ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, May 02, 2006

ಬ್ರೇ-ಕಿಂಗ್ ನ್ಯೂಸ್!


ಆತ್ಮ ಸೌಂದರ್ಯ ಸ್ಪರ್ಧೆ?

ಬೆಂಗಳೂರು, ಮೇ ೨, ೨೦೦೬: ಭಾರತೀಯರು ಆತ್ಮ ಸೌಂದರ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ರೈಲ್ವೇ-ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ, ಆತ್ಮ ಸೌಂದರ್ಯ ವರ್ಧಕ ಪ್ರಸಾಧನಗಳ ತಯಾರಕರಾದ ದೀಪಕ್ ಚೋಪ್ರಾ, ಶ್ರೀ ಶ್ರೀ ರವಿ ಶಂಕರ್ ಮುಂತಾದವರು ವಿಶ್ವ ಆತ್ಮ-ಸೌಂದರ್ಯ ಸ್ಪರ್ಧೆ ಏರ್ಪಡಿಸಲು ಯೋಜಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

"ಡಾ."ವಿಜಯ್ ಮಲ್ಯರವರ ಯು.ಬಿ. ಗುಂಪಿನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ದೇಶಗಳಿಂದ ಆತ್ಮ ಸುಂದರಿಯರು ಭಾಗವಹಿಸಲಿದ್ದು, ವಿಜಯೀ ಮಹಿಳೆಗೆ "ಪರಮಾತ್ಮ ಸುಂದರಿ" ಪ್ರಶಸ್ತಿ ನೀಡಲಾಗುವುದು. ಇದೇ ಪ್ರಥಮ ಬಾರಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ, ಸೌದಿ ಅರೇಬಿಯ, ಇರಾನ್, ಪಾಕಿಸ್ತಾನಗಳಂತಹ ಇಸ್ಲಾಮಿಕ್ ದೇಶಗಳಿಂದಲೂ ಸ್ಪರ್ಧಿಗಳು ಭಾಗವಹಿಸಲಿರುವುದು ಈ ಸ್ಪ್ರರ್ಧೆಯ ವೈಶಿಷ್ಟ್ಯ.

ಆರ್.ಎಸ್.ಎಸ್., ಶಿವ ಸೇನೆ ಖಂಡನೆ: ಇಂತಹ ಸೌಂದರ್ಯ ಸ್ಪರ್ಧೆಗಳು ಭಾರತೀಯ ಸನಾತನ ಸಂಸ್ಕೃತಿಗೆ ಅಪಮಾನ ಎಂದು ಬಣ್ಣಿಸಿರುವ ಹಿಂದೂ ಪರಿವಾರದ ಸಂಸ್ಥೆಗಳು, ಆತ್ಮಗಳಿಗೆ ಈಜುಡುಗೆ ತೊಡಿಸುವುದನ್ನು ತಾವು ತೀವ್ರವಾಗಿ ಪ್ರತಿಭಟಿಸುತ್ತೇವೆ ಎಂದಿವೆ.

ಮುಸ್ಲಿಂ ಲೀಗ್ ಬೆಂಬಲ: ಹಿಂದೂ ಸಂಘಟನೆಗಳು ಆತ್ಮ-ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಲು ನಿರ್ಧರಿಸಿದ್ದರೆ, ಮುಸ್ಲಿಂ ಲೀಗ್ ಈ ಸ್ಪರ್ಧೆಗೆ ತನ್ನ ಬೆಂಬಲ ಸೂಚಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಆತ್ಮ ಸುಂದರಿಯರು ತಮ್ಮ ಆತ್ಮಕ್ಕೆ ಈಜುಡುಗೆ ತೊಡಿಸಿದ ನಂತರ ಅದರ ಮೇಲೆ ಬುರ್ಖಾ ಧರಿಸಬೇಕೆಂದು ಅದು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

5 Comments:

Anonymous ಶ್ರೀವತ್ಸ ಜೋಶಿ said...

ವಿಜಯ್ ಮಲ್ಯ ಪ್ರಾಯೋಜಕತ್ವ ಎಂದ ಮೇಲೆ, ಸ್ಪರ್ಧಿಗಳೂ, ನಿರ್ಣಾಯಕರೂ "ಪರಮಾತ್ಮ ಆಡಿಸಿದಂತೆ ಆಡುವೆ ನಾನು..." ಎಂಬ ಹಳೇಚಿತ್ರಗೀತೆ (ಕುಡುಕ ಹೇಳುವುದು) ಹಾಡಿಕೊಂಡೇ ಇರುತ್ತಾರೊ ಏನೊ!

