ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, March 20, 2006

'ಬೆಂಗಳೂರು ತೀರ್ಥಹಳ್ಳಿಯಾಗಲಿ" - ಯು.ಆರ್.ಎ.

ಬ್ರೇಕಿಂಗ್ ನ್ಯೂಸ್!
'ಬೆಂಗಳೂರು ತೀರ್ಥಹಳ್ಳಿಯಾಗಲಿ" - ಯು.ಆರ್.ಎ.

ಕನ್ನಡಕ್ಕೆ 'TKANNADA' ಎಂಬುದಾಗಿ ನಾಮಕರಣ ಮಾಡಬೇಕೆಂಬ ಒತ್ತಾಯವನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ಖ್ಯಾತ ಸಾಹಿತಿ, ವಿಚಾರವಾದಿ, ಜ್ಞಾನಪೀಠ ಪ್ರಶಸ್ತಿ ವಿಜೇತ ರಾಜಕಾರಣಿ ಯು.ಆರ್.ಅನಂತಮೂರ್ತಿಯವರು, ಬೆಂಗಳೂರಿಗೆ 'T' ಅಕ್ಷರದಿಂದ ಮೊದಲಾಗುವ 'ತೀರ್ಥಹಳ್ಳಿ' ಎಂದು ಹೆಸರಿಡುವಂತೆ ಒತ್ತಾಯ ಮಾಡಿರುವ ವಿಚಾರ ಹೊರ ಬಂದಿದೆ.

ನಮ್ಮ ಪತ್ರಿಕೆಯ ವೈಶಿಷ್ಟ್ಯ ಇರುವುದೇ ನಮ್ಮ ಪತ್ರಿಕೆಯ ವಿಶೇಷ ವರದಿಗಾರರಲ್ಲಿ. ಹಿಂದೊಮ್ಮೆ 'ಶಾಸ್ತ್ರಿಯ ಭಾಷೆ' ವಿಚಾರದಲ್ಲಿ ನಮ್ಮ ಪತ್ರಿಕೆ ತಪ್ಪು ವರದಿಮಾಡಿದ್ದಾಗ ವಿಶ್ವ ಕನ್ನಡ ಕುಲ ಪುಂಗವ ಹನುಮನ ಕೃಪಾ ಕಟಾಕ್ಷ ನಮ್ಮ ಪತ್ರಿಕೆಯ ಮೇಲೆ ಬಿದ್ದು ನಮ್ಮನ್ನು ಸರಿದಾರಿಗೆ ಕೊಂಡೊಯ್ಯಲು 'ವಾಯುಪುತ್ರ'ನೆಂಬ ವಿಶೇಷ ವರದಿಗಾರರನನ್ನು ನಮ್ಮೆಡೆಗೆ ಕಳುಹಿಸಿದ್ದು ನೆನಪಿರಬಹುದು. (ನೆನಪಿಲ್ಲದಿದ್ದವರು ಇಲ್ಲಿ ಓದಬಹುದು)

ಹನುಮನಿರುವೆಡೆ ಶ್ರೀರಾಮನಿಲ್ಲದಿರುವುದು ಸಾಧ್ಯವೇ?

ಕನ್ನಡ ಮರುನಾಮಕರಣ ವಿಚಾರದಲ್ಲಿ ಒಂದು ಅತಿ ಮುಖ್ಯ ವಿಚಾರವನ್ನೇ ನಮ್ಮ ಪತ್ರಿಕೆ ವರದಿಮಾಡದೆ ಬಿಟ್ಟಿರುವುದನ್ನು ಇಂದು ಸಾಕ್ಷಾತ್ ಶ್ರೀರಾಮನೇ ನಮ್ಮ ಪತ್ರಿಕೆಯ ಗಮನಕ್ಕೆ ತಂದಿದ್ದಾನೆ.

ಕನ್ನಡವೇ ನಿತ್ಯ ಎನ್ನುವ ಶ್ರೀರಾಮ ನಮ್ಮ ಪತ್ರಿಕೆಗೆ ವಿಶೇಷ ಮತ್ತು ಪ್ರತ್ಯೇಕವಾಗಿ ವರದಿ (Special and Exclusive!) ಮಾಡಿರುವಂತೆ, ಅನಂತಮೂರ್ತಿಯವರ ಈ ಒತ್ತಾಯ ಅತ್ಯಂತ ಸೂಕ್ತವಾಗಿದೆ.

