ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, May 05, 2006

ಮಜಾವಾಣಿಗೆ ರಜಾ!


ಪ್ರಿಯ ಓದುಗರೇ,

ಮಜಾವಾಣಿ ಪತ್ರಿಕೆಯ ಕಾರ್ಯಾಲಯವನ್ನು ಹದಿನಾರು ವರ್ಷಗಳ ನಂತರ ಅಮೆರಿಕದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕಾರ್ಯ ಚಟುವಟಿಕೆಗಳು ನಾಳೆಯಿಂದ ಪ್ರಾರಂಭವಾಗಲಿವೆ. ಹೀಗಾಗಿ ನಮ್ಮ ಪತ್ರಿಕೆಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಬೇಕಾದಂತ ಅನಿವಾರ್ಯತೆ ಎದುರಾಗಿದೆ.

ವಿಶ್ವಾದ್ಯಂತ ಇರುವ ನಮ್ಮ ಮೂರುವರೆ ಮಂದಿ ಓದುಗರು, ಇಲ್ಲಿಯವರೆಗೆ ನಮಗೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಅವರಿಗೆ ಚಿರ ಋಣಿ. ಈ ಪ್ರೋತ್ಸಾಹ ಮುಂದೆಯೂ ಹೀಗೆಯೆ ಮುಂದುವರೆಸಬೇಕೆಂದು ಪ್ರಾರ್ಥಿಸುತ್ತೇನೆ.

ಈ ಸಂದರ್ಭದಲ್ಲಿ ರಾ.ಶಿ.ಯವರು ಕೊರವಂಜಿ ಪತ್ರಿಕೆಯನ್ನು ಮುಚ್ಚುವಾಗ ಹೇಳಿದ್ದರೆನ್ನಲಾದ ಮಾತುಗಳು ನೆನಪಿಗೆ ಬರುತ್ತಿವೆ: "ಹೋಗ್‍ಬರ್ತೀನಿ ಅಂದ್ಯೇನೆ ಕೊರವಂಜೀ..? ನೀನಿದ್ದಿದ್ದಿದ್ದೇ ಗೊತ್ತಾಗ್ಲಿಲ್ವಲ್ಲೇ!" ಈ ಮಾತುಗಳು ಕೊರವಂಜಿಗಿಂತ ಮಜಾವಾಣಿಗೆ ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ.

ಕಳಚಿಕೊಳ್ಳುವ ಮುನ್ನ ಹೇಳಲೇ ಬೇಕಾದ ಮಾತು: ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ "ಹರಿಣಿ"ಯವರ ಚಿತ್ರಗಳು ಈಗ ಇಂಟರ್‍ನೆಟ್‍ನಲ್ಲಿ ಲಭ್ಯ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ವಂದನೆಗಳೊಂದಿಗೆ,

ಶೇಷಾದ್ರಿ ("ವಿ.ವಿ.")

Labels:

6 Comments:

Blogger Sarathy said...

ಬೆಂಗಳೂರಿನಲ್ಲಿ ಇನ್ ಫ್ರಾಸ್ಟ್ರಕ್ಚರ್ ಸರಿ ಇಲ್ಲ ಎಂದು ಪತ್ರಿಕೆಯನ್ನೇ ಮುಚ್ಚಿಬಿಡಬೇಡಿ. ನಾನು ಕನ್ನಡದಲ್ಲಿ ಬ್ಲಾಗ್ ರಚಿಸಲು ಸ್ಫೂರ್ತಿ ನೀಡಿದವರಲ್ಲಿ ನಿಮ್ಮ ಮಜಾವಾಣಿ ಪ್ರಮುಖವಾದದ್ದು.

May 05, 2006 11:04 AM  
Anonymous sritri said...

ಹೋಗಿ ಬನ್ನಿ,ನಿಮಗೆ ಶುಭಪ್ರಯಾಣ!! ತಾಯ್ನಾಡಿಗೆ ಹಿಂತಿರುಗುತ್ತಿರುವ ನಿಮ್ಮ ಭಾಗ್ಯ ದೊಡ್ಡದು. ನಿಮ್ಮನ್ನು ನೋಡಿ ನನ್ನಂತಹ ಎಷ್ಟೋ ಜನರ "ಅಂತರಂಗ"ದ ಕೊರಗು ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ಮಜಾವಾಣಿಯನ್ನು ಮಿಸ್ ಮಾಡುತ್ತೇವೆ. ಖಂಡಿತಾ ಮುಂದುವರೆಸುತ್ತೀರೆಂಬ ಭರವಸೆಯಿದೆ.

May 05, 2006 11:32 AM  
Blogger Satish said...

ಭೇಷಾತ್ ಬಿಡ್ರಿ, ಮಜಾವಾಣಿ ಈ ಎಪಿಸೋಡ್‌ನ್ಯಾಗೆ ಅಂಥಾದ್ದೇನೈತಿ ಅಂತ ನೋಡಿದ್ರ ಈ ನಮುನಿ ಶಾಕ್ ಕೊಡ್‌ತೀರಲ್‌ರೀ?

