ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, March 30, 2006

ಡೈವೋರ್ಸಿಲ್ - ಅನ್ಯೋನ್ಯತೆಯ ಒಳಗುಟ್ಟು

ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಲದ ವ್ಯಕ್ತಿಯೊಬ್ಬ ನಿದ್ದೆಯಲ್ಲಿ ಆಕಸ್ಮಿಕವಾಗಿ ತನ್ನ ಪತ್ನಿಗೆ ಸೋಡಾಚೀಟಿ ನೀಡಿದ್ದು ವರದಿಯಾಗಿತ್ತು.

ಈ ಪಿಡುಗಿನಿಂದ ಭಯಭೀತರಾದ ಎಷ್ಟೋ ಮಂದಿ ದಂಪತಿಗಳು ಒಟ್ಟಿಗೇ ಮಲಗುವುದನ್ನೇ ಬಿಟ್ಟಿರುವ ಸುದ್ದಿಗಳೂ ಬಂದಿವೆ. ನಿದ್ದೆಯಲ್ಲಿ "ತಲಾಖ್" ಹೇಳಿ ಬಿಡಬಹುದೆಂಬ ಭಯದಿಂದ, ಎಷ್ಟೋ ಮಂದಿ ಪತಿಗಳು ನಿದ್ರಿಸುವುದನ್ನೇ ಬಿಟ್ಟಿರುವುದಾಗಿ ಸಹ ವರದಿಯಾಗಿದೆ.

ಆದರೆ ಈಗ ಈ ಭಯಂಕರ ಪಿಡುಗಿಗೆ ಪರಿಹಾರ ಸಿದ್ಧವಾಗಿದೆ.

ಆಕಸ್ಮಿಕ ವಿಚ್ಛೇದನದ ಭಯದಿಂದ ಕಂಗೆಟ್ಟಿದ್ದೀರೇ? ನಿದ್ರೆ ಮಾಡಲಾಗುತ್ತಿಲ್ಲವೇ? ಪತಿ-ಪತ್ನಿ ಒಟ್ಟಿಗೆ ಮಲಗಲಾಗುತ್ತಿಲ್ಲವೇ?

ಚಿಂತಿಸಬೇಡಿ. ಪ್ರತಿದಿನ ಮಲಗುವ ಮುನ್ನ ೨ ಡೈವೋರ್ಸಿಲ್ ಬಳಸಿ.

ಡೈವೋರ್ಸಿಲ್ ಬಳಸಿರಿ. ಮತ್ತೆ ಒಂದಾಗಿರಿ.

ಡೈವೋರ್ಸಿಲ್, ಅನ್ಯೋನ್ಯ ದಂಪತಿಗಳ ಅನ್ಯೋನ್ಯತೆಯ ಒಳಗುಟ್ಟು!
Divorcil prevents accidental divorces during sleep. Must be used as directed.

Directions: Take 2 divorcil capsules before bed. Insert one each into each ear. Please note that at this time Divorcil is approved for usage by married women only. Others may use at their own risk.

Labels:

3 Comments:

Anonymous Anonymous said...

ನೀವು ಕಿವಿಗೆ ತುರುಕಿಸುವ ಮಾತ್ರೆಯನ್ನು ಕಂಡುಹಿಡಿದಿರುವುದು ಒಳ್ಲೇದು. ನಿಮ್ಮ ಸಂಶೋಧನೆಯನ್ನು ಹೀಗೆ ಮುಂದುವರಿಸಿ ಕಣ್ಣಿಗೆ ಕಟ್ಟಿಕೊಳ್ಳುವ ಪಟ್ಟಿಯನ್ನೂ ಕಂಡುಹಿಡಿಯಬೇಕಾಗಿ ವಿನಂತಿ. ಅದನ್ನು ನಮ್ಮ ಕಿಡಿಗೇಡಿ ಪತ್ರಿಕೋದ್ಯೋಗಿಗಳಿಗೆ ನೀಡಬಹುದು.

-ಪಬ್

March 31, 2006 1:31 AM  
Blogger mavinayanasa said...

ನನ್ನ ಮರಾಠಿ ಸ್ನೇಹಿತನಿಗೆ ಕಾಡುತ್ತಿರುವ ಪ್ರಶ್ನೆ:
೧. ಈ ಮಾತ್ರೆಯನ್ನು ಮಾರನೆಯ ದಿನ ಮತ್ತೆ ಉಪಯೋಗಿಸಬಹುದೇ? ಅಥವಾ ಮಾರನೆಯ ಬೆಳಗ್ಗೆ ತೆಗೆದು ಬಿಸಾಕಬೇಕೇ?

೨. ಪುರುಷರಿಗೆ ಬೇರೆ ಮಾತ್ರೆ ಇದೆಯೇ? ನೊಂದ ಪತಿಗಳ ಸಂಘದ ವತಿಯಿಂದ ಬಂದಿರುವ ಪ್ರಶ್ನೆ.

೩. ಪತ್ನಿಯರು ಉಪಯೋಗಿಸುವುದರ ಬಗ್ಗೆ ಪತಿಗೆ ತಿಳಿಯಬಾರದೇ?

March 31, 2006 3:06 AM  
Blogger V.V. said...

ಮಾನ್ಯ "ಪಬ್" ರವರೆ,

ಅನ್ಯೋನ್ಯ ದಂಪತಿಗಳ ಅನ್ಯೋನ್ಯತೆಯ ಒಳಗುಟ್ಟಾದ ಡೈವೋರ್ಸಿಲ್ ಮಾತ್ರೆಗಳನ್ನು "ಕಿವಿಗೆ ತುರುಕಿಸುವ ಮಾತ್ರೆ" ಎಂದು ಕಡೆಗಣಿಸಿರುವುದು ವಿಷಾದನೀಯ.

ನ್ಯಾಯ ದೇವತೆ ಗಾಂಧಾರಿಯಂತೆ ಪತ್ರಿಕೋದ್ಯೋಗಿಗಳೂ ಕಣ್ಣಿಗೆ ಪಟ್ಟಿಕೊಳ್ಳುವುದು ಒಳಿತೆಂಬ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಬೆಂಬಲವಿದೆ. ನ್ಯಾಯಾಲಯದಲ್ಲಿ ತೀರ್ಪನ್ನು ನೀಡುವ ಮುನ್ನವೇ ಪತ್ರಿಕೆಗಳು ತೀರ್ಪನ್ನು ನೀಡುತ್ತಿರುವುದರಿಂದ ನಿಮ್ಮ ಅನಿಸಿಕೆ ಅತಿ ಸೂಕ್ತವೂ ಸಹ.

ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಪತ್ರಕರ್ತರಿಂದ ಅರ್ಧ ಮೀಸೆ ಶೇವ್ ಮಾಡಿಸಿಕೊಳ್ಳಲು ಯೆಡಿಯೂರಪ್ಪನವರು ಸಿದ್ಧವಿದ್ದಾರೆಯೇ?

ವಂದನೆಗಳೊಂದಿಗೆ,

ಸಂಪಾದಕ.

March 31, 2006 10:16 AM  

Post a Comment

Links to this post:

Create a Link

<< Home