ಬೀದಿ ಬೀದಿಗಳಲ್ಲೂ ಪಬ್ ಮತ್ತು ಬಾರುಗಳಿರುವ ಬೆಂಗಳೂರಿಗೆ 'ತೀರ್ಥ ನಗರಿ' ಎಂಬ ಹೆಸರು ಸೂಕ್ತವೆನಿಸಬಹುದಾದರೂ, ಅದು ರಾಜಕೀಯವಾಗಿ ಅಷ್ಟು ಸಮಂಜಸವೆನಿಸುವುದಿಲ್ಲ. ಡಾಲರ್ ಕಾಲನಿಯ ಸೈಟಿಗೆ ಎಷ್ಟು ಬೇಕೋ ಅಷ್ಟೇ ರಾಜಕಾರಣಮಾಡುತ್ತಿದ್ದ ಅನಂತಮೂರ್ತಿಗಳು ಇಂದು ರಾಜ್ಯಸಭೆ ಸೀಟಿಗೆ ಬೇಕಾದಷ್ಟು ರಾಜಕಾರಣ ಮಾಡುವ ಅನಿವಾರ್ಯತೆ ಇರುವುದರಿಂದ ಹಳ್ಳಿಯ ಜನರನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ರಾಜಕೀಯ ವಿಶ್ಲೇಷಕರ ಪ್ರಕಾರ 'ತೀರ್ಥ ನಗರಿ'ಯ ಬದಲು 'ತೀರ್ಥಹಳ್ಳಿ' ಎಂಬ ಹೆಸರಿನ ಕಡೆಗೆ ಅವರು ವಾಲಿರುವುದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ.

ನಾರಾಯಣ ಮೂರ್ತಿ ಬೆಂಬಲ: ಹಿಂದೊಮ್ಮೆ ದೇವೇಗೌಡರು 'ತಿಪ್ಪಾರಳ್ಳಿ ನಾಡಗೀತೆಯಾಗಲಿ' ಎಂದಿದ್ದಾಗ ಅದನ್ನು ವಿರೋಧಿಸಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿಗಳು, ಅನಂತ ಮೂರ್ತಿಯವರ 'ತೀರ್ಥಹಳ್ಳಿ' ಒತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ನಮ್ಮ ಪತ್ರಿಕೆಯ ವರದಿಗಾರನೊಂದಿಗೆ ಮಾತನಾಡಿದ ಅವರು "ಬೆಂಗಳೂರಿಗೆ 'ತೀರ್ಥಹಳ್ಳಿ' ಎಂದು ನಾಮಕರಣ ಮಾಡೋದು ಒಳ್ಳೆಯದೇ. ಈಗ ನಮ್ಮ ಕಂಪನಿ ನಾಗರಿಕರ ಪರ ಅನ್ನೋ ಅಭಿಪ್ರಾಯ ಇದೆ. 'ತೀರ್ಥಹಳ್ಳಿ' ಅಂತ ಹೆಸರಿಟ್ಟ ತಕ್ಷಣದಿಂದ ನಾವು ಹಳ್ಳಿ ಗಮಾರರ ಪರ ಕೂಡ ಅಂತ ಎಲ್ಲರಿಗೂ ಗೊತ್ತಗುತ್ತೆ. ಹಳ್ಳಿಯ ಜನರಿಗೆ ಬೆಂಬಲ ತೋರಿಸಕ್ಕೆ, ಇನ್ನೂ ೧೫೦೦ ಎಕರೆ ಜಾಗ ಖರೀದಿಸುತ್ತೇವೆ" ಎಂದರು. ಮುಂದುವರೆಯುತ್ತಾ "ತೀರ್ಥಹಳ್ಳಿ ಅನ್ನೋ ಊರು ಈಗಾಗಲೇ ಇರೋದ್ರಿಂದ ನಮ್ಮ ವಿದೇಶಿ ಗ್ರಾಹಕರಿಗೆ ಕನ್‌ಫ್ಯೂಸ್ ಆಗೋ ಸಾಧ್ಯತೆ ಇದ್ದು ಹೊಸ ತೀರ್ಥಹಳ್ಳಿಗೆ 'ತೀರ್ಥಹಳ್ಳಿ v2.೦' ಅಂತ ಕರೆಯುವುದು ಸೂಕ್ತ" ಎಂದರು.

Labels:

3 Comments:

Anonymous Anonymous said...

ee puTagaLannu Odalu aaguttilla. ella ?????? kaaNuttade. Enu maaDuvudu? font bagge thiLisi. unicode utf-8 iddaroo akSharagaLu mooDuttilla.
chandru_099@yahoo.com

March 21, 2006 6:16 AM  
Anonymous Anonymous said...

ಬೆಂಗಳೂರನ್ನು ನಿಜವಾಗಿ ತೀರ್ಥಹಳ್ಳಿ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸರ್ಕಾರ "ಪವರ್-ಕಟ್"ನ್ನು ತತ್-ಕ್ಷಣದಿಂದ ಬರುವಂತೆ ಜಾರಿಮಾಡಬೇಕು. ಬೆಳಗಿನ ಹೊತ್ತು ಕೇವಲ ಎರಡು ಘಂಟೆ ವಿತರಣೆ ಹಾಗು ರಾತ್ರೆ ಸಂಪೂರ್ಣ ಕಡಿತ ಎಂಬ ಯೋಜನೆಯು ಯು.ಆರ್.ಎ. ಹಾಗು ನಾ.ಮೂರ್ತಿ ಅವರನ್ನು ಒಳಗೊಂಡಂತೆ ಸಮಸ್ತ ನವ-ತೀರ್ಥಹಳ್ಳಿಯ ಕನ್ನಡೋತ್ತಮರ ಮನ ಗೆಲ್ಲುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ.ನಿರೀಕ್ಷಣೆಗಳೊಂದಿಗೆ,

March 21, 2006 7:06 AM  
Anonymous Anonymous said...

