ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, January 15, 2006

ಮಜಾವಾಣಿ ಸಂಪಾದಕೀಯ




ವೆಲ್‍ಡನ್ ಧರ್ಮಸಿಂಗ್!

"ÈæÅésÚ«é ¨ÚÈÚß%ÒMVé @M¥ÚÃ, ¬ÈÚáé VÚMmé H«é ÔæàÞVæë~. «ÛÅéQ ^ÚÅæàÞ ÈÚáÛ}Úß …ÂÞÁÚÅÛÇ...' ಎಂದು ಮುಖ್ಯಮಂತ್ರಿ ಧರ್ಮಸಿಂಗ್‍ರವರು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರೆಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಕನ್ನಡ ಪ್ರಭ ದಿನಪತ್ರಿಕೆಯ ಜನವರಿ ೧೬, ೨೦೦೬ ಭಾನುವಾರದ ಸಂಚಿಕೆಯಲ್ಲಿ ವರದಿಯಾಗಿದೆ.

ಕರ್ನಾಟಕದ ಸುದ್ದಿ ಮಾಧ್ಯಮಗಳಿಗೆ ಮುಖ್ಯಮಂತ್ರಿ ಧರ್ಮಸಿಂಗ್‍ರವರು ಮಾಡಿರುವ ಮನವಿ ಅತ್ಯಂತ ಸೂಕ್ತವೂ, ವೈಜ್ನಾನಿಕವೂ ಆಗಿದೆ.

ನಮ್ಮ ಪತ್ರಿಕೆ ಉಳಿದ ಪತ್ರಿಕೆಗಳಂತಲ್ಲ. ಪ್ರಜೆಗಳು, ಓದುಗರು, ವಸ್ತುನಿಷ್ಠತೆ ಇತ್ಯಾದಿ ಪಟ್ಟಭದ್ರ ಹಿತಾಸಕ್ತಿಗಳ ಶಿಫ಼ಾರಸು, ಆಮಿಶ, ಬೆದರಿಕೆಗಳಿಗೆ ತಲೆಬಾಗುವಂತಹ ಪತ್ರಿಕೆಯಂತೂ ನಮ್ಮದಲ್ಲವೇ ಅಲ್ಲ. ಪ್ರತ್ಯಕ್ಷ ಕಂಡಿದ್ದನ್ನೂ ಪ್ರಮಾಣಿಸಿ ನೋಡುವ ಪರಿಪಾಠ ಬೆಳೆಸಿಕೊಂಡಂತಹವರು ನಾವು. ಧರ್ಮಸಿಂಗ್ ಹೇಳಿಕೆಯ ಹಿಂದಿನ ಸತ್ಯಾಸತ್ಯತೆಯನ್ನು ವೈಜ್ನಾನಿಕವಾಗಿ ಪರಿಶೀಲಿಸಿ ಅಂತಿಮ ನಿರ್ಧಾರಕ್ಕೆ ಬಂದಹಂತಹ ಏಕೈಕ ಪತ್ರಿಕೆಯೆಂದರೆ ಮಜಾವಾಣಿ!