ಮಂದಿ ಅಂದಂಗs ನಿಮ್ಮ ಬ್ಲಾಗಾ ಛೋಲೋ ಬರ್‍ತಿತ್ ರೀ ಯಪ್ಪಾ, ನಿಲ್ಲಿಸ್‌ಬ್ಯಾಡ್ರೀ, ಹಂಗೂ-ಹಿಂಗೂ ಪುರುಸೊತ್ ಮ್ಯಾಡಿಕ್ಯಂಡ್ ಖುದ್ದ್ ನೀವಾ ಬರೀರಿ.

ಗೊತ್ತದನೋ ಇಲ್ಲೋ, ಮಂದಿ ಆಗ್ಲೇ ಅನ್ಲಿಕ್ ಹತ್ಯಾರ 'ಅಂತರಂಗ'ದ್ ಕೊರಗು ಇನ್ನೂ ಹೆಚ್ಚಾಕತೀ ಅಂತ?

ನೋಡ್ರಿ ಮತ್ತ, ಹೇಳೇನಿ, ಹೇಳ್ಳಿಲ್ಲಾ ಅನಬ್ಯಾಡ್ರಿ, ಕೊನಿಗಿ.

ನಿಮ್ಮವ

May 05, 2006 11:03 PM  
Blogger ವಿಶ್ವನಾಥ ಬಸವನಾಳಮಠ said...

ನಮ್ಮೊವರು ಬರೊಬ್ಬರಿ ಹೇಳ್ಯಾರ ನೋಡ್ರಿ, ಸಂಜಯ ಸಾಹೇಬ್ರ. ಮಜಾವಾಣಿ ಆಫೀಸ್ ಟ್ರಕ್ ನ್ಯಾಗ ಬೆಂಗ್ಳೂರಿಗೆ ಬರಾಕ್ ಹತ್ತಿದ್ ನೋಡಿ ಭಾಳ ಖುಷಿ ಆತ್ರೆಪಾ.

ಮಜಾವಾಣಿ ಇಲ್ಲಿಗ್ ಬಂದ್ ಮ್ಯಾಲೂ ಭಾಳ ಮಜಾ ಕೊಡೊ ಹಂಗ್ ಬರೀರಿ ಮತ್ತ.

ಬೆಂಗ್ಳೂರಿಗೆ ಬಂದ್ ಕೂಡ್ಲೇ ಲಗೂನ ಚಾಲೂ ಮಾಡ್ರಿ ನಿಮ್ಮ ಬರವಣಿಗೆ ಫ್ಯಾಕ್ಟ್ರಿ!

ನಮಸ್ಕಾರ

ವಿಶ್ವನಾಥ

May 06, 2006 7:29 AM  
Blogger ಅಸತ್ಯ ಅನ್ವೇಷಿ said...

ಬೆಂಗಳೂರಿನಲ್ಲಿ ಈಗಾಗಲೇ ಠಿಕಾಣಿ ಹೂಡಿರುವ ಬಹುರಾಷ್ಟ್ರೀಯ ಕಂಪನಿ-ಸಾಫ್ಟ್ ವೇರ್ ಕಂಪನಿಗಳ ಮಧ್ಯೆ ತಳವೂರಲು ಕಚೇರಿ ಸಮೇತ ಲಾರಿಯಲ್ಲಿ ಬರುತ್ತಿರುವ ವಿವಿ-ದೂಷಕರಿಗೆ ಸ್ವಾಗತ.

ಬೆಂಗಳೂರಿನ ಜನಸಂಖ್ಯೆ ಮೂರುವರೆಯಷ್ಟು ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ....
-ಅಸತ್ಯಾನ್ವೇಷಿ

May 08, 2006 6:11 AM  
Blogger Sathish-Hirehalli said...

ಅಲ್ರೀ ಈ ಐ.ಟಿ., ಬಿ.ಟಿ. ಜನರಿಂದ ನಮ್ಮಂತಹ ಹಳ್ಳಿ ಜನ ಬೆಂಗಳೂರಿನಲ್ಲಿ ಜೀವನ ಮಾಡೋದೇ ಕಷ್ಟ ಆಗಿದೆ, ಎಲ್ಲಾ ಬೆಲೆಗಳೂ ಮೇಲೇರಿವೆ. ಈ ಸಾಫ಼್ಟ್ ವೇರ್ ಕಂಪನಿಗಳು ಬೆಂಗಳೂರ್ ಬಿಟ್ಟು ಯಾವಾಗ ಹೊರಗೆ ಹೋಗ್ತಾವೋ ಅಂತ ನಾವು ಅಂದ್ಕಂಡಿರ್ಬೇಕಾದ್ರೆ ನೀವು ಇಲ್ಲಿಗೇ ವಕ್ಕರಿಸಿಕಂಡ್ತೀರಾ? ಹೋಗ್ಲಿ ಬಿಡಿ ನಾವು ಕನ್ನಡಿಗರು ಅಲ್ವೇ ನಿಮಗೆ ಸುಸ್ವಾಗತ, ಬಂದ್ಮೇಲೆ ಮಜಾವಾಣಿಯನ್ನು ಇನ್ನೂ ಚೆನ್ನಾಗಿ ಮುಂದ್ವರ್ಸಿ...

May 10, 2006 10:28 AM  

Post a Comment

Links to this post:

Create a Link

<< Home