುವೆ.

ಮಜಾವಾಣಿಯ ಸಮಸ್ತ ಸಿಬ್ಬಂದಿ ಪ್ರವಾಸಕ್ಕೆ ಹೋಗುವರೆಂದು ಗಾಳಿ ಸುದ್ದಿ ಬಂದಿದೆ. ಅವರುಗಳಿಗೆ ಸುಖಪ್ರಸವ ಕೋರಲು ಬಂದಿರುವೆ. ಒಳ್ಳೆಯದಾಗಲಿ.

June 17, 2006 2:27 AM  
Blogger ವಿಶ್ವನಾಥ ಬಸವನಾಳಮಠ said...

ಮ.ವಾ & ಬೊ.ರ ಸೋದರ-ಸೋದರಿ ಪತ್ರಿಕೆಗಳೇ ಅಥವಾ ಸತ್ಯ-ಅಸತ್ಯ ಅನ್ವೇಷಕ ಪತ್ರಿಕೆಗಳೇ ಇಲ್ಲವೇ ಕೋ(ಜಾ)ಣ -ಕೋ(ಜಾ)ಣೆಯರ ಪತ್ರಿಕೆಗಳೇ-ಸಂಪಾದಕದ್ವಯರೇ ಮೊದಲು ಸ್ಪಷ್ಟೀಕರಿಸಿ!

ಶೇ.27 ಮೀಸಲಾತಿ ನೀಡುವ ವಿಷಯ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ಇರುವಾಗಲೇ ಮಜಾವಾಣಿಯ ವಿಷಾದಾಂಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವುದು "ಹಕ್ಕುಸ್ತುತಿ"ಯಾಗಿದೆ ಎಂದು ಬೀರಪ್ಪ ಮೂಗಿಲಿ ಯವರು ಹೇಳಿದ್ದಾಗಿ "ಹಾಯ್ ಬೊಗಳೂರು ಬ್ಯೂರೊ" ವರದಿ ಮಾಡಿದೆ.

ಕ್ರೀಂ ಲೇಯರ್ ನಲ್ಲಿರುವ ಮಜಾವಾಣಿಗೆ ಮೀಸಲಾತಿ ಬೇಡ ಎಂದು ಸಮಸ್ತ ನೆಟ್ಕನ್ನಿಗರು ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ.

ಸತ್ಯದ ಸುಳಿವಿಲ್ಲದೇ ಅಸತ್ಯವನ್ನು ಅನ್ವೇಷಿಸುತ್ತ ಮ.ವಾ. ಮತ್ತು ಬೊ.ರ. ನಾಗಾಲೋಟದಿಂದ ಓಡಲಿ ಎಂಬುದು ಹಾರೈಕೆ.

-ವಿಶ್ವನಾಥ

June 17, 2006 6:00 AM  
Blogger ಅಸತ್ಯ ಅನ್ವೇಷಿ said...

ವಿಶ್ವನಾಥರೆ,
ನೆಟ್ಟೋದುಗರು ಕಣ್ ಬಿಟ್ಟೋಡದಂತೆ "ಕೋಣೆ ಕೋಣೆಯ"ಲ್ಲೂ ವಿಹರಿಸುತ್ತಿರುವ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಜತೆಗೆ ಬೊಗಳೆ ರಗಳೆ ಕೂಡ ಹೆಗಲು ನೀಡುತ್ತದೆ.

ಮಜಾವಾಣಿಗೆ ಮೀಸಲಾತಿ ಖಂಡಿತಾ ಬೇಡ ಅನ್ನೋ ಮಜಾವಾದಕ್ಕೆ ನೆಟ್ಕಣ್ ಬಿಟ್ಹಾಂಗೆ ನಮ್ಮ ಬ್ಯುರೋ ಕೂಡ ಉಟ್ಟು-ಓರಾಟ ಮಾಡುತ್ತದೆ.

ಮತ್ತೆ ನಿಮ್ಮ ವಿಶ್ವಪುಟದಲ್ಲಿ ಅಸತ್ಯವೇ ಇಲ್ಲವಲ್ಲ ಎಂಬುದೇ ದೊಡ್ಡ ದುರಂತ. ದುರಂತ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

June 17, 2006 7:45 AM  
Blogger V.V. said...

ಸತ್ಯವಿನಾಶಿಗಳೇ,
ಬೊ-ರ ಬೀರೂಲಿ ಕಂಪನ ಆದರೆ, ನಮ್ಮತ್ತ ಬೆರಳು ತೋರಿಸುವುದು ಸರಿಯೇ?
ಮಜಾವಾಣಿಯಲ್ಲಿ ಜಾಣ್ಣುಡಿಯೇ?!
ನೆಟ್ಟೊದೆತದ ಪೆಟ್ಟನ್ನಾದರೂ ಸಹಿಸಬಹುದು, ಆದರೆ ಈ ನಿಂದನೆ-ಅಪವಾದವನ್ನು ಸಹಿಸುವುದಾದರೂ ಎಂತು?!!