"ವೆಲ್‍ಡನ್ ಧರ್ಮಸಿಂಗ್" ವಾಕ್ಯವನ್ನು ಬರೆಯುವ ಮುನ್ನ ಒಂದು ಗಂಟನ್ನು ಮೇಜಿನ ಮೇಲೆ ಇಟ್ಟು, ಅನಂತರ ಆ ವಾಕ್ಯವನ್ನು ಬರೆದೆವು. ಮುಖ್ಯಮಂತ್ರಿಯವರು ಹೇಳಿದಂತೆ, ಗಂಟು ಏನೂ ಹೋಗಲಿಲ್ಲ. ಆಶ್ಚರ್ಯವೆಂಬಂತೆ, ಆ ಗಂಟಿನಲ್ಲಿದ್ದ ಹಳೆಯ ವಸ್ತ್ರಗಳೂ ಅಲ್ಲಿಯೇ ಇದ್ದವು. ಇಂತಹ ಅಪ್ಪಟ ಸತ್ಯವನ್ನು ಹೊರತಂದಂತಹ ಧರಂಸಿಂಗ್ ಬಗ್ಗೆ ಕನ್ನಡದ ಉಳಿದ ಪತ್ರಿಕೆಗಳು ನಾಲ್ಕಾರು ಒಳ್ಳೆಯ ಮಾತನ್ನು ಬರೆಯಲು ಹಿಂಜರಿಯುತ್ತಿರುವುದು ಖಂಡನೀಯ. ಈ ಪತ್ರಿಕೆಗಳ ಇಂತಹ ಮನೋಭಾವನೆಗೆ ಮುಖ್ಯ ಕಾರಣವೆಂದರೆ "ವಸ್ತು ನಿಷ್ಠ ವರದಿ" ಎಂಬ ಅಸಹ್ಯ ತಾತ್ವಿಕ ಕನ್ನಡಕ. ನಮ್ಮ ವೈಜ್ನಾನಿಕ ಪ್ರಯೋಗದ ನಂತರವಾದರೂ, ಈ ಪತ್ರಿಕೆಗಳು, ಪ್ರತಿ ವಿಷಯವನ್ನೂ "ವಸ್ತುನಿಷ್ಠತೆಯ" ದೃಷ್ಟಿಯಿಂದ ನೋಡುವ ದುರಭ್ಯಾಸವನ್ನು ಬಿಟ್ಟಾರೆಂಬ ಆಶಯ ನಮ್ಮದು.

ನಾವು ಈ ಸಂಪಾದಕೀಯ ಬರೆಯುವ ಪ್ರಯತ್ನದಲ್ಲಿದ್ದಾಗ, ನಮ್ಮನ್ನೂ ತಪ್ಪು ದಾರಿಗೆ ಎಳೆಯುವ ಹಲವು ಪ್ರಯತ್ನಗಳು ನಡೆದವು. ಉದಾಹರಣೆಗೆ, ಧರಂಸಿಂಗರ "ಚಲೋ ಮಾತು" ಪದಗಳನ್ನು ತಿರುಚಿ, ಹಾಗೆಂದರೆ, "ಮುಖ್ಯಮಂತ್ರಿಗಳು ಹೊರ ಹೋಗುವ ವಿಚಾರ" ಎಂದು ಹಲವು ಕಾರ್ಯನಿರತ ಪತ್ರಿಕಾಕರ್ತರು ನಮ್ಮನ್ನು ನಂಬಿಸಿದರು. ಆದರೆ, ಹಲವು ಗಂಟೆಗಳ ಅಧ್ಯಯನದ ನಂತರ "ಚಲೋ" ಎಂದರೆ "ಒಳ್ಳೆಯ" ಎಂಬ ಅರ್ಥ ನಮ್ಮ ಗಮನಕ್ಕೆ ಬಂತು.

ಮುಖ್ಯಮಂತ್ರಿಗಳು ತಮ್ಮ ಮನವಿಯಲ್ಲಿ "ಯೋಜನಾ ಗಾತ್ರ ಹೆಚ್ಚಿರುವುದು ಸರ್ಕಾರದ ಸಾಧನೆ" ಎಂದಿದ್ದಾರೆ. ನಿಗರ್ವಿಗಳೂ, ವಿನಯವಂತರೂ ಆದ ಅವರು ತಮ್ಮ ವೈಯುಕ್ತಿಕ ಸಾಧನೆಯ ಕುರಿತು ಬೇಕೆಂದೇ ಏನನ್ನೂ ಹೇಳಿಲ್ಲ. ಯೋಜನೆಯ ಗಾತ್ರದ ಹೆಚ್ಚಿಗೆ ಸರ್ಕಾರದ ಸಾಧನೆಯೇ ಕಾರಣವಾದರೆ, ಮುಖ್ಯಮಂತ್ರಿಗಳ ಗಾತ್ರ ಹೆಚ್ಚಿರುವುದಕ್ಕೆ, ಧರ್ಮಸಿಂಗರ ವೈಯುಕ್ತಿಕ ಸಾಧನೆಯೇ ಕಾರಣ. ವೆಲ್‍ಡನ್ ಧರ್ಮಸಿಂಗ್!

