ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, April 05, 2006

ವಿ-ದರ್ಪಣ್: ಭಾವನೆ ಹಂಚಿಕೊಳ್ಳುವ ಸೇವೆ

ಶಾಸಕರ ಭವನದಲ್ಲಿ ಕೃಷ್ಣ ಲೀಲೆ; ಸ್ತ್ರೀಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಚಾಲನೆ!

ಬೆಂಗಳೂರು, ಏಪ್ರಿಲ್ 5, 2006: ಶಾಸಕರ ಭವನದಲ್ಲಿ ಸ್ತ್ರೀಯರೊಂದಿಗೆ ವಿಡಿಯೋ ಕಾನ್ಫ್ರರೆನ್ಸ್ ನಡೆಸುವ ವಿನೂತನ ಸೇವೆಯೊಂದಕ್ಕೆ ವಿಧಾನಸಭಾಧ್ಯಕ್ಷ ಕೃಷ್ಣರವರು ಚಾಲನೆ ನೀಡಿರುವ ಸಂಗತಿ ಈ ಸಂಜೆ ಪತ್ರಿಕೆಯಲ್ಲಿ ವರದಿಯಾಗಿದೆ.

ಆ ವರದಿಯಂತೆ ಶಾಸಕರು ನಿಮಿಷಕ್ಕೆ ಕೇವಲ ೩ ರೂ ದರದಲ್ಲಿ ಸ್ತ್ರೀಯರ ಚಿತ್ರವನ್ನು ನೋಡುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ವಿ-ದರ್ಪಣ್ ಎಂಬ ಈ ಸೇವೆ ಮನೆ ಬಾಗಿಲಿಗೇ ಲಭ್ಯವಾಗಲಿದ್ದು, ಮುಖ್ಯಮಂತ್ರಿಗಳು ಕುಳಿತಲ್ಲಿಂದಲೇ ತಮ್ಮವರ ಯೋಗಕ್ಷೇಮವನ್ನು ಕಣ್ಣಾರೆ ಕಂಡುಕೊಳ್ಳಬಹುದಾಗಿದೆ.

ಈ ಸಂಜೆ ಪತ್ರಿಕೆಯ ವರದಿ ಇಲ್ಲಿದೆ:

Labels:

1 Comments:

Blogger P Kalyan said...

ನೀವು ಅಸಾಧ್ಯ ಇದ್ದೀರಪ್ಪಾ... ಒಂದು ಸಣ್ಣ ತಪ್ಪು ಎನೆಲ್ಲಾ ಅಪಾ(ರಾ)ರ್ಥಗಳಿಗೆ ದಾರಿಮಾಡಿಕೊಡುತ್ತದೆ ಎಂದು ಚೆನ್ನಾಗಿ ತೋರಿಸಿದ್ದೀರಿ. ಪತ್ರಿಕೆಯವರೇನಾದರು ಇದನ್ನು ನೋಡಿದರೆ ತಲೆ ಚಚ್ಚಿಕೊಳ್ಳುವುದು ಗ್ಯಾರಂಟಿ.
ಕೆಲವು ದಿನಗಳಿಂದ ಗಿರೀಶ್ ಕಾಸರವಳ್ಳಿ ಮತ್ತು ಇಂದ್ರಜಿತ್ ಲಂಕೇಶ್ ನಡುವೆ ಸಖತ್ ಗಲಾಟೆ ನಡೀತಿದೆ (ಇವತ್ತಿನ ಸಿನಿ ವಿಜಯ). ಇದರಲ್ಲೇನಾದರು 'ಮಜಾ' ಸಿಗುತ್ತಾ ನೋಡ್ರೀ....

April 07, 2006 9:26 AM  

Post a Comment

Links to this post:

Create a Link

<< Home