ಮಾಯಾವಿನರ್ಸ್-ರೇ
ಆರೋಗ್ಯ, ಪ್ರಸವದ ಬಗೆಗೆ ನೀವಾಡಿರುವ ಮಾತುಗಳು ಸೂಕ್ತವಾಗಿಯೇ ಇವೆ. ಇಲ್ಲಿಯವರೆಗೆ ಪ್ರಸವ ಸುಸೂತ್ರವಾಗಿಯೇ ನಡೆಯುತ್ತಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿಯೇ, ಬ್ಲಾಗಿಸ್ತಾನದ ನಿಮ್ಮ ಆಶ್ರಯತಾಣದಲ್ಲಿ ಸತ್ಯದ ವಿಕಟಟ್ಟಹಾಸ ಕಂಡು ನಾವು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲೇ ಬೇಕಾಯಿತು.

ವಿಶ್ವನಾಥರೇ,
ಬ್ಲಾಗಿಸ್ತಾನದಲ್ಲಿ ಮಕ್ಕಳ ದಾರಿ ತಪ್ಪಿಸಿ ಈಗ ನಮ್ಮ ದಾರಿ ತಪ್ಪಿಸುವುದು ನ್ಯಾಯವೇ?. ಪೋಲೀಸ್ ಕೇಸು ಏನೇ ಇರಲಿ, ನಾವು ಯಾವ ಲೋಟವನ್ನೂ ಕದ್ದಿಲ್ಲ. ಕದ್ದಿದ್ದರೂ, ಅದು ನಾಗಂದು ಅಲ್ಲವೇ ಅಲ್ಲ. ನಾಗಂದು ಆದರೂ, ಅದು ಮ.ವ. ಮತ್ತು ಬೊ.ರ.ಗಳೆರಡೂ ಹಿಡಿಯುವಷ್ಟು ದೊಡ್ಡದೇನಲ್ಲ.

ವಂದನೆಗಳೊಂದಿಗೆ,

ಸಂಪಾದಕ

June 18, 2006 12:31 AM  
Blogger Shiv said...

ನಿಮ್ಮ ನೆಟ್ ಮೀಸಲಾತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ..ಬ್ಲಾಗ್ ಸಾಮಾಜಿಕ ನ್ಯಾಯ ಬೇಕೇ ಬೇಕು..
ಮಜಾವಾಣಿ ಕಡೆಯಿಂದ ಯಾವುದಾದರೂ ಬ್ಲಾಗ್ ಮೇಲೆ ಕಲ್ಲು ಹೊಡೆಯಬೇಕಾ ಹೇಳಿ,ಅದಕ್ಕೆ ಏರ್ಪಾಡು ಮಾಡೋಣ !

June 19, 2006 10:57 PM  
Blogger Fangyaya said...

nike blazers
supra sneakers
fitflops sale clearance
adidas nmd
toms shoes
true religion jeans
gucci handbags
jordan 13
jordan 3 infrared
polo ralph lauren
louis vuitton handbags
burberry outlet
jordan 8s
jordan 6
louis vuitton outlet stores
kobe bryant shoes
coach factory outlet online
adidas shoes
louis vuitton outlet
cheap oakleys
christian louboutin sale
coach outlet
nike air huarache
michael kors
louis vuitton outlet stores
louis vuitton handbags
adidas uk
michael kors outlet clearance
ray ban sunglasses
oakley outlet
coach outlet
ray ban sunglasses outlet
michael kors handbags
air jordan pas cher
rolex watches outlet
adidas originals shoes
coach outlet
michael kors outlet clearance
mont blanc pens
jordans for sale
20167.13chenjinyan

July 13, 2016 4:05 AM  
Blogger xjd7410@gmail.com said...

tory burch handbags
lebron james shoes
christian louboutin
michael kors outlet
oakley sunglasses
fitflops
nike air force 1
michael kors handbags
michael kors handbags
michael kors outlet
coach factory outlet
true religion shorts
juicy couture
michael kors outlet
cheap jordans
kate spade handbags
michael kors outlet clearance
rolex watches
nike outlet
coach outlet
nike uk
coach factory outlet
oakley vault
asics shoes
michael kors outlet online
coach factory outlet
vans shoes outlet
air jordan pas cher
louis vuitton
kobe bryant shoes
michael kors canada
nike free run
hollister clothing
mont blanc pens
fitflops sale clearance
nike air max
nike air max
nike air jordan
nike roshe runs
timberland boots
2016.7.15haungqin

July 14, 2016 9:27 PM  

Post a Comment

Links to this post:

Create a Link

<< Home