ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, November 19, 2005

"ತುಂಬಲಾಗದ ನಷ್ಟ" - ಯು.ಆರ್.ಎ. ಕಂಬನಿಮಜಾವಾಣಿ ಹರಿಶ್ಚಂದ್ರ ಘಾಟ್ ಬ್ಯೂರೋ ವರದಿ
ವಿಲಿಯಂ ಶೇಕ್ಸ್‍ಪಿಯರ್ ಮರಣಕ್ಕೆ ತಮ್ಮ ಖೇದವನ್ನು ವ್ಯಕ್ತಪಡಿಸಿದ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತ ಮೂರ್ತಿಯವರು, ಆತನ ಮರಣದಿಂದ ಕನ್ನಡಕ್ಕೆ ಅನುವಾದಿತ ಸಾಹಿತ್ಯಕ್ಕೆ ಮಾತ್ರ ಅಲ್ಲ, ಇಡೀ ಜಾಗತಿಕ ಸಾಹಿತ್ಯರಂಗಕ್ಕೇ ತುಂಬಲಾರದ ನಷ್ಟವಾಗಿದೆಯೆಂದರು.

ತಮಗೂ ಶೇಕ್ಸ್‍ಪಿಯರ್‍ಗೂ ತಾತ್ವಿಕ ಭಿನ್ನಾಭಿಪ್ರಾಯಗಳಿವೆಯೆಂಬುದನ್ನು ಅಲ್ಲಗೆಳೆದ ಅನಂತಮೂರ್ತಿಯವರು, ವಿಷಾದ ವ್ಯಕ್ತಪಡಿಸಲು ತಡವಾಗಿದ್ದಕ್ಕೆ ಆ ಮಹಾನ್ ಸಾಹಿತಿಯ ನಿಧನವಾದಾಗ ತಾವು ಯೂರೋಪಿನಲ್ಲಿ ಇರದಿದ್ದುದೇ ಕಾರಣವೆಂದು ಸ್ಪಷ್ಟಪಡಿಸಿದರು.

"ಪಿಜ್ಜಾ ಸಾಹಿತಿ" ಚಂಪಾ ಟೀಕೆ: ಅನಂತಮೂರ್ತಿಯವರ ಕಂಬನಿಯನ್ನು ಕಟುವಾಗಿ ಟೀಕಿಸಿದ ಖ್ಯಾತ ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರು, ಕನ್ನಾಡದ ಮಹಾನ್ ಸಾಹಿತಿ ಮುದ್ದಣ, ಕುಮಾರವ್ಯಾಸ ಮುಂತಾದವರು ನಿಧನರಾದಾಗ "ಈ ಪಿಜ್ಜಾ ಸಾಹಿತಿ ಎಲ್ಲಿದ್ದರು?" ಎಂದು ಪ್ರಶ್ನಿಸಿದ್ದಾರೆ.

Labels: ,

2 Comments:

Anonymous Anonymous said...

ಇದು ಇನ್ನೂರೈವತ್ತು ವರ್ಷಗಳ ಹಿಂದೆ ಮಜಾವಾಣಿ ಎಂಬ ಕಾಲಮ್ಮಿನಲ್ಲಿ ಬರಬೇಕಿತ್ತಲ್ಲವೇ? ಅಥವಾ ಮುನ್ನೂರೈವತ್ತು ವರ್ಷದ ನಂತರ ಎಂಬ ಹೊಸ ಕಾಲಮ್ಮಿನಲ್ಲಿ? ಯಾಕೆಂದರೆ ಶೇಕ್ಸ್‌ಪಿಯರೂ ಜ್ಞಾನಪೀಠಿಗಳೂ ಕಾಲಾತೀತರಲ್ಲವೇ? -ನಾಗಣ್ಣ

January 17, 2006 12:06 AM  
Blogger V.V. said...

ನಾಗಣ್ಣ-ರವರೆ,

ನೀವೆನ್ನುವ ಮಾತು ಪೂರ್ಣ ಸತ್ಯ. ಶೇಕ್ಸ್‌ಪಿಯರ್, ಜ್ನಾನಪೀಠಿ ಈರ್ವರೂ ಕಾಲಾತೀತರೇ. ಅದರೆ ನಮ್ಮ ಪತ್ರಿಕೆ ಕಾಲದಂತಹ ಪ್ರತಿಕ್ಷಣಕ್ಕೂ ಬದಲಾಗುವ ಗೋಸುಂಬೆಗಳನ್ನು ಮಾನ್ಯಮಾಡುವುದಿಲ್ಲ. ಹೀಗಾಗಿ, ಇತರೆ ಪತ್ರಿಕೆಗಳಂತೆ, ನಾವೂ ಸಹ ತಪ್ಪು ನಮ್ಮದೆಂದು ತಿಳಿದಿದ್ದರೂ ತಿದ್ದಿಕೊಳ್ಳಲು ನಿರಾಕರಿಸುತ್ತೇವೆ.

ವಂದನೆಗಳೊಂದಿಗೆ,

ಸಂಪಾದಕ

January 18, 2006 5:31 PM  

Post a Comment

Links to this post:

Create a Link

<< Home