ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, January 23, 2006

ಶಾಸ್ತ್ರಿ ದಿಗ್ಭ್ರಾಂತಿ


ಮುಂಬೈ, ಜನವರಿ ೨೩, ೨೦೦೬: ತಮಿಳರು ೬ ವರ್ಷಗಳ ಸತತ ಲಾಬಿ ನಡೆಸಿ ಈ ಸ್ಥಾನ-ಮಾನ ಪಡೆದುಕೊಂಡದ್ದಾಗಿದೆ. ಈ ಕುರಿತು ಕನ್ನಡದ ಪತ್ರಿಕೆಗಳಲ್ಲಿ ಬಿಸಿ ಚರ್ಚೆ ನಡೆಯುತ್ತಲೂ ಇದೆ. ಕನ್ನಡ ಸಾಹಿತ್ಯದ ದಿಗ್ಗಜಗಳೆನಿಸಿಕೊಂಡವರು ಮದಗಜಗಳಂತೆ ಹೊಡೆದಾಡಿದ್ದೂ ಆಗಿದೆ. ಆದರೆ, ಇಷ್ಟೆಲ್ಲಾ ನಡೆಯುತ್ತಿದ್ದರೂ, ರವಿ ಶಾಸ್ತ್ರಿ ಮಾತ್ರ ನಿರ್ಲಿಪ್ತ.

"ಕನ್ನಡ ಮತ್ತು ತಮಿಳು, ಇವೆರಡರಲ್ಲಿ ಯಾವೊಂದೂ ತಮ್ಮ ಭಾಷೆಯಲ್ಲ" ಎಂದ ಶಾಸ್ತ್ರಿಯವರು, ತಮಿಳಿಗೆ "ಶಾಸ್ತ್ರಿಯ ಭಾಷೆ" ಸ್ಥಾನಮಾನ ದೊರಕಿರುವುದು ತಮಗೆ ತಿಳಿದೇ ಇಲ್ಲ ಮತ್ತು ಕನ್ನಡದಲ್ಲಿ ಈ ಕುರಿತು ಬಿಸಿ ಚರ್ಚೆಯಾಗುತ್ತಿರುವುದು ತಿಳಿದು ತಮಗೆ ಸಂಪೂರ್ಣ ದಿಗ್ಭ್ರಾಂತಿಯಾಗಿದೆ ಎಂದರು.

ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಇತರೆ ಪತ್ರಿಕೆಗಳು ತಮ್ಮನ್ನು ಸಂಪರ್ಕಿಸದಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, "ಈ ವಿಷಯದ ಕುರಿತು ನನ್ನನ್ನು ಸಂಪರ್ಕಿಸಿದ ಪ್ರಥಮ ಪತ್ರಿಕೆ ಮಜಾವಾಣಿ" ಎಂದು ನಮ್ಮ ಪತ್ರಿಕೆಯನ್ನು ಪ್ರಶಂಸಿದರು.

1 Comments:

Anonymous Anonymous said...

ನೀವು ಕೇವಲ ರವಿ ಶಾಸ್ತ್ರಿಯವರನ್ನು ಸಂದರ್ಶಿಸಿದ್ದು ಅಖಿಲ ಕರ್ನಾಟಕ ವಿನಿವಿಂಕ್ ಟೋಪಿಧಾರರ ಸಂಘದ ಸದಸ್ಯರಿಗೆ ಕೋಪ ತರಿಸಿದೆ. ವಿನಿವಿಂಕ್ ಶಾಸ್ತ್ರಿಯವರನ್ನು ಕೂಡ ಸಂದರ್ಶಿಸಬೇಕಿತ್ತು ಎಂದು ಕೆಲವರು ದೂರುವುದನ್ನು ನಾನು ಇಂದು ಸಜ್ಜನರಾವ್ ಸರ್ಕಲ್‌ನಲ್ಲಿ ಕೇಳಿದೆ. ಬಹುಶಃ ನಿಮ್ಮ ವರದಿಗಾರ ವಿನಿವಿಂಕ್ ಶಾಸ್ತ್ರಿಯವರ ಸಂದರ್ಶನಕ್ಕೆ ಕೇಂದ್ರ ಕಾರಾಗೃಹದವರ ಅಪ್ಪಣೆಗೆ ಕಾಯುತ್ತಿರಬೇಕು ಅಂದುಕೊಂಡಿದ್ದೇನೆ.

-ವಾಯುಪುತ್ರ

January 26, 2006 5:37 AM  

Post a Comment

Links to this post:

Create a Link

<< Home