May 03, 2006 2:56 PM  
Blogger V.V. said...

ಜೋಷಿಯವರೇ,

ನಮಗೆ ಇತ್ತೀಚೆಗೆ ತಾನೆ ಬಂದ ಸುದ್ದಿಯಂತೆ, ಆತ್ಮ-ಸೌಂದರ್ಯ ಸ್ಪರ್ಧೆ ಪ್ರಾರಂಭವಾಗುವುದೇ "ಪರಮಾತ್ಮ ಆಡಿಸಿದಂತೆ ಆಡುವೆ ನಾನು" ಎಂಬ ಪ್ರಾರ್ಥನೆಯೊಂದಿಗೆ!

ವಂದನೆಗಳೊಂದಿಗೆ,
ಸಂಪಾದಕ

May 03, 2006 3:58 PM  
Anonymous ಮುರಲಿ said...

ಈ ಸುದ್ದಿ ಬ೦ದ ಬೆನ್ನಲ್ಲೇ ಈ ಸ್ಪರ್ಧೆಯ ಪ್ರಾಯೋಜಕತ್ವದಲ್ಲಿ ಪಾಲ್ಗೊಳ್ಳಲು ಅಮಿತಾಭ್ ಬಚ್ಚನ್ ಅವರ ಎ.ಬಿ.ಸಿ.ಎಲ್. ಸ೦ಸ್ಥೆ ಉತ್ಸುಕವಾಗಿರುವುದು ತಿಳಿದು ಬ೦ದಿದೆ. ಈ ಬಗ್ಗೆ ಸ೦ಸ್ಥೆಯ ಪ್ರಕಟಣೆ ಸದ್ಯದಲ್ಲೇ ಹೊರಬರಲಿದೆಯೆ೦ದು ಅನಧಿಕ್ರುತ ಮೂಲಗಳು ತಿಳಿಸಿವೆ. ದೀಪಕ್ ಚೋಪ್ರಾ ಹಾಗೂ ವಿಜಯ ಮಲ್ಯರ೦ಥಾ ಫ್ಯಾಷನ್ ಪ್ರಪ೦ಚದ ದಿಗ್ಗಜರೊ೦ದಿಗೆ ಕೆಲಸ ಮಾಡುವ ಮೂಲಕ ದಿವಾಳಿ ಎದ್ದಿರುವ ಎ.ಬಿ.ಸಿ.ಎಲ್. ಸ೦ಸ್ಥೆ ಪುನಶ್ಚೇತನಗೊಳ್ಳುವ ಬಗ್ಗೆ ಬಚ್ಚನ್ ಕುಟು೦ಬ ಪೂರ್ಣ ವಿಶ್ವಾಸ ಹೊ೦ದಿರುವುದಾಗಿ ಕುಟು೦ಬದ ನಿಕಟವರ್ತಿಗಳು ತಿಳಿಸಿದ್ದಾರೆ.

May 04, 2006 2:43 AM  
Blogger ಅಸತ್ಯ ಅನ್ವೇಷಿ said...

ವೀ-ವಿ-ದೂಷಕರೆ,
ಆತ್ಮ ಇಲ್ಲದವರು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದೆಂತು, ತಿಳಿಸುವಿರಾ?
ಅಥವಾ ಇದರಲ್ಲಿ ಭಾಗವಹಿಸುವುದಕ್ಕೆ ಪರಮಾತ್ಮನ "ಆವಾಹನೆ" ಆಗಿರಬೇಕಾದ್ದು ಕಡ್ಡಾಯವೆ?

May 04, 2006 7:40 AM  
Anonymous Prakash Shetty Ulepady said...

Spardheyalli bhagavahisalu nanagondu avakasha sigabahude...?
eshtu feesu...

arhategaagi aathma hatye maadidavaroo arji guraayisabahude.. athava sahaja saavu yaaa koleyinda mRutapaTTavaru mAtra BAgavahisabahudE?

dayaviTTu saMpUrNa mAhitiyoMdige bogaLuvirA....

itI jIvaMta vyakti

June 23, 2006 3:40 AM  

Post a Comment

Links to this post:

Create a Link

<< Home