5 Comments:

Anonymous ಶ್ರೀಕಾಂತ ಮಿಶ್ರಿಕೋಟಿ said...

ನಿಮ್ಮ ಎಲ್ಲಲೇಖನ ಓದಿದೆ , ತುಂಬ ಚೆನ್ನಾಗಿವೆ . ಬಹಳ ದಿನಗಳ ನಂತರ ಒಳ್ಳೆ ಹಾಸ್ಯ ಓದಿ ನಕ್ಕೆ.

January 16, 2006 2:17 AM  
Anonymous Anonymous said...

ಹೆಹ್ಹೆ ಹೆಸರಿಗೆ ತಕ್ಕಂತೆ ತುಂಬಾ ಸ್ವಾರಸ್ಯಪೂರ್ಣ ಪತ್ರಿಕೆ ಇದು. ಇದೇ ರೀತಿ ಮುಂದುವರೀಲಿ ಗುರು

January 16, 2006 10:30 AM  
Blogger V.V. said...

"ಒಳ್ಳೆ ಹಾಸ್ಯ", "ಹೆಹ್ಹೆ", "ತುಂಬಾ ಸ್ವಾರಸ್ಯಪೂರ್ಣ" ಎಂಬ ಆರೋಪಗಳಿಗೆ ತಲೆಬಾಗುವಂತಹ ಪತ್ರಿಕೆ ನಮ್ಮದಲ್ಲ. ಪತ್ರಿಕೋದ್ಯಮದ ವಿರುದ್ಢ ನಾವು ಹೂಡಿರುವ ಈ ಮಹಾನ್ ಯುದ್ಢದಲ್ಲಿ ವೀರಸ್ವರ್ಗವನ್ನಾದರೂ ಸೇರಲು ನಾವು ಸಿದ್ಢ. ನಮ್ಮನ್ನು ನೋಡಿ ನಕ್ಕು, ನಮ್ಮ ಲಕ್ಷ್ಯದಿಂದ ವಿಚಲಿತರಾಗಿ ಮಾಡುವವರು, ಗಾಂಧೀಜಿಯವರ ಈ ಮಾತುಗಳನ್ನು ನೆನಪಿನಲ್ಲಿಡಬೇಕು: "First they ignore you, then they laugh at you, then they fight you, then you win "

January 16, 2006 12:44 PM  
Blogger Sathish-Hirehalli said...

ಅಣ್ಣಾ, ಎಲ್ಲಾ ಲೆಖನಗಳನ್ನ ಸಕತ್ತಾಗಿ ಬರೆದಿದ್ದೀರಾ ದಯವಿಟ್ಟು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯಿರಿ, ನೆಟ್ ನಲ್ಲಿ ಅದೇ ಹಳಸಲು ಜೋಕ್ಸ್ ಓದಿ ಓದಿ ಬೋರಾಗಿತ್ತು, ಈಗ ಎಷ್ಟೋ ಸಮಾದಾನ ಆಯಿತು...

February 20, 2006 6:16 AM  
Blogger V.V. said...

ಸತೀಶ್‍ರವರೆ,

"ಅದೇ ಹಳಸಲು ಜೋಕ್ಸ್" ನಿಮ್ಮಂತೆ ನಮಗೂ ಇಷ್ಟ ಇಲ್ಲ. ಆದ್ದರಿಂದ ಬೇರೆ ಹಳಸಲು ಜೋಕ್ಸ್ ಹಾಕಲು ಖಂಡಿತಾ ಪ್ರಯತ್ನಿಸುತ್ತೇವೆ.

ವಂದನೆಗಳೊಂದಿಗೆ,

ವಿ.ವಿ.

March 15, 2006 4:49 PM  

Post a Comment

Links to this post:

Create a Link

<< Home