ನಮ್ಮ ಎಕ್ಸ್ಕ್ಲೂಸಿವ್ ಸಂದರ್ಶಿನಿಯಲ್ಲಿ ಮಾತನಾಡಿದ ನಾಡಿಗ್ (ಎಚ್.ಪಿ ಅಲ್ಲ, ಸುಮತೀಂದ್ರ) ಮತ್ತೆ ಜಿಕೆಜಿ ನಮ್ಮನ್ನು ಈ ಪ್ರಶ್ನೆ ಕೇಳಿದ್ದರು:
"ಯು ಆರ್ ಎ ಬೆಂಗಳೂರಿನ ವಿಷಯದಲ್ಲಿ ಹೇಳಿದ್ದು ನಿಮಗೆ ನೆನಪಿರಬಹುದು: The intention is that even a foreigner who visits the city will use a Kannada-sounding word by calling the city Bengalooru. The 'u' vowel distinguishes our language, just like the 'o' in Kolkata is distinct to Bengali. By adding the 'u,' even words like chair-u and table-u become Kannada, ಅಂದರೆ ತಮ್ಮ ಹೆಸರಿನಲ್ಲಿರುವ 'ಯು'ವನ್ನು ಅಂತ್ಯಕ್ಕೆ ಹಾಕಿ ಅವರು ಆರ್.ಅನಂತಮೂರ್ತಿ-ಯು ಆಗುತ್ತಾರೆಯೇ? ಅಥವಾ ಅಂತ್ಯನಿಷ್ಟೂರಕ್ಕಿಂತ ಆದಿ ನಿಷ್ಟೂರವೇ ವಾಸಿಯೆಂದು ಹಳೇ ಹೆಸರನ್ನೇ ಉಳಿಸಿಕೊಳ್ಳುವರೇ? "

ಅದಕ್ಕೆ ನಾವು ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾಗ ನಿಮ್ಮ ಈ ಭ್ರೇಖಿಂಘ್ ನ್ಯೂಸೆ(ನ್ಸ್) ಕಂಡಿತು. ಧನ್ಯವಾದಗಳು. ಇದರಿಂದ ಯುಆರ್‍ಎ, ನಾಡಿಗ್ (ಸುಮತೀಂದ್ರ), ಜಿಕೆಜಿ ಮತ್ತು ನನ್ನ ಪ್ರಾಬ್ಲಂ ಮಾಯವಾಗಿದೆ!

ಅಂದಹಾಗೆ ಮುಂದಿನ ಬಾರಿ ಕಾವೇರಿ ವಿವಾದವೆದಾಗ ನಾಮನಕ್ಷತ್ರ ಪ್ರಕಾರ ಆ ನೀರು "ತೀರ್ಥಹಳ್ಳಿ ವಿ.೨.೦" ಗೇ ಬರಬೇಕೆಂದು ನಾವು ವಾದಿಸಬಹುದು. ತಮಿಳುನಾಡು ಕರ್ನಾಟಕದ ನಡುವಿನ ವಾಗ್ವಾದವನ್ನು ಇನ್ನು ಮುಂದೆ ಯುಯು ಐಐ (ತು ತು ಮೈಮೈ ಅನ್ನುವ ರೀತಿಯಲ್ಲಿ) ಪುನರ್ನಾಮಕರಣ ಮಾಡುವ ಕರೆಯನ್ನೂ ಅನಂತಮೂರ್ತಿ ಕೊಟ್ಟಿದ್ದಾರೆಂಬ ಭ್ರೇಖಿಂಘ್ ನ್ಯೂಸೆ(ನ್ಸ್) ನಿಮ್ಮ ಪತ್ರಿಕೆಗೆ ಸಿಗದಿದ್ದದ್ದು "ಮಜಾ" ಮಾಡುತ್ತಿರುವ ನಿಮಗೆ ಸರಿಯಾದ ಶಾಸ್ತಿ (ರ ಒತ್ತು ಇಲ್ಲವೆನ್ನುವುದನ್ನು ಗಮನಿಸಿ) ಆದಂತಾಗಿದೆ.

ಮಾರುತೀ...
[ಅ]ವ್ಯವಸ್ಥಾಪಕ ಸಂಪಾದಕ, ಸಜಾವಾಣಿ.

March 22, 2006 4:49 AM  

Post a Comment

Links to this post:

Create a Link

<< Home